ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ : ಭರತಕುಮಾರ

ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ : ಭರತಕುಮಾರ


ವಿಜಯಪುರ,ಸೆ.1: ಎ.ಐ.ಡಿ.ಎಸ್.ಓ ಮತ್ತು ವಿಟಿಯು ವಿದ್ಯಾರ್ಥಿಗಳ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ವಿಟಿಯು ವಿರುದ್ದ ಶುಕ್ರವಾರ ಬಂದ್ ಆಚರಿಸಿದರು. 
ಕಳೆದ ಒಂದುವರೆ ತಿಂಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ ಸ್ಪಂದಿಸದ ಕಾರಣ ಆಕ್ರೋóಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಕಾಲೇಜುಗಳ ಮುಂದೆ ಟಾಯರ್‍ಗಳಿಗೆ ಬೆಂಕಿ ಹಚ್ಚಿ, ಕೆಲಹೊತ್ತು ರಸ್ತಾ ರೋಖೋ ನಡೆಸಿ, ನಂತರ ಬೈಕ್ ಜಾಥಾ ನಡೆಸಿದರು.
ಬಿ.ಎಲ್.ಡಿ.ಇಂಜನೀಯರಿಂಗ್ ಕಾಲೇಜಿನಿಂದ ಆರಂಭವಾದ ಬೈಕ್ ಜಾಥಾ ಸಿದ್ದೇಶ್ವರ ದೇವಸ್ಥಾನ, ಗಾಂಧಿಚೌಕ ಬಸ್ ನಿಲ್ದಾಣ, ಬಾಗಲಕೋಟ ರಸ್ತೆ, ಜಿಲ್ಲಾ ನ್ಯಾಯಾಲಯದ ಮುಖಾಂತರ ಸಿಕ್ಯಾಬ್ ಕಾಲೇಜಿಗೆ ತೆರಳಿ ಮತ್ತೆ ಅಲ್ಲಿಂದ ಎಲ್ಲರೂ ಅಂಬೇಡ್ಕರ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ತೆರಳಿ ಜಿಲ್ಲಾಧಿಕಾರಿಗಳ ಮುಖಾಂತರ ವಿಟಿಯು ಕುಲಪತಿಗೆ ಮನವಿ ಸಲ್ಲಿಸಲಾಯಿತು. 
ರ್ಯಾಲಿಯಲ್ಲಿ ವಿದ್ಯಾರ್ಥಿ ವಿರೋಧಿ ವಿಟಿಯುಗೆ ಧಿಕ್ಕಾರ, ಕ್ರಿಟಿಕಲ್ ಇಯರ್ ಬ್ಯಾಕ್ ಮತ್ತು ಇಯರ್ ಬ್ಯಾಕ್ ತೆಗೆದು ಹಾಕಿ, ಸಿಬಿಸಿಎಸ್‍ಸಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸಬೇಕು ಎಂಬ ವಿರುದ್ದ ಘೋಷಣೆಗಳನ್ನು ಕೂಗಿದರು. 
ಪ್ರತಿಭಟನಾಕಾರರನ್ನುದ್ದೇಶಿಸಿ ಎ.ಐ.ಡಿ.ಎಸ್‍ಓನ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹೆಚ್.ಟಿ.ಭರತಕುಮಾರ ಮಾತನಾಡಿ, ಇಂಜನೀಯರಿಂಗ್ ವಿದ್ಯಾರ್ಥಿಗಳು ಕಳೆದೆರಡು ತಿಂಗಳಿಂದ ತಮ್ಮ ನ್ಯಾಯಯುತ ಬೇಡಿಕೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದರೂ ಕುಲಪತಿಗಳಾಗಲಿ ರಾಜ್ಯಪಾಲರಾಗಲಿ, ರಾಜ್ಯ ಸರರಕಾರವಾಗಲಿ ಮಧ್ಯಸ್ಥಿಕೆ ವಹಿಸಿ ಬೇಡಿಕೆ ಇಡೇರಿಸಬೇಕಾಗಿತ್ತು. ಆದರೆ ಇದುವರೆಗೂ ಸ್ಪಂದಿಸಿಲ್ಲದಿರುವುದರಿಂದಾಗಿಯೇ ವಿದ್ಯಾರ್ಥಿಗಳು ಇಂದು ಬೀದಿಗಿಳಿದು ಉಗ್ರ ಹೋರಾಟ ಮಾಡುವಂತಾಗಿದೆ. ಒಂದುವೇಳೆ ಇದಕ್ಕೆ ಈ ಕೂಡಲೇ ಸ್ಪಂದಿಸಿ ಬೇಡಿಕೆ ಇಡೇರಿಸದಿದ್ದರೆ, ಉಪಕುಲಪತಿಗಳನ್ನು ಘೇರಾವ ಹಾಕಲಾಗುವದು. ಅಲ್ಲದೆ ಇಡೀ ರಾಜ್ಯಾದ್ಯಂತ ಓಡಾಡದಂತೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. 
ಎ.ಐ.ಡಿ.ಎಸ್.ಓನ ಜಿಲ್ಲಾಧ್ಯಕ್ಷರಾದ ಸುನೀಲ ಸಿದ್ರಾಮಶೆಟ್ಟಿ ಮಾತನಾಡಿ, ಇಂದು 2010 ಸ್ಕೀಮ್ ವಿದ್ಯಾರ್ಥಿಗಳಿಗೆ ಇಯರ್ ಬ್ಯಾಕ್ ಹಾಗೂ ಕ್ರಿಟಿಕಲ್ ಇಯರ್ ಬ್ಯಾಕ್ ಪದ್ಧತಿಯನ್ನು ಈ ವರ್ಷದ ಮಟ್ಟಿಗೆ ಹಿಂಪಡೆಯಬೇಕು. ಸಿಬಿಸಿಎಸ್ ವಿದ್ಯಾರ್ಥಿಗಳಿಗೆ ಸಪ್ಲಿಮೆಂಟರಿ ಪರೀಕ್ಷೆ ನಡೆಸಬೇಕು. ಈ ಎರಡು ಬೇಡಿಕೆಗಳನ್ನು ಈ ಕೂಡಲೇ ಈಡೇರಿಸಲು ವಿಟಿಯು ಕುಲಪತಿಗಳಿಗೆ ಎಐಡಿಎಸ್‍ಒ ಹಾಗೂ ವಿಟಿಯು ವಿದ್ಯಾರ್ಥಿ ಹೋರಾಟ ಸಮಿತಿ ಆಗ್ರಹಿಸುತ್ತದೆ. ಇಲ್ಲವಾದಲ್ಲಿ ಈ ಹೋರಾಟವನ್ನು ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. 
ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಸಂಚಾಲಕರುಗಳಾದ ಭರತಕುಮಾರ ಪವಾರ್, ಸಂಗಮೇಶ, ಮತ್ತು ವಿಜಯಲಕ್ಷ್ಮೀ ಹಾಗೂ ಎ.ಐ.ಡಿ.ಎಸ್.ಓನ ಜಿಲ್ಲಾಕಾರ್ಯದರ್ಶಿಗಳಾದ ಶೋಭಾ ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಅಮಿತ್,  ಹರೀಶ್, ವಾಣಿ ಬಿಜ್ಜೂರ, ಕಾವೇರಿ, ಭಾಗ್ಯ, ಆದಿಬಾ, ಪೂಜಾ, ವಿಶ್ವನಾಥ, ಸಾಗರ, ಅಲಿ, ಅವಿನಾಶ, ವಿನೋದ, ತುಕಾರಾಮ, ಶಿವು, ಪ್ರವೀಣ, ವರ್ಷಾ, ಅಂಬಿಕಾ, ನೇತ್ರಾ, ಯೋಗೇಶ, ರಾಜೇಶ, ಸಚೀನ, ಅಕ್ಷಯ, ಸುರೇಖಾ, ಕವಿತಾ ಮುಂತಾದವರು ಭಾಗವಹಿಸಿದ್ದರು.