ಪತ್ನಿಯ ಕೊಲೆಗೈದು ಒಂದು ವರ್ಷ ತಲೆಮರೆಸಿಕೊಂಡಿದ್ದ ಪತಿಯ ಬಂಧನ!

ಪತ್ನಿಯ ಕೊಲೆಗೈದು ಒಂದು ವರ್ಷ ತಲೆಮರೆಸಿಕೊಂಡಿದ್ದ ಪತಿಯ ಬಂಧನ!

ವಿಜಯಪುರ, ಸೆ.9: ಸೀಮೆಎಣ್ಣೆ ಸುರುವಿ ಬೆಂಕಿ ಹಚ್ಚಿ ಪತ್ನಿಯ ಕೊಲೆಗೈದು ಕಳೆದೊಂದು ವರ್ಷದಿಂದ ಪರಾರಿಯಾಗಿದ್ದ ಆರೋಪಿ ಪತಿಯನ್ನು ಬಂಧಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಜಯಪುರ ತಾಲೂಕು ಆಹೇರಿ ಗ್ರಾಮದ ಆರೋಪಿ ಮೈಬೂಬ ನಬಿಸಾಬ ಮುಲ್ಲಾ(35) ಎಂಬಾತನೇ ಬಂಧಿತ ಆರೋಪಿ. ಈತ 2016 ರ ಜುಲೈ 5 ರಂದು ರಾತ್ರಿ ತನ್ನ ಹೆಂಡತಿ ಫಾತಿಮಾಳ ಜೊತೆ ಜಗಳ ತೆಗೆದು ಹೊಡಿಬಡಿ ಮಾಡಿ ಕೊನೆಗೆ ಅವಳ ಮೇಮೇಲೆ ಸೇಮೆಎಣ್ಣೆ ಸುರುವಿ ಬೆಂಕಿ ಹಚ್ಚಿದ್ದ. ತೀವ್ರವಾಗಿ ಗಾಯಗೊಂಡಿದ್ದ ಫಾತೀಮಾ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುವಾಗ ಸಾವನ್ನಪ್ಪಿದ್ದಳು. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಗ್ರಾಮೀಣ ವೃತ್ತದ ಸಿಪಿಐ ಆರ್.ಎಸ್.ಚೌಧರಿ ಅವರು ಪ್ರಕರಣದ ಮುಂದಿನ ತನಿಖೆ ವಹಿಸಿಕೊಂಡು ಒಂದು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಈ ತನಿಖಾ ತಂಡವು ತಲೆ ಮರೆಸಿಕೊಂಡಿದ್ದ ಆರೋಪಿ ಮೈಬೂಬ ನಬಿಸಾಬ ಮುಲ್ಲಾ ಈತನನ್ನು ಮಹಾರಾಷ್ಟ್ರದ ಕರಾಡ ಬಸ್‍ನಿಲ್ದಾಣ ಬಳಿ ವಶಕ್ಕೆ ಪಡೆದುಕೊಂಡು ವಿಜಯಪುರ ಗ್ರಾಮೀಣ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೊಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದು, ಆತನನ್ನು ಗುರುವಾರ ಮಧ್ಯಾಹ್ನ ದಸ್ತಗಿರಿ  ಮಾಡಿ  ನ್ಯಾಯಾಲಯಕ್ಕೆ ಹಾಜರುಪಡಿಸಿದೆ ಎಂದು ಎಸ್ಪಿ ಕುಲದೀಪ್ ಜೈನ್ ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿರುವ ಪೊಲೀಸ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಅವರು ಶ್ಲ್ಯಾಘಿಸಿದ್ದಾರೆ.