ಜಿಲ್ಲಾ ಜೆಡಿಎಸ್‍ಗೆ ಶಂಕ್ರಪ್ಪ ಜೀರಗಾಳ ರೈತ ಘಟಕದ ಅಧ್ಯಕ್ಷರಾಗಿ ಸೇರ್ಪಡೆ

ಜಿಲ್ಲಾ ಜೆಡಿಎಸ್‍ಗೆ ಶಂಕ್ರಪ್ಪ ಜೀರಗಾಳ ರೈತ ಘಟಕದ ಅಧ್ಯಕ್ಷರಾಗಿ ಸೇರ್ಪಡೆ

ಬಾಗಲಕೋಟ, ಜೂ.15:  ಬಾಗಲಕೋಟ ಜಿಲ್ಲಾ ಜಾತ್ಯಾತೀತ ಜನತಾದಳದ ವಕ್ತಾರರಾಗಿ ರಮೇಶ ಬದ್ನೂರ ಹಾಗೂ ಜಿಲ್ಲಾ ರೈತ ಘಟಕದ ಅಧ್ಯಕ್ಷರಾಗಿ  ಶಂಕ್ರಪ್ಪ ವಿ. ಜೀರಗಾಳ ಇವರನ್ನು ನೇಮಕ ಮಾಡಿ ಜಿಲ್ಲಾ ಅಧ್ಯಕ್ಷರಾದ ಶ್ರೀ ರವಿ ಹುಣಶ್ಯಾಳ ಆದೇಶ ಮಾಡಿದ್ದಾರೆ. 
    ಈ ಇಬ್ಬರ ನೇಮಕದಿಂದ ಪಕ್ಷದ ಸಂಘಟನೆಗೆ ಹೆಚ್ಚಿನ ಬಲ ಬಂದಂತಾಗಿದ್ದು, ಇವರ ನೇಮಕವನ್ನು ಜಿಲ್ಲಾ ಪ್ರಮುಖರು ಸ್ವಾಗತಿಸಿ ಅವರನ್ನು ಅಭಿನಂದಿಸಿದ್ದಾರೆ ಎಂದು ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಶರಣು ಹುರಕಡ್ಲಿ ತಿಳಿಸಿದ್ದಾರೆ.