ಆರ್ಥಿಕ ಸಮಾನತೆ ತರುವುದು ಅಗತ್ಯ :  ಶಿವಾಚಾರ್ಯ ಸ್ವಾಮೀಜಿ

ಆರ್ಥಿಕ ಸಮಾನತೆ ತರುವುದು ಅಗತ್ಯ :  ಶಿವಾಚಾರ್ಯ ಸ್ವಾಮೀಜಿ

ಬಾಗಲಕೋಟೆ, ಡಿ.4 : ದೇಶದಲ್ಲಿ ಲಿಂಗ,ಜಾತಿ,ಮತ ಮತ್ತು ವಯಸ್ಸಿನ ಸಮಾನತೆ ತರಬೇಕು ಎಂದು ಬಯಸುತ್ತಾರೆ ಆದರೆ ಅದರ ಜತೆಗೆ ಆರ್ಥಿಕ ಸಮಾನತೆ ತರುವುದು ಅತಿ ಅವಶ್ಯವಾಗಿದೆ ಶ್ರೀಶೈಲಂ ಮಲ್ಲಿಕಾರ್ಜುನ ದೇವಸ್ಥಾನದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಹೇಳಿದರು.

ನಗರದ ಪ್ರತಿಷ್ಠಿತ ಬಸವೇಶ್ವರ ಸಹಕಾರಿ ಬ್ಯಾಂಕಿನ ಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಜಾತಿ ಸಮಾನತೆ,ಲಿಂಗ ಸಮಾನತೆ ತರಬೇಕು ಎಂದು ಇತ್ತೀಚಿಗೆ ಅನೇಕ ವಿಚಾರಗಳನ್ನು ಕೇಳುತ್ತಿದ್ದೇವೆ ಆದರೆ ಆರ್ಥಿಕ ಸಮಾನತೆಯನ್ನು ತರುವ ಕುರಿತು ಗಂಭೀರ ಚರ್ಚೆ ನಡೆಯಬೇಕಾಗಿದೆ ಎಂದರು.
ಆರ್ಥಿಕ ಸಮಾನತೆ ತರಬೇಕಾದರೆ ಬ್ಯಾಂಕುಗಳ ಹಾಗೂ ಸಹಕಾರ ಕ್ಷೇತ್ರದ ಪಾತ್ರ ಮುಖ್ಯವಾಗಿದೆ.ದುಡ್ಡು ಇಲ್ಲದವರಿಗೆ ಹಾಗೂ ಉದ್ಯಮ ಸ್ಥಾಪಿಸಲು ಹಾಗೂ ಸ್ವಾವಲಂಬನೆ ಬದುಕು ಸಾಗಿಸಲು ಬ್ಯಾಂಕುಗಳು ನೀಡುವ ಹಣದಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಮಾಡುವ ಬ್ಯಾಂಕುಗಳು ಆರ್ಥಿಕ ಸಮಾನತೆ ತರಲು ಸಾಧ್ಯವಿದೆ ಎಂದು ತಿಳಿಸಿದರು.
ಮನುಷ್ಯನಿಗೆ ಸಹಕಾರದ ಗುಣಬೇಕಾಗಿದೆ, ಪ್ರಕೃತಿ ರಂಗದಲ್ಲಿಯೂ ಸಹಕಾರ ಇದೆ. ಪ್ರತಿಯೊಬ್ಬರು ಸಹಕಾರದ ತತ್ವದಡಿ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಗದಗದ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮೀಜಿಯವರು ಮಾತನಾಡಿ,ಸಹಕಾರಿ ರಂಗದಲ್ಲಿ ಬ್ಯಾಂಕುಗಳು ಅಭಿವೃದ್ಧಿ ಹೊಂದಬೇಕಾದರೆ ಸರಿಯಾದ ವ್ಯಕ್ತಿ ಹಾಗೂ ಪ್ರಾಮಾಣಿಕತೆ ಹೊಂದಿದ ಮನಸ್ಸುಗಳು ಚುಕ್ಕಾಣೆಯನ್ನು ಹಿಡಿಯಬೇಕು.ಆ ಕೆಲಸವನ್ನು ಬಸವೇಶ್ವರ ಸಹಕಾರಿ ಬ್ಯಾಂಕಿನಲ್ಲಿ ಮಾಡಲಾಗಿದೆ ಎಂದು ತಿಳಿಸಿದರು.
ಕೆಲವೊಂದು ಜನ ದಿಡೀರಣೆ ಶ್ರೀಮಂತವಾಗಬೇಕು ಎಂಬ ಭಾವನೆ ಹೊಂದುತ್ತಾರೆ ಆದರೆ ಮಾಡುವ ಕಾಯಕದಲ್ಲಿ ನಿಷ್ಠೆಯಿಂದ ಮಾಡಿದರೆ ಆರ್ಥಿಕವಾಗಿ ಸಮೃದ್ಧವಾಗಬಹುದು ಎಂದು ತಿಳಿಸಿದರು.
ನಗರದ ಪ್ರತಿಷ್ಠಿತ ಬಸವೇಶ್ವರ ಸಹಕಾರಿ ಬ್ಯಾಂಕಿನ ಶತಮಾನೋತ್ಸವ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರುಬಸವೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಪ್ರಕಾಶ ತಪಶೆಟ್ಟಿಯವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.