ಆಯುರ್ವೇದ ಔಷದಿ ಬಳಸಿ ಅದರಿಂದ ದೇಹಕ್ಕೆ ಒಳ್ಳೆಯದು: ಹೂವಪ್ಪ ರಾಠೋಡ

ಆಯುರ್ವೇದ ಔಷದಿ ಬಳಸಿ ಅದರಿಂದ ದೇಹಕ್ಕೆ ಒಳ್ಳೆಯದು: ಹೂವಪ್ಪ ರಾಠೋಡ

  ಬಾಗಲಕೋಟೆ,ಅ.10:  ಇಂಗ್ಲಿಷ ಔಷದಿ ಬಿಟ್ಟು ಪಾರಂಪರಗಾತವಾಗಿ ಬಂದ ಆಯುರ್ವೇದ ಔಷದಿ ಬಳಸಿ ಅದರಿಂದ ದೇಹಕ್ಕೆ ಒಳ್ಳೆಯದಾಗಲಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಹೂವಪ್ಪ ರಾಠೋಡ ಹೇಳಿದರು.
    ಅವರು ಜಿಲ್ಲಾಢಳಿತ,ಜಿಲ್ಲಾ ಪಂಚಾಯತ ಜಿಲ್ಲಾಆಯುಷ್ಯ ಇಲಾಖೆ.2017-18 ಸಾಲಿನ ರಾಜ್ಯವಲಯದ ಐಇಸಿ ಕಾರ್ಯಕ್ರಮ ಟಿಎಸ್‍ಪಿ ಯೋಜನೆಯಲ್ಲಿ ಗ್ರಾಮ ಪಂಚಾಯತ್ ಮುರನಾಳ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣೆ ಹಾಗೂ ಬ್ರಷ್ಟ್ರಾಚಾರ ಅಪರಾದ ತಡೆ ಆಯೋಗ ಇವರ ಸಹಯೋಗದಲ್ಲಿ ಮುರನಾಳ ಪುನರ್ವಸತಿ ಕೆಂದ್ರದಲ್ಲಿನ ಉರ್ದುಶಾಲೆಯಲ್ಲಿ ನಡೆದ ಊಚಿತ ಆಯುಷ್ಯ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು ಇಂದಿನ ಮನುಷ್ಯನ ಒತ್ತಡದ ಜೀವನದ ಪದ್ದತಿಯಲ್ಲಿ ಬಹು ಬೇಗನೆ ಗುಣವಾಗಲಿ ಎಂದು ಇಂಗ್ಲೀಷ ಔಷದಿ ಮೋರೆಹೋಗುತ್ತಿದ್ದೆವೆ ಇದರಿಂದ ಮಾನವ ದೇಹಕ್ಕೂ ಕೂಡ ಅಡ್ಡಪರಿಣಾಮಗಳು ಅಂಟಿಕೋಳ್ಳುವ ಸಾದ್ಯತೆ ಇದ್ದು . ಅದಕ್ಕೆ ಪಾರಂಪರಗತವಾಗಿ ಬಂದ ಆಯುರ್ವೇದ ಔಷದಿ ಉಪಯೋಗಿಸಿ ಸಂಪೂರ್ಣವಾಗಿ ಗುಣಮುಖರಾಗಿ, ಇದರಿಂದ ಮನುಷ್ಯ ನೆಮ್ಮದಿಯಾಗಿರಲು ಬಹುದು. ನಾವೂ ನಮ್ಮ ಆರೋಗ್ಯವನ್ನು ಕಾಪಾಡಿಕೋಳ್ಳಬೇಕು ಎಂದ ಅವರು ಮುರನಾಳ ಜಿಲ್ಲಾಪಂಚಾಯತ ಕ್ಞೇತ್ರದಿಂದ ಎರಡು ಬಾರಿ ಜಿಲ್ಲಾ ಪಂಚಾಯತ ಸದಸ್ಯರಾಗಿ ಆಯ್ಕೆಯಾಗಿದ್ದು ಈ ಬಾಗದ 
ಜನರ ಸೇವೆ ಮಾಡಲು ನಾನು ಸದಾ ಸಿದ್ದನಾಗಿದ್ದೆನೆ ಎಂದರು.
 ಮುಖ್ಯ ಅತಿಥಿಗಳಾಗಿ ಮಾತನಾಡಿದ ಗ್ರಾಮ ಪಂಚಾಯತ ಸದಸ್ಯ ಶಿವಣ್ಣ ಕೋವಳ್ಳಿ ಮಾತನಾಡಿ ದೀರ್ಘ ಕಾಲಿನ ರೋಗಳಿಗೆ ಆಯುರ್ವೇದವೆ ಮದ್ದು ಎಂದರು.ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣೆ ಹಾಗೂ ಬ್ರಷ್ಟ್ರಾಚಾರ ಅಪರಾದ ತಡೆ ಆಯೋಗದ ರಾಷ್ಟ್ರೀಯ ಸದಸ್ಯರಾದ ಬಸವರಾಜ ಮುರನಾಳ ಮಾತನಾಡಿ ಇಂದಿನ ಕೆಟ್ಟ ಆಹಾರ ಪದ್ದತಿಯೆ ಇಂದಿನ ಆರೋಗ್ಯದ ಸ್ಥಿತಿ ಅದಗೆಡಲು ಕಾರಣವಾಗಿದೆ ಎಂದರು
ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆಯುಷ್ಯ ಅಧಿಕಾರಿಯಾದ ಮಹೇಶ ಗುಗ್ಗರಿ ಅವರು ಇದೆ 18ರಂದು ರಾಷ್ಟ್ರೀಯ ಆಯುರ್ವೇದ ದಿನ ಆಚರಿಸಲು ಸೂಚಿಸಲಾಗಿದೆ ಈ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಉಚಿತ ಆರೊಗ್ಯ ಶಿಭಿರ ನಡೆಸಿ ಜನರ ಜೋತೆ ಬಾಂದವಯ್ಯ ಬೇಳೆಸುವ ಆರೋಗ್ಯದ ಕಡೆ ಗಮನ ಹರಿಸುವ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಶ್ರೀಮತಿ ರೇಣುಕಾ ಬಂಟನೂರ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ತಾಲ್ಲೂಕ ಪಂಚಾಯತಿ ಸದಸ್ಯನಿಯಾದ ಶ್ರೀಮತಿ ರತ್ನಾ ಭಾರಕೇರ. ಗ್ರಾಮ ಪಂಚಾಯತ ಸದಸ್ಯರಾದ ವೆಂಕಪ್ಪ ಬಾರಕೇರ.ಮಳಿಯಪ್ಪ ಗುಳಬಾಳ.ಗ್ರಾಮ ಪಂಚಾಯತ ಕಾರ್ಯದರ್ಶಿಯಾದ ಬಿ ಎಲ್ ಹಳಮನಿ.ಗ್ರಾಮಪಂಚಾಯತ ಅಭಿವೃದ್ದಿ ಅದಿಕಾರಿ ಜಿ ವಿ ಕುಲಕರ್ಣಿ ಶಾಲಾ ಮುಖ್ಯ ಗುರುಗಳಾದ ಆರ್.ಎಸ್ ಚಕ್ಕಡಿ. ಎಸ್ ಬಿ ಗೌಡರ. ಎಮ ಬಿ ಹಾದಿಮಾನಿ. ಹುಚ್ಚಪ್ಪ ಶಿರೂರ.ರಾಮಣ್ಣ ಗಣಿ ಭರತ ಬಾರಕೇರ.ಗ್ರಂಥಾಲಯ ಮೆಲ್ವಿಚಾರಕ ಮುತ್ತು ಬಾರಕೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
  ಕಾರ್ಯಕ್ರಮದ ನಂತರ ಆರೋಗ್ಯ ಶಿಭಿರದಲ್ಲಿ 500ಕ್ಕೂ ಹೆಚ್ಚು ಜನ ಆರೋಗ್ಯ ಶಿಬಿರದಲ್ಲಿ ಬಾಗವಹಿಸಿದ್ದರು.