ವಸತಿ ಯೋಜನೆ : ಮಾಜಿ ದೇವದಾಸಿ ಮಹಿಳೆಯರಿಂದ ಅರ್ಜಿ

ವಸತಿ ಯೋಜನೆ : ಮಾಜಿ ದೇವದಾಸಿ ಮಹಿಳೆಯರಿಂದ ಅರ್ಜಿ

ಬಾಗಲಕೋಟೆ ,ಜೂ,14:  ಪ್ರಸಕ್ತ ಸಾಲಿಗೆ ಮಾಜಿ ದೇವದಾಸಿ ಮಹಿಳೆಯರಿಗೆ ವಿಶೇಷ ವಸತಿ ಯೋಜನೆ ಅಡಿಯಲ್ಲಿ 1993-94 ಹಾಗೂ 2007-08ರ ಸಮೀಕ್ಷೆಯಲ್ಲಿ ದಾಖಲಾಗಿರುವ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

    ಅರ್ಜಿ ಸಲ್ಲಿಸುವ ಮಾಜಿ ದೇವದಾಸಿ ಮಹಿಳೆಯರು ಕರ್ನಾಟಕ ರಾಜ್ಯದಲ್ಲಿ ಖಾಯಂ ನಿವಾಸಿಗಳಾಗಿದ್ದು, ವಾರ್ಷಿಕ ಆದಾಯ ರೂ.40 ಸಾವಿರ ಮೀರಬಾರದು, ಸ್ವಂತ ಹೆಸರಿನಲ್ಲಿ 20*15 ಅಳತೆಯ ನಿವೇಶನ ಉತಾರ, ಚುನಾವಣಾ ಗುರುತಿನ ಚೀಟಿ, ರೇಷನ್ ಕಾರ್ಡ, ಆಧಾರ ಕಾರ್ಡ ಸೇರಿದಂತೆ ಇತರೆ ದಾಖಲಾತಿಗಳೊಂದಿಗೆ ಇತ್ತೀಚಿನ ಭಾವಚಿತ್ರದೊಂದಿಗೆ ಮೂರು ಪ್ರತಿಗಳಲ್ಲಿ ಅರ್ಜಿಯನ್ನು ಜುಲೈ 4 ರೊಳಗಾಗಿ ಸಲ್ಲಿಸುವಂತೆ ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂಸಂ.08354-233184 ಗೆ ಸಂಪರ್ಕಿಸಬಹುದಾಗಿದೆ.