ಕಲಾದಗಿ ಹೋಬಳಿ ಮಟ್ಟದ ಗ್ರಾಮೀಣ ಕ್ರೀಡೋತ್ಸವ

ಕಲಾದಗಿ ಹೋಬಳಿ ಮಟ್ಟದ ಗ್ರಾಮೀಣ ಕ್ರೀಡೋತ್ಸವ

ಬಾಗಲಕೋಟೆ, ಡಿ.30: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಮಾರುತೇಶ್ವರ ಯುವಕ ಸಂಘದ ಸಹಯೋಗದಲ್ಲಿ ಜನವರಿ 1, 2018 ರಂದು ಮದ್ಯಾಹ್ನ 1 ಗಂಟೆಗೆ ಛಬ್ಬಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲೂಕಿನ ಕಲಾದಗಿ ಹೋಬಳಿ ಮಟ್ಟದ ಗ್ರಾಮೀಣ ಕ್ರೀಡೋತ್ಸವ ಹಮ್ಮಿಕೊಳ್ಳಲಾಗಿದೆ.
    ಈ ಕ್ರೀಡೋತ್ಸವದಲ್ಲಿ ಸ್ಲೋ ಸೈಕಲ್ ಮೋಟಾರ್ ರೇಸ್ ಹಾಗೂ ವ್ಹಾಲಿಬಾಲ್ ಸ್ಪರ್ಧೆಗಳನ್ನು ಸಂಘಟಿಸಲಾಗುತ್ತಿದೆ. ಭಾಗವಹಿಸುವ ಕ್ರೀಡಾಪಟುಗಳಿಎ ವಯಸ್ಸಿನ ನಿರ್ಭಂದ ಇರುವದಿಲ್ಲ. ವ್ಹಾಲಿಬಾಲ್ ಕ್ರೀಡೆಗೆ ಪ್ರಥಮ ರೂ.2001, ದ್ವೀತಿಯ ರೂ.1501, ತೃತೀಯ ರೂ.1001 ಹಾಗೂ ಚತುರ್ಥ ರೂ.501 ಹಾಗೂ ಟ್ರೋಪಿ, ಸ್ಲೋ ಸೈಕಲ್‍ಮೋಟಾರ ಸ್ಥರ್ಧೆಗೆ ಪ್ರಥಮ ರೂ.1501, ದ್ವಿತೀಯ ರೂ.1001 ಹಾಗೂ ತೃತೀಯ ರೂ.501 ಹಾಗೂ ಟ್ರೋಫಿ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ದೂಸಂ.08354-235896ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.