ಎಲ್.ಪಿ.ಜಿ. ಅಡುಗೆ ಅನಿಲ ಉಚಿತ ವಿತರಣೆ ಕಾರ್ಯಕ್ರಮ

ಎಲ್.ಪಿ.ಜಿ. ಅಡುಗೆ ಅನಿಲ ಉಚಿತ ವಿತರಣೆ ಕಾರ್ಯಕ್ರಮ

ಬಾಗಲಕೋಟ, ಸೆ. 6 : ಜಿಲ್ಲೆಯ ಯಡಹಳ್ಳಿ ಗ್ರಾಮ ಪಂಚಾಯತಿ ಅಡಿಯಲ್ಲಿ ಬರುವ ಛಬ್ಬಿ ಗ್ರಾಮದಲ್ಲಿ  ಎಲ್.ಪಿ.ಜಿ. ಅಡುಗೆ ಅನಿಲವನ್ನು ಉಚಿತವಾಗಿ ವಿತರಿಸಲಾಯಿತು. 
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಮುರಗೇಶ ನಿರಾಣಿ, ಜಿಲ್ಲಾ ಪಂಚಾಯತ ಸದಸ್ಯರಾದ ಹೂವಪ್ಪ. ರಾಠೋಡ, ಎಪಿ.ಎಮ್.ಸಿ. ಸದಸ್ಯರಾದ ಶ್ರೀಶೈಲ ಕೌರಿ ಹಾಗೂ ಸಂಗಣ್ಣ ಕಟಗೇರಿ, ದ್ರಾಕ್ಷಾಯಣಿ ಜಂಬಗಿ, ಮತ್ತು ಯಡಹಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಬಾಳವ್ವ. ನಿಂಗಪ್ಪ. ಯಂಕಂಚಿ,  ಊರಿನ ರೂಪಾ. ಮುರನಾಳ, ಮಾದೇವಿ ಚರಂತಿ. ಹಿರೇಮಠ, ಶ್ರವಣಕುಮಾರ. ಬ. ಸಾಳಗುಂದಿ, ಯಂಕಪ್ಪ. ಬ. ಬೀಳಗಿ ಮತ್ತು ಹಿರಿಯರಾದ ಶಂಕ್ರಪ್ಪ. ಕಡಿವಾಲ, ರಮೇಶ. ಅಂತಾಪುರ, ವಿಠ್ಠಲ. ಯಂಕಂಚಿ ಹಾಗೂ ಊರಿನ ಯುವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
ಎಲ್.ಪಿ.ಜಿ. ಗ್ಯಾಸ್ ವಿತರರು 45 ಜನ ಫಲಾನುಭಾವಿಗಳು ಕಟ್ಟಿಗೆ ಉರಿಯುವುದು ಬಿಡಿ, ಅಡುಗೆ ಅನಿಲ ಬಳಸೋಣ ಎಂದು ಮಾತನಾಡಿದರು. ಈ ಪ್ರಧಾನ ಮಂತ್ರಿಯ ಉಜ್ವಲ ಯೋಜನೆ ನಮಗೆ ಬಹಳ ಅನುಕೂಲವಾಗಿದೆ ಎಂದು ಫಲಾನುಭಾವಿಗಳು ಹೇಳಿದರು.