ಡಿ.14ರಂದು ಕಾಳಿದಾಸ ಸಾಹಿತ್ಯ ವೈಭವ 

ಡಿ.14ರಂದು ಕಾಳಿದಾಸ ಸಾಹಿತ್ಯ ವೈಭವ 

ವಿಜಯಪುರ ಡಿ,11:ಇಲ್ಲಿನ ಕಾಳಿದಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಇದೇ ದಿನಾಂಕ 14 ರಂದು ಬೆಳಿಗ್ಗೆ 10.30 ಕ್ಕೆ ಶ್ರೀ ಕವಿರತ್ನ ಕಾಳಿದಾಸ ಸಾಹಿತ್ಯ ವೈಭವ ಹಾಗೂ ರಘುವಂಶ ಮಹಾಕಾವ್ಯ ಚಿಂತನಗೋಷ್ಠಿ ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎ. ಜಿದ್ದಿ ತಿಳಿಸಿದರು. 
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಸಂಘಟಿಸಲಾಗುತ್ತಿದ್ದು, ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.  ಎರಡು ಗೋಷ್ಠಿಗಳನ್ನು ಆಯೋಜಿಸಲಾಗಿದೆ. 
ದಿನಾಂಕ 14 ರಂದು ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಚಿಂತನಗೋಷ್ಠಿಯನ್ನು ಉದ್ಘಾಟಿಸುವರು. ಬೆಂಗಳೂರಿನ ರಾಷ್ಟ್ರಪ್ರಶಸ್ತಿ ಪುರಸ್ಕøತ ಡಾ.ಎಂ.ಇ. ರಂಗಾಚಾರ್ಯ, ಸರ್ವಜ್ಞ ವಿಹಾರ ವಿದ್ಯಾಪೀಠದ ಕುಲಪತಿ ಪಂ.ಮಧ್ವಾಚಾರ್ಯ ಮೊಕಾಶಿ, ಶ್ರೀ ನಿತ್ಯಾನಂದ ಮಹಾಸ್ವಾಮಿಗಳು ಸಮ್ಮುಖತ್ವ ವಹಿಸುವರು. ರೈತ ಮುಖಂಡ ಡಾ.ಕಂಠೀರವ ಕುಲ್ಲೋಳ್ಳಿ, ಪ್ರೊ.ವಿ.ಡಿ. ವಸ್ತ್ರದ ಮುಖ್ಯ ಅತಿಥಿಗಳಾಗಿ ಆಗಮಿಸುವರು. 
ಸಂಸ್ಕøತ ಪಂಡಿತ ಡಾ.ಎಂ.ಇ. ರಂಗಾಚಾರ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಪ್ರಥಮ ಗೋಷ್ಠಿಯಲ್ಲಿ ಸಂಸ್ಕøತ ಪಂಡಿತ ವಿದೂಷಿ ಎಚ್.ಆರ್. ಗಾಯತ್ರಿದೇವಿ, ಡಾ.ಬನುದೇವಿ ಸಂಕಣ್ಣವರ ಉಪನ್ಯಾಸ ಮಂಡಿಸುವರು. ಮಧ್ಯಾಹ್ನ 2.30 ರಿಂದ ಸರ್ವಜ್ಞ ವಿಹಾರ ಪೀಠದ ಕುಲಪತಿ ಪಂ.ಮಧ್ವಾಚಾರ್ಯ ಮೊಕಾಶಿ ಅಧ್ಯಕ್ಷತೆಯಲ್ಲಿ ಜರುಗಲಿರುವ ಎರಡನೇಯ ಗೋಷ್ಠಿಯಲ್ಲಿ ಸಂಸ್ಕøತ ಉಪನ್ಯಾಸಕ ಪಂ.ಪ್ರದ್ಯುಮ್ನಾಚಾರ್ಯ ಪೂಜಾರ, ಸಂಸ್ಕøತ ಪ್ರಾಧ್ಯಾಪಕ ಡಾ.ಕೃಷ್ಣ ಕಾಖಂಡಕಿ, ಪಂ.ಸಂಜೀವಾಚಾರ್ಯ ಮಧಭಾವಿ ಉಪನ್ಯಾಸ ಮಂಡಿಸುವರು. 
ಅದೇ ದಿನ ಸಂಜೆ 6.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ರೂಗಿ ಅಡವಿಸಿದ್ದೇಶ್ವರ ಮಠದ ಶ್ರೀ ನಿತ್ಯಾನಂದ ಮಹಾಸ್ವಾಮಿಗಳು, ತಿಂಥಣಿ ಕನಕ ಗುರುಪೀಠದ ಶ್ರೀ ಸಿದ್ಧರಾಮಾನಂದಪುರ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಸಂಸ್ಕøತ ಪ್ರಾಧ್ಯಾಪಕ ಪ್ರೊ.ಜಿ.ಆರ್. ಅಂಬಲಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕಾಳಿದಾಸ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಪ್ರೊ.ರಾ.ಶಿ. ವಾಡೇದ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು. 
ಇಂಚಗೇರಿ ಸಂಪ್ರದಾಯದ ಮಹಾಸತ್ಸಂಗ 15 ರಂದು 
ಸುಕ್ಷೇತ್ರ ಇಂಚಗೇರಿ, ಕುಪಕಡ್ಡಿ ಸಂಪ್ರದಾಯದ ಮಹಾಸತ್ಸಂಗ ಸಮಾರಂಭ ಇದೇ ದಿನಾಂಕ 15 ರಂದು ಜರುಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎ. ಜಿದ್ದಿ ಇದೇ ಸಂದರ್ಭದಲ್ಲಿ ವಿವರಿಸಿದರು.
ಅಂದು ಬೆಳಿಗ್ಗೆ 9 ಕ್ಕೆ ಶ್ರೀ ಸಿದ್ದೇಶ್ವರ ದೇವಾಲಯದಿಂದ ಸುಕ್ಷೇತ್ರ ಇಂಚಗೇರಿ, ಕುಪಕಡ್ಡಿ ಸಂಪ್ರದಾಯದ ಮಹಾರಾಜರುಗಳ ಭಾವಚಿತ್ರ ಮೆರವಣಿಗೆ ನಡೆಯಲಿದ್ದು, ವಾರಕರಿ ಭಜನೆಯೊಂದಿಗೆ ಮೆರವಣಿಗೆ ನಡೆಯಲಿದೆ. ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಗೆ ತಲುಪಲಿದೆ. 
ದಿನಾಂಕ 17 ರಿಂದ ಮೂರು ದಿನಗಳ ಉಪನಿಷತ್‍ಗಳ ಸಂದೇಶ ಪ್ರವಚನ ಜರುಗಲಿದೆ. ಮೂರು ದಿನಗಳ ಕಾಲ ಉಪನಿಷತ್‍ಗಳ ವ್ಯಾಖ್ಯಾನ ಸಮಾರಂಭ ಸಂಜೆ 5.30 ಕ್ಕೆ ಜರುಗಲಿದೆ. ಡಾ.ಎಂ.ಇ. ರಂಗಾಚಾರ್ಯ ಉಪನ್ಯಾಸ ನೀಡುವರು. ಪಂ.ಮಧ್ವಾಚಾರ್ಯ ಮೊಕಾಶಿ ಅಧ್ಯಕ್ಷತೆ ವಹಿಸುವರು.