ಪತ್ರಕರ್ತ ಪ್ರಕಾಶ ಮುದ್ನೂರ ನಿಧನಕ್ಕೆ ಕಾನಿಪದಿಂದ ಶೃದ್ದಾಂಜಲಿ

ಪತ್ರಕರ್ತ ಪ್ರಕಾಶ ಮುದ್ನೂರ ನಿಧನಕ್ಕೆ ಕಾನಿಪದಿಂದ ಶೃದ್ದಾಂಜಲಿ

ವಿಜಯಪುರ,ಡಿ.6: ಯುವ ಪತ್ರಕರ್ತ ಪ್ರಕಾಶ ಮುದ್ನೂರ ಹೃದಯಾಘಾತದಿಂದ ನಿಧನ ಹೊಂದಿದ ನಿಮಿತ್ಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಎರಡು ನಿಮಿಷ್ ಮೌನ ಆಚರಣೆ ಮೂಲಕ ಶೃದ್ದಾಂಜಲಿ ಸಲ್ಲಿಸಿತು. ಸಂಘವೂ ತನ್ನ ಕಚೇರಿಯಲ್ಲಿ ಜಿಲ್ಲೆಯ ಎಲ್ಲ ಪತ್ರಕರ್ತರ ಸಭೆ ಕರೆದು ಶೃದ್ದಾಂಜಲಿ ಕಾರ್ಯಕ್ರಮ ಏರ್ಪಡಿಸಿತು. 
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಿರಿಯ ಪತ್ರಕರ್ತ ಅನಿಲ ಹೊಸಮನಿ ಮಾತನಾಡಿ, ಪ್ರಕಾಶ ಮುದ್ನೂರ ನೇರ ನುಡಿ, ತೀಕ್ಷ್ಣ ಬರವಣಿಗೆಯ ಮೂಲಕ ವಿಜಯಪುರ ಜಿಲ್ಲೆಯ ತಮ್ಮ ಎಳೆಯ ವಯಸ್ಸಿನಲ್ಲಿ ಪ್ರಭಾವ ಬೀರಿದ್ದರು. ಸಣ್ಣ ಪತ್ರಿಕೆಗಳ ಮೇಲೆ ಅಭಿಮಾನ ಇದ್ದ ಇವುಗಳ ಬೆಳವಣಿಗೆ ಉತ್ತಮ ಯೋಜನೆ ಹೊಂದಿದ್ದರು. ಪರಿಸ್ಥಿತಿಯ ಅನಿವಾರ್ಯತೆಯಿಂದ ದೊಡ್ಡ ಪತ್ರಿಕೆಯಲ್ಲಿ ಸ್ವಾಭಿಮಾನದಿಂದಲೇ ಕಾರ್ಯನಿರ್ವಹಿಸುತ್ತಿದ್ದರು. ಬಡ ಕುಟುಂಬದಲ್ಲಿ ಜನಿಸಿದ ಇವರು ಮೈಸೂರಿನ ಜ್ಞಾನ ಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಪದವಿಯನ್ನು ಕಷ್ಟದಲ್ಲಿಯೇ ಪೂರೈಸಿ ಪತ್ರಿಕಾರಂಗ ಪ್ರವೇಸಿಸಿದರು. ಮೊದಲು ವಿಜಯಪೂರದಲ್ಲಿ ವಿಜಯವಾಣಿ ವರದಿಗಾರರಾಗಿ ಕಾರ್ಯನಿರ್ವಹಿಸಿ ಮುಂದೆ ಚಿಕ್ಕ ಮಂಗಳೂರದಲ್ಲಿಯು ಸೇವೆ ಸಲ್ಲಿಸಿದ್ದರು. ಸದ್ಯ ಗದಗ ಜಿಲ್ಲೆಯಲ್ಲಿ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರಾಗಿ ಸೇವೆ ಸಲ್ಲಿಸುತ್ತಿದ್ದರು. 
ಇದೇ ಸಂದ¨ರ್sದಲ್ಲಿ ಪತ್ರಕರ್ತ ಫಿರೋಜ ರೋಜನದಾರ, ಮಾತನಾಡಿ ಪ್ರಕಾಶ ಮುದ್ನೂರ ತನ್ನ ಬರವಣಿಗೆ ಮೂಲಕವೇ ಜನರನ್ನು ಹತ್ತಿರ ಮಾಡಿಕೊಳ್ಳುತ್ತಿದ್ದ ಒಬ್ಬ ನಿಷ್ಟುರ ಪತ್ರಕರ್ತ ಅದರಂತೆ ತಮ್ಮ ಆರೋಗ್ಯಕ್ಕೆ ಹೆಚ್ಚಿಗೆ ಗಮನ ಕೊಡುತ್ತಿರಲಿಲ್ಲ ಎಂದು ನೋವು ತೋಡಿಕೊಂಡರು. ಅದರಂತೆ ಸುಶೀಲೇಂದ್ರ ನಾಯಕ ಶರಣ ಮಸಳಿ, ಸಂಗಮೇಶ ಚೂರಿ, ಇರ್ಫಾನ ಶೇಖ, ಮಾತನಾಡಿ ಪ್ರಕಾಶ ಚಬ್ಬಿ, ಪರಿಪೂರ್ಣಪತ್ರಕರ್ತನಾಗಿದ್ದು ಲಾಭಕ್ಕೆ ಪತ್ರಿಕೋದ್ಯಮವನ್ನೆ ಬಳಸಿಕೊಳ್ಳದ ಸಮಾಜ ಮುಖಿ ಬರಹಗಾರನಾಗಿದ್ದ ಇವರಿಗೆ ಪತ್ರಿಕೋದ್ಯಮದಲ್ಲಿ ಉಜ್ವಲ ಭವಿಷ್ಯ ಇತ್ತು. ಆದರೆ  ಆ ದೇವರು ಅವಕಾಶ ನೀಡಲಿಲ್ಲ ಎಂದು ಸಂತಾಪ ವ್ಯಕ್ತ ಪಡಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ರಫೀ ಬಂಢಾರಿ ಮಾತನಾಡಿ, ಪ್ರಕಾಶ ಮುದ್ನೂರ ನಿಜ ಪತ್ರಿಕೋದ್ಯಮಕ್ಕೆ ತಕ್ಕದಾಗಿದ್ದರು. ಇವರ ನಡೆ ನುಡಿಗಳು ಪತ್ರಕರ್ತರಿಗೆ ಮಾದರಿಯಾಗಿದ್ದವು. ನಿಜವಾದ ಶುದ್ದ ಬರವಣಿಗೆ ದಿಟ್ಟ ಬರಹಗಳು ಇವರನ್ನು ಚಿಕ್ಕ ವಯಸ್ಸಿನಲ್ಲಿ ಎತ್ತರಕ್ಕೆ ಬೆಳಸಿದ್ದವು. ಇಂತಹ ಪತ್ರಕರ್ತರನ್ನು ಇಂದು ಪತ್ರಿಕಾರರಿಗೆ ಕಳೆದುಕೊಂಡಿದೆ. ಅದರಂತೆ ಇವರನ್ನ ಕಳೆದುಕೊಂಡ ಇವರ ಕುಟುಂಬದವರಿಗೆ ಸಹಾಯ ಮಾಡಲು ಸಂಘದಲ್ಲಿ ನಿರ್ಣಯಿ ರಾಜ್ಯ ಘಟಕದ ನೆರವಿನಿಂದ ಹಾಗೂ ಜಿಲ್ಲೆಯ ಪತ್ರಕರ್ತರ  ಸಹಕಾರದಿಂದ ಸಹಾಯ ಮಾಡಲು ಮನವಿ ಮಾಡಿಕೊಳ್ಳಲಾಗುವುದು. ಅದರಂತೆ ಇವರ ಕುಟುಂಬದವರ ಅನುಮತಿಯ ಮೇಲೆ ನೇರವಾಗಿ ಅವರ ಬ್ಯಾಂಕ ಖಾತೆ ಧನ ಸಹಾಯ ಮಾಡುವ ಏರ್ಪಾಡು ಮಾಡಲಾಗುವದು ಎಂದು ತಿಳಿಸಿದರು.
ಈ ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶ ವಿನಾಯಕ ಸೊಂಡೂರ, ಮಾಧವ ಕುಲಕರ್ಣಿ, ಅಬಿದ ಶೇಖ, ರಾಹುಲ ಮಾನಕರ ಕುಮಾರ ಗುನ್ನಾಪೂರ, ಸಂಘರ್ಷ ಹೊಸಮನಿ ಹಲವಾರು ಪತ್ರಕರ್ತರು ಉಪಸ್ಥಿತರಿದ್ದರು.