ಮಂತ್ರಾಲಯ ಶ್ರೀಗಳ ಶೋಭಾಯಾತ್ರೆ : ಭಕ್ತರಲ್ಲಿಅಪರಿಮಿತಉತ್ಸಾಹ

ಮಂತ್ರಾಲಯ ಶ್ರೀಗಳ ಶೋಭಾಯಾತ್ರೆ : ಭಕ್ತರಲ್ಲಿಅಪರಿಮಿತಉತ್ಸಾಹ

ವಿಜಯಪುರ, 12: ಐತಿಹಾಸಿಕ ನಗರಕ್ಕೆ  ಪ್ರಪ್ರಥಮ ಬಾರಿಗೆಇಂದು ಬೆಳಿಗ್ಗೆ  ಆಗಮಿಸಿದ  ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ಭವ್ಯ ಶೋಭಾಯಾತ್ರೆಯ ಮೂಲಕ ಪ್ರಮುಖ ಬೀದಿಗಳಲ್ಲಿ ಸ್ವಾಗತಕೋರಲಾಯಿತು.
ಗಜಾರೂಢರಾಗಿದ್ದ ಶ್ರೀಗಳನ್ನು ಕಣ್ತುಂಬ ನೋಡಿ ಭಕ್ತಗಣತಮ್ಮ ಹರ್ಷೋಲ್ಹಾಸ ವ್ಯಕ್ತಪಡಿಸುವ ಮೂಲಕ ಜಯಘೋಷಕೂಗಿದ್ದು ಮುಗಿಲು ಮುಟ್ಟಿತು.
ತಾಳೆ ಮದ್ದಲೆ, ಡೊಳ್ಳು ವಾದನ ವಿವಿಧ ಬಗೆಯ ಸೇರಿದಂತೆ ವಾದ್ಯ ವೈಭವಗಳು, ಮಂತ್ರ ಪಠಿಸುತ್ತಿದ್ದ ವೈದಿಕ ವೃಂದ, ಮಹಿಳಾ ಮಂಡಳಿಗಳ ಕೋಲಾಟ, ಪುರುಷ ಭಜನಾ ಮಂಡಳಿಗಳ ಸುಶ್ರಾವ್ಯ ಸಂಗೀತ, ಅಶ್ವಾರೂಢರಾಗಿ ಕುಳಿತ ಯುವ ವಿಪ್ರರು, ಭಗವಾಧ್ವಜ ಹಿಡಿದುಕುಣಿದು ಕುಪ್ಪಳಿಸುತ್ತಿದ್ದ ಯುವ ಪಡೆ, ಗುರುಸಾರ್ವಭೌಮರಜಯಘೋಷ, ಶ್ರೀಗಳ ಜಯಘೋಷ, ಸಾಲಂಕೃತವಾಗಿದ್ದ ಸಾರೋಟಿನಲ್ಲಿ ವಿರಾಜಮಾನರಾಗಿದ್ದಗುರುಸಾರ್ವಭೌಮರ ಭಾವಚಿತ್ರ,  ಮೂರು ವಾಹನದಲ್ಲಿ ಗಮನಸೆಳೆಯುತ್ತಿದ್ದ ಪ್ರಾಣದೇವರ ಬೃಹದಾಕಾರದ ಭಾವಚಿತ್ರಗಳು ಶೋಭಾಯಾತ್ರೆಯ ಪ್ರಮುಖಆಕರ್ಷಣೆಯಾಗಿದ್ದವು.
ನಗರದ ದೀವಟಗೇರಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದಆರಂಭಗೊಂಡ ಈ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಬಿಡಿಈ ಸೋಸೈಟಿ ಬಾಲಕಿಯರ ಶಾಲೆ ತಲುಪಿತು.  ಸುಮಾರುಎರಡು ಗಂಟೆಗಳ ಕಾಲ ನಡೆದಈ  ಅಭೂತಪೂರ್ವ ಮೆರವಣಿಗೆ ಭಕ್ತರಲ್ಲಿಅಪರಿಮಿತಉತ್ಸಾಹತಂದಿತು.
ಶೋಭಾಯಾತ್ರೆಯಲ್ಲಿ ಗೋಪಾಲ ನಾಯಕ, ಡಾ.ಆರ್ ಜಿ ಮಂಗಲಗಿ,  ಅಶೋಕ ಕಾಳಗಿ,  ವಿ ಬಿ ಕುಲಕರ್ಣಿ, ಆರ್‍ಆರ್‍ಕುಲಕರ್ಣಿ,  ಸುಧೀಂದ್ರ ಗುನ್ಹಾಳಕರ,  ಮೋಹನ ಕೌತಾಳ,  ಆರ್ ಬಿ ಕುಲಕರ್ಣಿ, ಶ್ರೀಕೃಷ್ಣ ಪಡಗಾನೂರ,  ಇನಾಮದಾರ, ಹಂಗರಗಿ,  ವಿಜಯ ಜೋಶಿ, ಪ್ರಕಾಶಅಕ್ಕಲಕೋಟ,  ಗಂಗಾಧರದೇಶಪಾಂಡೆ, ಸುರೇಶ ಸೊಲಾಪುರಕರ, ಮಾಜಿ ಸಚಿವಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.