ಖಾಡೆ, ನರೋಡೆ, ಸುರೇಖಾ ಕುಲಕರ್ಣಿ ಸೇರಿ ಹತ್ತು ಲೇಖಕರ ಕೃತಿಗಳ ಆಯ್ಕೆ

ಖಾಡೆ, ನರೋಡೆ, ಸುರೇಖಾ ಕುಲಕರ್ಣಿ ಸೇರಿ ಹತ್ತು ಲೇಖಕರ ಕೃತಿಗಳ ಆಯ್ಕೆ

ಬಾಗಲಕೋಟ,ಸೆ. 9: ಕನ್ನಡ ಸಾಹಿತ್ಯ ಪರಿಷತ್ತಿನ 2016 ನೇ ಸಾಲಿನ ಪುಸ್ತಕ ದತ್ತಿ ಬಹುಮಾನಕ್ಕಾಗಿ ಜಿಲ್ಲೆಯ ಹತ್ತು ಜನ ಲೇಖಕರ ಕೃತಿಗಳು ಆಯ್ಕೆಯಾಗಿವೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇದೇ 23 ರಂದು ಆಯೋಜಿಸಲಾಗುವುದೆಂದು ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಜಿ.ಕೆ.ತಳವಾರ,ಎಸ್.ಬಿ.ಕರಣಿ ತಿಳಿಸಿದ್ದಾರೆ.
ಜಿಲ್ಲೆಯ ಸಮೀರವಾಡಿ ಮತ್ತು ಬೀಳಗಿಗಳಲ್ಲಿ ಹಿಂದೆ ಜರುಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ಅಂದಿನ ಪರಿಷತ್ತು ಪದಾಧಿಕಾರಿಗಳು ಕೇಂದ್ರ ಕಸಾಪದಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳ ಪುಸ್ತಕಗಳಿಗೆ ಪ್ರತಿ ವರ್ಷವೂ ನಗದು ಬಹುಮಾನ ನೀಡಿ ಸತ್ಕರಿಸಲು ಆಶಯ ವ್ಯಕ್ತಪಡಿಸಿ ದತ್ತಿನಿಧಿಯನ್ನು ಸ್ಥಾಪಿಸಿದ್ದರು.ಅಖಂಡ ವಿಜಯಪುರ ಜಲ್ಲೆಯ ಲೇಖಕರಿಂದ ಪ್ರತಿವರ್ಷವೂ ಕೃತಿಗಳನ್ನು ಆಹ್ವಾನಿಸಿ ಪ್ರಶಸ್ತಿ ನೀಡಲಾಗುತ್ತಿದೆ.
ಕಸಾಪ ಬೀಳಗಿ ಘಟಕದ ಬಾಗಲಕೋಟ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಬೀಳಗಿ ನೆನಪಿನ ದತ್ತಿ ಪ್ರಶಸ್ತಿಗೆ ಆಯ್ಕೆಯಾದ 2016 ರ ಕೃತಿಗಳು.
ಡಾ.ಪ್ರಕಾಶ ಖಾಡೆ, ಕಾವ್ಯ ಸಂಕಲನ  ‘ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ’, ಡಾ.ಅಶೋಕ ನರೋಡೆ,ನಾಟಕ ಕೃತಿ  ‘ನಾಟಕ ಸಾಹಿತ್ಯದಲ್ಲಿ ಏಕಲವ್ಯ’, ಜಿ.ಕೆ.ತಳವಾರ,ಜನಪದ ಕೃತಿ, ’ವಿಜ್ಞಾನ ಸಂಹನೆಗೆ ಜನಪದ ಕೃತಿಗಳು’, ವೆಂಕಟೇಶ ಗುಡೆಪ್ಪನವರ, ಸಣ್ಣ ಕಥೆ, ’ಹತ್ತು’, ಗುರುರಾಜ ಲೂತಿ, ಇತರೆ ಪ್ರಕಾರ, ’ಯುಗ ಯೋಗಿ ಶ್ರೀ ಹಾನಗಲ್ಲ ಶಿವಯೋಗಿ’ .
ಬಿಜಾಪೂರ ಜಿಲ್ಲಾ ಸಮೀರವಾಡಿ ಸಾಹಿತ್ಯ ಸಮ್ಮೇಳನ ನೆನಪಿನ ದತ್ತಿ ಪ್ರಶಸ್ತಿಗೆ ಆಯ್ಕೆಯಾದ 2016 ರ ಕೃತಿಗಳು.
ಆನಂದ ಕುಂಚನೂರ,ಕಾವ್ಯ ಸಂಕಲನ, ’ವ್ಯೋಮ ತಂಬೂರಿ ನಾದ’, ತಿರುಪತಿ ಬಂಗಿ,ಕಥಾ ಸಂಕಲನ, ’ಕೈ ರೊಟ್ಟಿ’, ಎಸ್.ಆರ್.ಹೂಗಾರ,ನಾಟಕ ಕೃತಿ, ’ಬಾಲಾಭಿನಯ ಡಿಂಡಿಮ’, ಪಿ.ಡಿ.ವಾಲೀಕಾರ,ಮಕ್ಕಳ ಸಾಹಿತ್ಯ, ’ಪ್ರವಾಸ ಬದಾಮಿ’, ಸುರೇಖಾ ಕುಲಕರ್ಣಿ,ಕಾದಂಬರಿ, ’ಗುಣದ ಬೆಡಂಗಿ ಅಕ್ಕಾದೇವಿ.
ಪ್ರಶಸ್ತಿ ಪುರಸ್ಕøತ ಸಾಹಿತಿಗಳನ್ನು ಜಿಲ್ಲಾ ಕಸಾಪ ಅಧ್ಯಕ್ಷ ಶ್ರೀಶೈಲ ಕರಿಶಂಕರಿ ಅಭಿನಂದಿಸಿದ್ದಾರೆ.