100 ದಲಿತ ಕುಟುಂಬಗಳಿಗೆ ಸಾಮೂಹಿಕ ಬಹಿಷ್ಕಾರ: ಹಬ್ಬದ ಸಂಭ್ರಮದ ಮಧ್ಯೆ ಸಮಾಜ ತಲೆತಗ್ಗಿಸುವ ಕಾರ್ಯ

100 ದಲಿತ ಕುಟುಂಬಗಳಿಗೆ ಸಾಮೂಹಿಕ ಬಹಿಷ್ಕಾರ: ಹಬ್ಬದ ಸಂಭ್ರಮದ ಮಧ್ಯೆ ಸಮಾಜ ತಲೆತಗ್ಗಿಸುವ ಕಾರ್ಯ

ವಿಜಯಪುರ(ಸೆ.30): ನಾಡಿನೆಲ್ಲೆಡೆ ನವರಾತ್ರಿ ಸಂಭ್ರಮವಿದ್ರೆ, ವಿಜಯಪುರದ  ಬಸವನಬಾಗೇವಾಡಿ  ತಾಲೂಕಿನ ಮಟ್ಯಾಳ ಗ್ರಾಮದ 100 ಕುಟುಂಬಗಳು ಮಾತ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ದಲಿತ ಕುಟುಂಬಗಳಿಗೆ ಸವರ್ಣಿಯರು ಬಹಿಷ್ಕಾರ ಹಾಕಿದ್ದಾರೆ.

ಮಟ್ಯಾಳ ಗ್ರಾಮದಲ್ಲಿನ ವೃತ್ತಕ್ಕೆ  ಬಸವೇಶ್ವರ, ಅಂಬೇಡ್ಕರ್ ಹಾಗೂ ಬುದ್ಧ ವೃತ್ತವೆಂದು ಘೋಷಿಸಲಾಗಿತ್ತು. ಆದರೆ ಆ ವೃತ್ತದಲ್ಲಿ ಕೇಸರಿ ಧ್ವಜ ಹಾರಿಸಿದ್ದಾರೆ. .ಇದನ್ನ ಪ್ರಶ್ನಿಸಿದ 100 ದಲಿತ ಕುಟುಂಬಗಳಿಗೆ  ಬಹಿಷ್ಕಾರದ ಶಿಕ್ಷೆ ನೀಡಿದ್ದಾರೆ. ದಿನಸಿ ಅಂಗಡಿಗೆ ಹೋಗುವಂತಿಲ್ಲ. ದೇವಸ್ಥಾನಕ್ಕೂ ಪ್ರವೇಶವಿಲ್ಲ. ಗಿರಣಿ, ಪಡಿತರ ಅಂಗಡಿಗೂ ನಿರ್ಬಂಧ ಹೇರಿದ್ದಾರೆ. ದಲಿತರ ಕೇರಿಗೆ  ವಿದ್ಯುತ್ ಸಂಪರ್ಕ ಕೂಡ ಕಡಿತಗೊಳಸಿದ್ದಾರಂತೆ. ಹೀಗಾಗೆ ನೊಂದ ದಲಿತರು ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.