ನವ್ಹೆಂಬರ್ 6 ರಂದು ಕನಕ ಜಯಂತಿ

ನವ್ಹೆಂಬರ್ 6 ರಂದು ಕನಕ ಜಯಂತಿ

ವಿಜಯಪುರ, ಅ.16: ಜಿಲ್ಲಾ ಕುರುಬರ ಸಂಘದವತಿಯಿಂದ ನವ್ಹೆಂಬರ್ 6 ರಂದು ಕನಕ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಜಿಲ್ಲಾ ಕುರುಬರ ಸಂಘವು ಇವತ್ತಿನ ಪೂರ್ವಭಾವಿ ನಗರದ ಸ್ಟೇಷನ್ ರೋಡ್ ಹತ್ತಿರವಿರುವ ಮಧುವಾನ್ ಹೊಟೇಲನಲ್ಲಿ ಹಮ್ಮಿಕೊಂಡ ಸಭೆಯಲ್ಲಿ ನಿರ್ಧರಿಸಲಾಯಿತು. 
    ಈ ಸಂದರ್ಭದಲ್ಲಿ ಜಿಲ್ಲಾ ಕುರುಬ ಸಂಘದ ಅಧ್ಯಕ್ಷರಾದ ಮಲ್ಲಣ್ಣ ಶಿರಶ್ಯಾಡ ಮಾತನಾಡಿ, ಹಾಲುಮತ ಸಮಾಜದ ಜಿಲ್ಲೆಯ ಎಲ್ಲ ಮುಖಂಡರು ಕನಕದಾಸ ಜಯಂತಿಯನ್ನು ಅಚ್ಚುಕಟ್ಟಾಗಿ ಹಾಗೂ ಹಾಲುಮತ ಸಮಾಜದ ಮಹಿಳೆಯರು ಎಲ್ಲರೂ ಪಾಲ್ಗೊಳ್ಳಬೇಕೆಂದು ಸಭೆಯನ್ನುದ್ದೇಶಿಸಿ ಮಾತನಾಡಿದರು. 
    ಸಮಾಜದ ಮುಖಂಡರಾದ ತಮ್ಮಣ್ಣ ಹಂಗರಗಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಎಲ್ಲರ ಶ್ರಮಿಸಬೇಕು. ಮತ್ತು ಮಾನ್ಯ ಸಚಿವರಾದ ಎಂ.ಬಿ. ಪಾಟೀಲರವರು ಸಮಾಜದ ಭವನವನ್ನು ನಿರ್ಮಾಣ ಸರ್ಕಾರದ ಯೋಜನೆಯಿಂದ ಕಟ್ಟಿಸಿಕೊಡುತ್ತೇನೆಂದು ಭರವಸೆ ನೀಡಿದ್ದಾರೆ ಎಂದು ಹೇಳಿದರು. 
    ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಮಲ್ಲಣ್ಣ ಸಾಲಿ, ಕೆಂಚ್ಚಪ್ಪ ಬಿರಾದಾರ, ಕಾಂಗ್ರೆಸ್ ಮುಖಂಡರಾದ ಎಚ್.ಎಮ್.ಯಡವಿ, ಜೆಡಿಎಸ್ ಮುಖಂಡರಾದ ಬಸವರಾಜ ಹೊನವಾಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಬಸವರಾಜ ಕಾತ್ರಾಳ, ಎಮ್.ಜಿ. ಯಂಕಂಚಿ, ಬೀರಪ್ಪ ಜುಮನಾಳ, ಶಿವಾನಂದ ಹೊನವಾಡ, ಮೋಹನ ದಳವಾಯಿ, ಬಿ.ಸಿ. ಪೂಜಾರಿ, ಲಕ್ಷ್ಮಣ ಬೆಟಗೇರಿ, ಜಿಲ್ಲಾಉಪಾಧ್ಯಕ್ಷರಾದ ಶಿವಾನಂದ ಬಿಂಜಲಬಾವಿ, ರಾಜು ಕಗ್ಗೂಡ, ಪಟ್ಟೇದ ಸರ್  ಉಪಸ್ಥಿತರಿದ್ದರು.