ಬಿಜೆಪಿಯವರು ಪ್ರಚಾರ ಮಾಡಿಬಂದರೆ ಸಾಲದು ಕನ್ನಡಿಗರ ನೋವನ್ನು ಆಲಿಸಬೇಕು : ಸಚಿವ ಜಾರಕಿ ಹೋಳಿ

ಬಿಜೆಪಿಯವರು ಪ್ರಚಾರ ಮಾಡಿಬಂದರೆ ಸಾಲದು ಕನ್ನಡಿಗರ ನೋವನ್ನು ಆಲಿಸಬೇಕು : ಸಚಿವ ಜಾರಕಿ ಹೋಳಿ

ಬೆಳಗಾವಿ, ಸೆ.27: ಬಿ.ಜೆ.ಪಿಯವರು ಗೋವಾಕೆ ಹೋಗಿ ಚುನಾವಣೆ ಪ್ರಚಾರ ಮಾಡಿ ಬಂದರೆ ಸಾಲದು ಅಲ್ಲಿರುವ ಕನ್ನಡಿಗರ ಮೇಲೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸುವ ಕೆಲಸ ಮಾಡಬೇಕು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೋಳಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಗೋವಾ ಕನ್ನಡಿಗರ ಮೇಲಿನ ದೌರ್ಜನ್ಯ ಮಾಧ್ಯಮಗಳಿಂದ ಗೊತ್ತಾಗಿದೆ. ಕರ್ನಾಟಕ ಸರ್ಕಾರ ಗೋವಾ ಕನ್ನಡಿಗರ ಪರವಿದೆ. ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಈ ವಿಚಾರದ ಬಗ್ಗೆ  ಚರ್ಚಿಸುವೆ.ಗೋವಾದ ಕನ್ನಡಿಗರ ಹಿತ ಕಾಪಾಡಲು ನಮ್ಮ  ಸರ್ಕಾರ ಬದ್ಧವಿದೆ. ಸೌಂದರ್ಯದ ಹೆಸರಲ್ಲಿ ಕನ್ನಡಿಗರನ್ನು ಬೀದಿಗೆ ತಳ್ಳುತ್ತಿರುವುದು ಸರಿಯಲ್ಲ. ಈ ನಮ್ಮ ರಾಜ್ಯದ ಬಿಜೆಪಿ ನಾಯಕರು ಗೋವಾ ಸರ್ಕಾರಕ್ಕೆ ಅನ್ಯಾಯದ ಬಗ್ಗೆ ಹೇಳಬೇಕು. ಕೇವಲ ಚುನಾವಣೆ ಪ್ರಚಾರಕ್ಕೆ ಹೋಗಿ ಭಾಷಣ ಮಾಡಿದರೆ ಯಾವುದೇ ಪ್ರಯೋಜನವಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.