ಡಿ.6 ರಂದು ಮುಚಖಂಡಿ ವೀರಭದ್ರೇಶ್ವರ ಜಾತ್ರೆ 

ಡಿ.6 ರಂದು ಮುಚಖಂಡಿ ವೀರಭದ್ರೇಶ್ವರ ಜಾತ್ರೆ 

ಬಾಗಲಕೋಟೆ, ಡಿ.1: ತಾಲ್ಲೂಕಿನ ಸುಕ್ಷೇತ್ರ ಮುಚಖಂಡಿ ವೀರಭದ್ರೇಶ್ವರ ಕಾರ್ತಿಕೋತ್ಸವ ಅಂಗವಾಗಿ ಇದೇ 6ರಂದು ಜಾತ್ರಾ ಮಹೋತ್ಸವ ಜರುಗಲಿದೆ.

ಇದೇ ಡಿ.1ರಿಂದ ಸಂಜೆ 7 ಗಂಟೆಗೆ ಪ್ರತಿದಿನ ಚಿಕ್ಕ ರಥೋತ್ಸವ ಜರುಗಲಿದೆ.ಡಿ.3ರಂದು ಬೆಳಿಗ್ಗೆ 6 ಗಂಟೆಗೆ ರುದ್ರಾಭಿಷೇಕ,ಅಯ್ಯಾಚಾರ ಮತ್ತು ಶಿವದೀಕ್ಷೆ ನಂತರ ಅನ್ನಸಂತರ್ಪಣೆ ನಡೆಯಲಿದೆ.ಈ ಕಾರ್ಯಕ್ರಮದ ಸಾನಿಧ್ಯವನ್ನು ಗುಳೇದಗುಡ್ಡ ಮರಡಿಮಠದ ಕಾಡಸಿದ್ದೇಶ್ವರ ಸ್ವಾಮೀಜಿಯವರು ಹಾಗೂ ಚರಂತಿಮಠದ ಪ್ರಭುಸ್ವಾಮೀಜಿಯವರು ವಹಿಸಲಿದ್ದಾರೆ.

ದಿ.5ರಂದು ದೊಡ್ಡ ರಥೋತ್ಸವ ಹಾಹಾಗೂ ಕಾರ್ತಿಕೋತ್ಸವ ಒಳ್ಳೆಯ ವಿಜೃಂಭಣೆಯಿಂದ ನಡೆಯಲಿದೆ.ನಂತರ ರಾತ್ರಿ 10.30ಕ್ಕೆ ನಾಟಕ ಪ್ರದರ್ಶನಗೊಳ್ಳಲಿದೆ.ಡಿ.6ರಂದು ಸುಪ್ರಸಿದ್ದ ಪೈಲವಾನರ ಕುಸ್ತಿಗಳು ಸಂಜೆ 4ಗಂಟೆಗೆ ಜರುಗಲಿವೆ. ಅಯ್ಯಾಚಾರ ಮಾಡಿಸಿಕೊಳ್ಳುವರು ಮುಚಖಂಡಿ ವೀರಭದ್ರೇಶ್ವರ ಜೀಣೋದ್ಧಾರ ಕಮೀಟಿ,ಬಾಗಲಕೋಟೆಯ ಗುರುಬಸವ ಕ್ಲಾಥ ಸ್ಟೋರ್ಸ ಇವರಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.