ವಚನ ಸಾಹಿತ್ಯ ಸಂಪತ್ತು ಉಳಿಸಿದ ಹಿರಿಮೆ ಮಾಚಿದೇವರಿಗೆ ಸಲ್ಲುತ್ತದೆ 

ವಚನ ಸಾಹಿತ್ಯ ಸಂಪತ್ತು ಉಳಿಸಿದ ಹಿರಿಮೆ ಮಾಚಿದೇವರಿಗೆ ಸಲ್ಲುತ್ತದೆ 

ವಿಜಯಪುರ,ಡಿ.6: ಅನ್ನ ಬಸವಣ್ಣನವರ ಸಮಕಾಲಿನ ಶರಣರ ಕಾಲದಲ್ಲಿ ಕಾಯಕ ಮತ್ತು ದಾಸೋಹದ ಜೊತೆಗೆ ತಮ್ಮ ಶೌರ್ಯಶಕ್ತಿ ಮೆರೆದಿದ್ದಾರೆ ಎನ್ನುವದಕ್ಕೆ ನಿದರ್ಶನ ಎಂದರೆ ವೀರಭದ್ರ ಅವತಾರಿ ಮಡಿವಾಳ ಮಾಚಿದೇವ ಅವರು. ಅಂದು ಬಿಜ್ಜಳನ ಸೈನ್ಯ ದಂಡೆತ್ತಿ ಬಂದಾಗ ಶಿವಶರಣರು ರಚಿಸಿದ ಅಮೂಲ್ಯವಾದ ್ತ ವಚನ ಸಾಹಿತ್ಯ ಸಂಪತ್ತು ಬಿಜ್ಜಳನ ದಾಳಿಗೆ ಸಿಕ್ಕಿ ನಶಿಸುವ ಮುನ್ನ ತಮ್ಮ ಜೀವನವನ್ನೇ ಪಣಕ್ಕಿಟ್ಟು ಬಿಜ್ಜಳನ ಸೈನ್ಯದೊಂದಿಗೆ ವೀರಗತ್ತಿ ಹಿಡಿದು ಹೋರಾಡಿ ಅಮೂಲ್ಯ ವಚನ ಸಾಹಿತ್ಯ ಸಂಪತ್ತನ್ನು ಉಳಿಸಿದ ಹಿರಿಮೆ ಮಡಿವಾಳ ಮಾಚಿದೇವ ಅವರಿಗೆ ಸಲ್ಲುತ್ತದೆ ಎಂದು ಪ್ರೊ.ಸುರೇಶ ಬಿರಾದಾರ ಹೇಳಿದರು.
ಅವರು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜರುಗಿದ 2 ದಿವಸಗಳ ಶ್ರೀಗುರು ಬಸವ ಮಾಚಿದೇವ ಸಾಂಸ್ಕøತಿಕ ಉತ್ಸವವನ್ನು ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಚನ ಸಾಹಿತ್ಯ ಉಳಿಯುವಲ್ಲಿ ಮಡಿವಾಳ ಮಾಚಿದೇವ ಪಾತ್ರ ಅಮೂಲ್ಯವಾಗಿದೆ. ಅವರಿಲ್ಲದಿದ್ದರೆ ಇಂದು ಜನರಿಗೆ ವಚನ ಸಾಹಿತ್ಯ ಸಿಗುತ್ತಿರಲಿಲ್ಲ. ವಚನಸಾಹಿತ್ಯವೇ ನಶಿಸಿಹೋಗುತ್ತಿದ್ದವು. ಮಡಿವಾಳ ಮಾಚಿದೇವ ಅವರ ಕೊಡುಗೆ ಬಹಳ ಅನನ್ಯವಾಗಿದೆ. ಮಡಿವಾಳ ಮಾಚಿದೇವರ ಕುರಿತು ಎಷ್ಟು ಹೇಳಿದರು ಕಡಿಮೆ ಎನ್ನಬಹುದು ಎಂದರು.
ಸಣ್ಣ ಮತ್ತು ಅತಿ ಸಣ್ಣ ಒಕ್ಕೂಟದ ರಾಜ್ಯಾಧ್ಯಕ್ಷ ಸಾಯಬಣ್ಣ ಮಡಿವಾಳ ಅವರು ರಾಜ್ಯ ಮಟ್ಟದ ಇಂತಹ ಭವ್ಯ ಸಮಾರಂಭ ಏರ್ಪಡಿಸಿದ್ದು ತುಂಬಾ ಸಂತೋಷದ ವಿಷಯ ಅವರ ಸಾಹಸ ಕಾರ್ಯಕ್ಕೆ ಜನರು, ಜನಪ್ರತಿನಿಧಿಗಳು ಸ್ಪೂರ್ತಿ ಬೆಂಬಲ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಸಮಾಜದ ಮೂಲ ಕಸಬದಲ್ಲಿ ತಮ್ಮದೆ ಆದ ಕೊಡುಗೆ ನೀಡಿದ ಶಿವಶರಣ, ಶಿವಶರಣೆಯರಿಗೆ ಕಾಯಕರತ್ನ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಾನ್ನಿಧ್ಯವಹಿಸಿದ್ದ ಮನಗೂಳಿಯ ಪೂಜ್ಯ ಸಂಗನ ಬಸವ ಮಹಾಸ್ವಾಮಿಗಳು ಸನ್ಮಾನಿಸಿ, ಆಶೀರ್ವಚನ ನೀಡಿ, 12ನೇ ಶತಮಾನದಲ್ಲಿ ಅಣ್ಣಬಸವಣ್ಣನವರ ಆಡಳಿತ ಅವಧಿಯಲ್ಲಿ ಎಲ್ಲ ಜನಾಂಗದವರಲ್ಲಿ ಒಬ್ಬ ಶಿವಶರಣರನ್ನು ತಮ್ಮ ಅನುಭವ ಮಂಟದಲ್ಲಿ ಸ್ಥಾನ ನೀಡುವುದಲ್ಲದೆ ಕಾಯಕ ಮಾಡಿಜೀವನ ಸಾಗಿಸುವುದಲ್ಲೇ ಜಂಗಮ ದಾಸೋಹ ಮಾಡುವುದರ ಮೂಲಕ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು. ಈ ಮಂಟದಲ್ಲಿ ಸೋಮಾರಿಗಳಿಗೆ ಅವಕಾಶವಿರಲಿಲ್ಲ. ಅವರು ಕಾಯಕವೇ ಕೈಲಾಸ ಎಂದು ಹೇಳಿದ್ದರು. ಶರಣ ತಂದೆ ತಾಯಿಗಳಿಗೆ ರಾಜ್ಯಮಟ್ಟದ ಕಾಯಕ ಯೋಗಿ ಪ್ರಶಸ್ತಿ ನೀಡಿ ಗೌರವಿಸಿ ಸಾಯಿಬಣ್ಣ ಮಡಿವಾಳರು ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ ಅವರ ಕಾರ್ಯ ಶ್ಲಾಘನೀಯ ಎಂದರು.
ದ್ವಿತಿಯ ದಿನದ ಸಂಜೆ ವಿವಿಧ ವಚನ ಸಂಗೀತ, ಗಾಯನ, ನೃತ್ಯರೂಪಕ ಜರುಗಿದವು, ತದ ನಂತರ ಡಿ.ಎಚ್.ಕೋಲಾರ, ಆರ್.ಜಿ.ಮೇಡಗಾರ ನಿರ್ದೇಶನದ ರನ್ನ ಕಲಾ ರಂಗ ಅರ್ಪಿಸುವ ಮಡಿವಾಳ ಮಾಚಿದೇವ ನಾಟಕವನ್ನು ಪ್ರದರ್ಶಿಸಲಾಯಿತು. ಬೆಂಗಳೂರಿನ ನಟಿ ಹಾಗೂ ನೃತ್ಯಗಾರ್ತಿ ಶ್ರೀ ಹರಿಪ್ರಿಯ ಗೌಡರ ಹಾಗೂ ರುಕ್ಮಿಣಿ ಚವ್ಹಾಣ ಅವರ ನೃತ್ಯ ರೂಪಕಗಳು ನೆರೆದ ಪ್ರೇಕರ ಜನ ಮನ ಸೂರೆಗೊಂಡವು.
ಎಂ.ಜಿ.ಯಾದವಾಡ ಸ್ವಾಗತಿಸಿದರು, ಸಂಗಮೇಶ ಬದಾಮಿ, ಸುಮಂಗಲಾ ಕೋಟಿ ನಿರೂಪಿಸಿದರು, ಸಂಜು ಶಿವಣಗಿ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಎಂ.ಸಿ.ಮುಲ್ಲಾ, ಯಾಕೂಬ ಕೋಪರ, ಸುರೇಶ ಶೇಡಶ್ಯಾಳ, ಎಸ್.ವಿ.ಪಾಟೀಲ, ರವಿ ಬಿಜ್ಜರಗಿ, ವಿ.ಸಿ.ನಾಗಠಾಣ, ಬಾಬು ಬಳ್ಳಾರಿ, ಮಾದೇವ ರಾವಜಿ, ರಾಜೇಂದ್ರ ಸಿಂಗ ಹಜೇರಿ, ಪರಶುರಾಮ ಅಗಸರ, ಗುಂಡು ಅಗಸರ, ಪ್ರಕಾಶ ಕುಂಬಾರ, ದಸ್ತಗೀರ ಸಾಲೋಟಗಿ, ಎಸ್.ವಿ.ಕನ್ನೊಳ್ಳಿ, ಭರತ ಕೋಳಿ, ರೇವಮ್ಮ ಕೋಷ್ಠಿ, ಶೋಭಾ ಕಂಬಾಗಿ, ಶ್ರೀದೇವಿ ಉತ್ಲಾಸ್ಕರ, ಸತೀಶ ಅಗಸರ, ಮಲ್ಲಿಕಾರ್ಜುನ ಮಡಿವಾಳರ, ದತ್ತಾತ್ರೇಯ ಪೂಜಾರಿ, ದತ್ತು ಮಡಿವಾಳರ ಮುಂತಾದವರು ಉಪಸ್ಥಿತರಿದ್ದರು.