ಜನವರಿ 22 ರಿಂದ ಸೇನಾ ಭರ್ತಿ ರ್ಯಾಲಿ

ಜನವರಿ 22 ರಿಂದ ಸೇನಾ ಭರ್ತಿ ರ್ಯಾಲಿ

ಬಾಗಲಕೋಟೆ, ಡಿ.25: ಬೆಂಗಳೂರಿನ 106 ಇನ್ಪೆಂಟರಿ ಬಟಾಲಿಯನ್ ಪ್ಯಾರಾ ಆಶ್ರಯದಲ್ಲಿ 2018 ಜನವರಿ 22 ರಿಂದ 29 ರವರೆಗೆ ಸೈನಿಕ ಸಾಮಾನ್ಯ ಕರ್ತವ್ಯ, ಸೈನಿಕ ಟ್ರೇಡ್ಸ್‍ಮೆನ್ ಹುದ್ದೆಗಳಿಗೆ ಸೇನಾ ಭರ್ತಿ ನಡೆಯಲಿದೆ.
    ಸೈನಿಕ ಸಾಮಾನ್ಯ ಕರ್ತವ್ಯ ಹುದ್ದೆಗೆ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.45 ಅಂಕಗಳೊಂದಿಗೆ ಪಾಸಾಗಿ ಪ್ರತಿ ವಿಷಯದಲ್ಲಿ ಅಗ್ರೀಗೇಟ್ ಶೇ.33 ಅಂಕಗಳನ್ನು ಹೊಂದಿರಬೇಕು. ಸೈನಿಕ ಟ್ರೇಡ್ಸಮೆನ್ ಹುದ್ದೆಗೆ ಎಸ್‍ಎಸ್‍ಎಲ್‍ಸಿಯಲ್ಲಿ ಕನಿಷ್ಠ ಅಂಕಗಳೊಂದಿಗೆ ಪಾಸಾಗಿರಬೇಕು. ನೇಮಕಾತಿ ರ್ಯಾಲಿಯಲ್ಲಿ ಕೊಪ್ಪಳ ಹಾಗೂ ಬಾಗಲಕೋಟ ಜಿಲ್ಲೆಯಲ್ಲಿ ನೆಲೆಸಿರುವ ನಿರುದ್ಯೋಗಿ ಯುವಕರು ಭಾಗವಹಿಸಿ ರ್ಯಾಲಿಯ ಸದುಪಯೋಗವನ್ನು ಪಡೆಯುವಂತೆ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಾಗಲಕೋಟ ಪ್ರಕಟಣೆಯಲ್ಲಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂಸಂ.080-23333065ಗೆ ಸಂಪರ್ಕಿಸಬಹುದಾಗಿದೆ.