ಸೆ.11 ರಂದು ಸಭಾಭವನದಲ್ಲಿ ಉಪನ್ಯಾಸ ಕಾರ್ಯಕ್ರಮ

ಸೆ.11 ರಂದು ಸಭಾಭವನದಲ್ಲಿ ಉಪನ್ಯಾಸ ಕಾರ್ಯಕ್ರಮ

ಧಾರವಾಡ,ಸೆ.9: ಕರ್ನಾಟಕ ವಿದ್ಯಾವರ್ಧಕ ಸಂಘವು ಸರ್. ಸಿದ್ದಪ್ಪ ಕಂಬಳಿ ಪ್ರತಿಷ್ಠಾನ ದತ್ತಿ ನಿಮಿತ್ತ ಅವರ 135 ನೇ ಜನ್ಮದಿನೋತ್ಸವದ ಅಂಗವಾಗಿ ಸೆ.11 ರಂದು ಸಂಜೆ 6 ಗಂಟೆಗೆ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ವಿ.ವ.ಸಂಘದ ಅಧ್ಯಕ್ಷರಾದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಡಾ. ವಿ.ವಿ. ಹೆಬ್ಬಳ್ಳಿ, ನಿವೃತ್ತ ಪ್ರಾಂಶುಪಾಲರು, ನಿಜಲಿಂಗಪ್ಪ ಕಾಲೇಜ, ಬೆಂಗಳೂರು ಅವರು ಆಗಮಿಸುವರು. ಸರ್. ಸಿದ್ದಪ್ಪ ಕಂಬಳಿ ಪ್ರತಿಷ್ಠಾನದ ಅಧ್ಯಕ್ಷರಾದ ನಾಗರಾಜ ಪಟ್ಟಣಶೆಟ್ಟಿ ಉಪಸ್ಥಿತರಿರುವರು.
ಸಾಹಿತಿಗಳು, ಚಿಂತಕರು, ಕಲಾವಿದರು, ತಾಯಂದಿರು, ಸಂಘದ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅಗಷ್ಟ ತಿಂಗಳ ದತ್ತಿ ಕಾರ್ಯಕ್ರಮ ಸಂಯೋಜಕರಾದ ಮನೋಜ ಪಾಟೀಲ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.                                                             
ಕರ್ನಾಟಕ ಕಂಡ ಧೀಮಂತ ವ್ಯಕ್ತಿ. ಹುಬ್ಬಳ್ಳಿಯಲ್ಲಿ ಹುಟ್ಟಿ, ಲಕ್ಕುಂಡಿ, ಧಾರವಾಡ, ಪುಣೆ ಮತ್ತು ಮುಂಬಯಿಗಳಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿ, ಹುಬ್ಬಳ್ಳಿಯಲ್ಲಿ ಸುಪ್ರಸಿದ್ದ ನ್ಯಾಯವಾದಿಗಳಾಗಿದ್ದ ಇವರು ಹುಬ್ಬಳ್ಳಿಯ ನಗರಸಭೆ ಅಧ್ಯಕ್ಷರಾಗಿ, ಮುಂಬಯಿ ವಿಧಾನಪರಿಷತ್ತಿನ ಸದಸ್ಯರಾಗಿ, ಮುಂಬಯಿ ಸರಕಾರದಲ್ಲಿ ಮುಖ್ಯ ಏಳು ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಬೆಳಗಾವಿ ಲಿಂಗರಾಜ ಕಾಲೇಜು, ಧಾರವಾಡ ಕರ್ನಾಟಕ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯ ಮೊದಲಾದ  ಶಿಕ್ಷಣ ಸಂಸ್ಥೆಗಳು ಅಸ್ಥಿತ್ವಕ್ಕೆ ಬರುವಲ್ಲಿ ಇವರು ವಹಿಸಿದ ಪಾತ್ರ ಚಿರಸ್ಮರಣೀಯವಾದುದು.
ಕರ್ನಾಟಕ ಏಕೀಕರಣ ಸಭೆಯ ಮತ್ತು ಅಖಿಲಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾದ ಕೀರ್ತಿ ಇವರದ್ದಾಗಿದ್ದಿತು. ಸರ್. ಸಿದ್ದಪ್ಪ ಕಂಬಳಿ ಪ್ರತಿಷ್ಠಾನವು ಕ.ವಿ.ವ.ಸಂಘದಲ್ಲಿ ದತ್ತಿ ಇಟ್ಟು ಈ ಮೂಲಕ ಪ್ರತಿವರುಷ ಮೌಲಿಕವಾದ ಉಪನ್ಯಾಸಗಳನ್ನು ಆಯೋಜಿಸುತ್ತಾ ಇಂದಿನ ಪೀಳಿಗೆ ಸಾಮಾಜಿಕ ಸೇವೆಗೆ ಅಣಿಯಾಗುವಂತೆ ಪ್ರೇರೆಪಿಸುವ ಕಾರ್ಯ ಈ ಮೂಲಕ ನಡೆಯುತ್ತಿದೆ.