ಸಚಿವ ಪ್ರಮೋದ್ ಮದ್ವರಾಜ್ ವಿರುದ್ಧ ಎಫ್ ಐ ಆರ್

ಸಚಿವ ಪ್ರಮೋದ್ ಮದ್ವರಾಜ್ ವಿರುದ್ಧ ಎಫ್ ಐ ಆರ್

ಉಡುಪಿ ಏಪ್ರಿಲ್ 8: ಸಚಿವ ಪ್ರಮೋದ್ ಮದ್ವರಾಜ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ, ಆರೋಪದಲ್ಲಿ ಎಫ್ ಐ ಆರ್ ದಾಖಲಾಗಿದೆ.

ಯುವ ಸಬಲೀಕರಣ ಕ್ರೀಡಾ ಇಲಾಖೆ ಹಾಗು ಮೀನುಗಾರಿಕೆ ಸಚಿವ ಪ್ರಮೋದ್ ಮದ್ವರಾಜ್ ರವರು ಕ್ರೀಡಾಪಟು ಗುರು ರಾಜ್ ರವರಿಗೆ ಕ್ರೀಡಾ ಇಲಾಖೆ ಅವರಿಂದ 25 ಲಕ್ಷ ಹಣ ಮತ್ತುಸರ್ಕಾರಿ ನೌಕರಿಯನ್ನು ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ್ದರು.

ಆಸ್ಟ್ರೇಲಿಯಾದ ಗೋಲ್ಡ್ ಪೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾ ಪಟು ಗುರು ರಾಜ್ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ತೆಗೆದಿದ್ದರು. ಗುರುರಾಜ್ ಉಡುಪಿ ಜಿಲ್ಲೆಯ ಕುಂದಾಪುರದ ಮೂಲದವರು.

ಕ್ರೀಡಾ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಅವರು 25  ಲಕ್ಷ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಣೆ ಮಾಡಿದ್ದರು. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. 

ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು ಯಾವುದೇ ಪ್ರಚಾರ ಕಾರ್ಯಗಳಿಗೆ ಅವಕಾಶವಿಲ್ಲ. ಕ್ರೀಡಾ ನೀತಿಯಲ್ಲಿ ಉಲ್ಲೇಖವಿರದೆ ಗುರುರಾಜ್ ಗೆ ಬಹುಮಾನ ಮಾಡಿದ ಕಾರಣಕ್ಕೆ ಎಫ್ ಐ ಆರ್ ದಾಖಲು ಮಾಡಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಪ್ರಮೋದ್ ಮದ್ವರಾಜ್ ರವರು ನಾನು ಕ್ರೀಡಾ ನೀತಿಯಲ್ಲಿ ಘೋಷಣೆ ನೀಡಿದ ವಿಚಾರವನ್ನು ಮುಂದಿಟ್ಟಿದ್ದು ಯಾವುದೇ ಪ್ರಚಾರ ಕೆಲಸ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.