ಕನ್ನಡಿಗರ ಅಭಿಮಾನ ಸಂಸ್ಥೆ ಕರವೇ : ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ

ಕನ್ನಡಿಗರ ಅಭಿಮಾನ ಸಂಸ್ಥೆ ಕರವೇ : ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ

ವಿಜಯಪುರ ,ಜೂ.11 : ಕನ್ನಡವೇ ನಮ್ಮಮ್ಮ, ನಮ್ಮ ಆಸ್ತಿ, ನಮ್ಮ ಉಸಿರು ವ್ಯಕ್ತಿಯ ಪರಿಪೂರ್ಣತೆಗೆ ಮಾತೃಭಾಷೆ ಪೂರಕವಾಗಿದೆ. ಮಾತೃಭಾಷೆ ಅರಿತಾಗ ಮಾತ್ರ ಇತರ ಭಾಷೆಗಳ ಪರಿಚಯವಾಗುತ್ತದೆ ಎಂದು ಜ್ಞಾನಪೀಠ ಪ್ರಶಸ್ತಿ ಪಡೆದ ನಮ್ಮ ಭಾಷೆ ಶ್ರೀಮಂತವಾಗಿದೆ ಎಂದು ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ ಹೇಳಿದರು.

ಕನಾಟಕ ರಕ್ಷಣಾವೇದಿಕೆಯ ವಿಜಯಪುರ ಜಿಲ್ಲಾ ಘಟಕವು, ಬಸವ ನಗರದ ಅನಾಥಾಲಯದಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ 51ನೇ ಜನ್ಮ ದಿನೋತ್ಸವ ನಿಮಿತ್ತ ಅನಾಥ ಮಕ್ಕಳಿಗೆ ಶೈಕ್ಷಣಿಕ ಸಕಲಕರಣೆಗಳ ವಿತರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಸಮಾಜಕ್ಕೆ ಕರ್ನಾಟಕಕ್ಕೆ ಅನ್ಯಾಯವಾದಾಗ ಹೋರಾಟದ ಮೂಲಕ ನ್ಯಾಯ ಒದಗಿಸಿಕೊಡುವಲ್ಲಿ ಕರವೇ ನಿರಂತರವಾಗಿ ಕೆಲಸ ಮಾಡುತ್ತಿದೆ. ಕನ್ನಡಿಗರ ಅಭಿಮಾನದ ಸಂಸ್ಥೆಯೂ ಕರವೇ ಕನ್ನಡಿಗರ ಪರ ಧ್ವನಿ ಎತ್ತಿದೆ. ಕನ್ನಡಿಗರಿಗೆ ಅನ್ಯಾಯವಾದಾಗ ನ್ಯಾಯ ಒದಗಿಸುವ ಕೆಲಸ ಮಾಡುತ್ತಿರುವ ಕರವೇ ಕಾರ್ಯ ಶ್ಲಾಘನೀಯ ಎಂದರು.

ಸಾಮಾಜಿಕ ಕಾರ್ಯಕರ್ತ ಪೀಟರ್ ಅಲೆಕ್ಸಾಂಡರ್ ಮಾತನಾಡಿ, ನೆಲ, ಜಲ, ಭಾಷೆಯ ರಕ್ಷಣೆಗೆ ಕರವೇ ಬದ್ಧವಾಗಿದೆ. ಸಣ್ಣ ವಯಸ್ಸಿನಲ್ಲೆ ರಾಜ್ಯಾಧ್ಯಕ್ಷರಾಗಿ ಕನ್ನಡಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಟಿ.ಎ.ನಾರಾಯಣ ಗೌಡರ ಕಾರ್ಯ ಮೆಚ್ಚುವಂತಹದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ದಿನಾಚರಣೆಗಳನ್ನು ನಮ್ಮ ನಮ್ಮ ಪ್ರತಿಷ್ಠೆಗಾಗಿ ವಿಜೃಂಭಣೆಯಿಂದ ಆಚರಿಸದೇ, ಅನಾಥರ, ವೃದ್ಧರ, ನಿರ್ಗತಿಕರ ಜೊತೆ ಅರ್ಥಪೂರ್ಣವಾಗಿ ಸೇವೆ ಮಾಡುತ್ತ ಆಚರಿಸುವುದು ಉತ್ತಮ. ಈ ನಿಟ್ಟಿನಲ್ಲಿ ಕರವೇ ಕಾರ್ಯಕರ್ತರು ನಿರಂತರ ಸಮಾಜ ಮುಖಿ ಕೆಲಸ ಮಾಡುತ್ತಿದ್ದಾರೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಕರವೇ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷ ರೇಷ್ಮಾ ಪಡೇಕನೂರ, ಕಾನೂನು ಘಟಕದ ಅಧ್ಯಕ್ಷ ರಘುನಂದನ್ ಪಾಂಡೆ ಮಾತನಾಡಿದರು.
ಜಿಲ್ಲಾ ಉಪಾಧ್ಯಕ್ಷ ಮಹಾದೇವ ರಾವಜಿ, ಜಿಲ್ಲಾ ಸಂಚಾಲಕ ಸಾಯಬಣ್ಣ ಮಡಿವಾಳರ, ಫಯಾಜ ಕಲಾದಗಿ, ಎಂ.ಸಿ. ಕಠಾವೆ, ತಾಲೂಕ ಅಧ್ಯಕ್ಷ ವಿನೋದ ದಳವಾಯಿ, ಶ್ರೀಮತಿ ಶ್ರೀದೇವಿ ಪಾಂಡೆ ವೇದಿಕೆ ಮೇಲಿದ್ದರು. ಜಿಲ್ಲಾ ಕರವೇ ಕಾರ್ಯದರ್ಶಿ ದಸ್ತಗೀರ ಸಾಲೋಟಗಿ ಸ್ವಾಗತಿಸಿದರು. ಪ್ರೊ. ಸುಭಾಸಚಂದ್ರ ಕನ್ನೂರ ನಿರೂಪಿಸಿದರು. ನಗರ ಸಂಚಾಲಕ ಫಯಾಜ್ ಕಲದಾಗಿ ವಂದಿಸಿದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ಶೈಕ್ಷಣಿಕ ಉಪಕರಣಗಳನ್ನು, ಸಿಹಿ ಭೋಜನವನ್ನು ವಿತರಿಸಲಾಯಿತು ಹಾಗೂ ಅನಾಥಾಲಯದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ಎಚ್.ಎಸ್. ಕಬಾಡೆ, ನಶೀಂ ರೊಜಿಂದಾರ್, ಭರತ ಕೋಳಿ, ಮೃತ್ಯುಂಜಯ ಹಿರೇಮಠ, ರಾಜು ಇಜೇರಿ, ಬಸಲಿಂಗ ಮಡಿವಾಳ, ಮಹಾದೇವ ಬನ್ಸೋಡೆ, ರವಿ ಮುರಗೋಡ, ಎಸ್.ಎಂ ಶಿರಬೂರ, ಮನೋಹರ ತಾಜೋ, ದಯಾನಂದ ಸಾವಳಗಿ, ಶಂಕರ ಬೆಳಗಾಂ, ಯಮನೂರ ವಾಲೀಕಾರ, ತಿಪ್ಪಣ್ಣ ವಾಲೀಕಾರ, ಆಸೀಫ್ ಪೀರವಾಲೆ, ರವಿ ಪೂಜೇರಿ, ಅನೀಸ ಮನಿಯಾರ, ವಿದ್ಯಾನಂದ ನಂದಗ್ರಾವ ಕಲ್ಲಪ್ಪ ಶಿಂಧೆ, ನಾಗೇಶ ಭಜಂತ್ರಿ, ಲಕ್ಷಣ ಕುಂಚಿಕೊರವ, ಮಲ್ಲಿಕಾರ್ಜುನ ಕೋರಳ್ಳಿ ಉಪಸ್ಥಿತರಿದ್ದರು.