ಮಂಡ್ಯ ಈಗ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಣೆ

ಮಂಡ್ಯ ಈಗ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಣೆ

ಮಂಡ್ಯ.ಅ.04: ಸಕ್ಕರೆ ನಗರಿ ಮಂಡ್ಯ ಜಿಲ್ಲೆಯ ಮಕುಟಕ್ಕೆ ಮತ್ತೊಂದು ಪ್ರಶಸ್ತಿಯ ಗರಿ ಸೇರ್ಪಡೆಯಾಗಿದೆ.  ಮಂಡ್ಯ ಜಿಲ್ಲೆಯನ್ನು ಬಯಲು ಬಹಿರ್ದಸೆ ಮುಕ್ತ ಜಿಲ್ಲೆಯಾಗಿ ಘೋಷಣೆ ಮಾಡಲಾಗಿದೆ. ಈ ಮೂಲಕ ಸ್ವಚ್ಚ ಭಾರತ್ ಅಭಿಯಾನದಲ್ಲಿ ಮಂಡ್ಯ ಜಿಲ್ಲೆ ಬಯಲು ಮುಕ್ತ ಬಹಿರ್ದೆಸೆ ಜಿಲ್ಲೆಯಾಗಿ ರೂಪುಗೊಂಡಿದೆ.

ಈ ಕುರಿತಾಗಿ ಮಂಡ್ಯದ ಜಿ.ಪಂ. ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ‌ನಡೆಸಿದ ಜಿ.ಪಂ. ಸಿಇಒ ಶರತ್, ಜಿಲ್ಲೆಯ ಈ ಸಾಧನೆಗೆ ಕಾರಣಕರ್ತರಾದವರಿಗೆಲ್ಲಾ ಸಭಾಂಗಣದಲ್ಲಿ ಸನ್ಮಾನಿಸಿ ಅಭಿನಂಧನೆ ಸಲ್ಲಿಸಿದರು. ಜಿಲ್ಲೆಯಲ್ಲಿ 2012 ರ ಸಮೀಕ್ಷೆಯಂತೆ 234 ಗ್ರಾಮ ಪಂಚಾಯತಿಯಲ್ಲಿ ಶೇ 100 ರಷ್ಟು ಸಾಧನೆ ಮಾಡಿರುವುದಾಗಿ ತಿಳಿಸಿ 1, 97,739 ವೈಯಕ್ತಿಕ ಶೌಚಗೃಹ ನಿರ್ಮಿಸುವ ಮೂಲಕ ಸಾಧನೆ ಮಾಡಿದೆ ಎಂದರು.

ಅ.02 ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ಸಚಿವರು ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಘೋಷಣೆ ಮಾಡಿದ್ದು, ಮತ್ತಷ್ಟು  ಶೌಚಾಲಯಗಳ ನಿರ್ಮಾಣದ ಮೂಲಕ ಜಿಲ್ಲೆಯನ್ನು ಇನ್ನಷ್ಟು‌ ಅಭಿವೃದ್ಧಿ ಪಡಿಸುವುದಾಗಿ ಹೇಳಿದ್ದರು.