ಡಿ.11ರಂ ಸಂಜೆ ಮಂತ್ರಾಲಯ ಶ್ರೀಗಳ ಶೋಭಾ ಯಾತ್ರೆ

ಡಿ.11ರಂ ಸಂಜೆ ಮಂತ್ರಾಲಯ ಶ್ರೀಗಳ ಶೋಭಾ ಯಾತ್ರೆ

ವಿಜಯಪುರ ಡಿ,05: ಐತಿಹಾಸಿಕ ವಿಜಯಪುರ ನಗರಕ್ಕೆ  ಪ್ರಪ್ರಥಮ ಬಾರಿಗೆ ಭೇಟಿ ನೀಡಲಿರುವ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ಅಭೂತಪೂರ್ವ ಪುರ ಪ್ರವೇಶ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಇದೇ ದಿ. 11 ರಂದು ಸಾಯಂಕಾಲ 5 ಗಂಟೆಗೆ ನಗರದ ದೀವಟಗೇರಿ ಗಲ್ಲಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಗಜಾರೂಢರನ್ನಾಗಿ ವಾದ್ಯ ವೈಭವ, ಸಂಗೀತ ಭಜನೆಗಳೊಂದಿಗೆ ಸಾಂಪ್ರದಾಯಿಕವಾಗಿ ಶೋಭಾಯಾತ್ರೆಯಲ್ಲಿ  ಶ್ರೀಗಳನ್ನು  ಉಪಲಿ ಬುರುಜ ಬಳಿ ಇರುವ ಬಿ ಡಿ ಈ ಸೋಸೈಟಿ ಬಾಲಕಿಯರ ಶಾಲೆಗೆ ಕರೆತರಲಾಗುವದು. ಅಲ್ಲಿ ಶ್ರೀಗಳಿಂದ ಅನುಗ್ರಹ ಸಂದೇಶ ಜರುಗಲಿದೆ.
ಶ್ರೀಗಳು  ದಿ. 11 ರಿಂದ 16 ರ ವರೆಗೆ  ನಗರದಲ್ಲಿ ವಾಸ್ತವ್ಯ ಮಾಡಲಿದ್ದು, ವಿವಿಧ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ  ಭಾಗವಹಿಸಲಿರುವರು. ಇದಕ್ಕಾಗಿ ಭಕ್ತರು ಭಾರಿ ಸಿದ್ಧತೆ ಕೈಗೊಳ್ಳತ್ತಲಿರುವರು.
ದಿ. 11 ರಂದು ಬೆಳಿಗ್ಗೆ ನಗರದ ಶ್ರೀ ರುಕ್ಮಾಂಗದ  ಶಾಲೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಶ್ರೀಗಳು ಉದ್ಘಾಟಿಸಲಿರುವರು. ಶಿಬಿರದಲ್ಲಿ ನೇತ್ರ ತಜ್ಞ ಡಾ.  ಗುರುರಾಜ ಕುಲಕರ್ಣಿ ಹಾಗೂ ಡಾ. ಆನಂದ ಕಣಬೂರ ತಪಾಸಣೆ ನಡೆಸಿಕೊಡಲಿರುವರು. ಅಲ್ಲದೇ ಡಾ. ಶ್ರೀಕಾಂತ ಮಿರಜಕರ ಅವರು ಹೋಮಿಯೊಪಥಿ ವೈದ್ಯ ಪದ್ಧತಿಯಲ್ಲಿ ಆರೋಗ್ಯ ತಪಾಸಣೆ ಕೈಕೊಳ್ಳಲಿರುವರು.
ದಿ. 12 ರಂದು ಜಿಲ್ಲೆಯ ವಿವಿಧ ಭಜನಾ ಮಂಡಳಿಗಳ ಸಮಾವೇಶವನ್ನು ಆಯೋಜಿಸಲಾಗಿದೆ.  ಪಂಡಿತ ಅಪ್ಪಣಾಚಾರ್ಯರ ಮಾರ್ಗದರ್ಶನದಲ್ಲಿ ನಗರ ಸಂಕೀರ್ತನೆ ಹಾಗೂ ದಾಸ ಸಾಹಿತ್ಯ ಕುರಿತು ವಿಚಾರ ವಿಮರ್ಶೆಗಳು ನಡೆಯಲಿವೆ.
ಶ್ರೀಗಳ ವಾಸ್ತವ್ಯ ಸಮಯದಲ್ಲಿ ಸಸಿ ನೆಡುವ ಕಾರ್ಯಕ್ರಮ, ಸ್ವಚ್ಛತಾ ಅಭಿಯಾನ ಹಾಗೂ ಬಡವರಿಗೆ ವಸ್ತ್ರ ವಿತರಣೆ ಹಾಗೂ ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆ ಇವೇ ಮುಂತಾದ ಕಾರ್ಯಕ್ರಮಗಳು ಸಹ ಜರುಗಲಿವೆ.
ನಗರದ ಪಂಡಿತ ಮಧ್ಚಾಚಾರ್ಯ ಮೊಖಾಶಿ ಅವರ ಮಾರ್ಗದರ್ಶನದಲ್ಲಿ ಶ್ರೀಗಳ ವಾಸ್ತವ್ಯದ ಪ್ರತಿದಿನ ಸಂಜೆ  6-8 ಗಂಟೆ ವರೆಗೆ ನಗರದ ಬಿಡಿಇ ಸೋಸೈಟಿ ಬಾಲಕಿಯರ ಶಾಲೆಯಲ್ಲಿ  ವಿವಿಧ ಪಂಡಿತರಿಂದ ಪ್ರವಚನ ಹಾಗೂ ಶ್ರೀಗಳಿಂದ ಅನುಗ್ರಹ ಸಂದೇಶ  ಮುಂತಾದ ಕಾರ್ಯಕ್ರಮಗಳು ಜರುಗಲಿದೆ ಎಂದು ಶ್ರೀಗಳ ಸ್ವಾಗತ ಸಮಿತಿ ಪ್ರಕಟಣೆ ತಿಳಿಸಿದೆ.