ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಪೊಸ್ಟಮನ್ ಸದಾಶಿವ ಉತ್ತೂರ 

ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಪೊಸ್ಟಮನ್ ಸದಾಶಿವ ಉತ್ತೂರ 

ಮುಧೋಳ , 4: ಮುಧೋಳ ನಗರದ  ಪೊಸ್ಟಮನ್ ಸದಾಶಿವ ಉತ್ತೂರ ಇವರು, ವೃದ್ದಾಪ್ಯ ವೇತನವನ್ನು ಫಲಾನುಭವಿಗಳು ಇರುವಲ್ಲಿಗೆ ಹೋಗಿ, ಪ್ರಾಮಾಣಿಕವಾಗಿ ನೀಡುತ್ತಿರುವುದು, ಸ್ಥಳಿಯರಲ್ಲಿ ಸಂತಸ ಮೂಡಿಸಿದೆ.

ಕಳೆದ 19 ವರ್ಷಗಳಿಂದ ಪೊಸ್ಟಮನ್ ಸೇವೆ ಮಾಡುತ್ತೀರುವ ಸದಾಶಿವ ಉತ್ತೂರ ಇವರು, ವೃದ್ದಾಪ್ಯ ವೇತನ, ಅಂಗವಿಕಲರ ವೇತನ, ಪಿಂಚಣಿಗಳನ್ನು ಸಂಭಂಧಪಟ್ಟ ಫಲಾನುಭವಿಗಳಿಗೆ ಮನೆ ಮನೆಗೂ ತೆರಳಿ ಕೊಡುತ್ತಿರುವುದು, ಫಲಾನುಭವಿಗಳ ಮುಖದಲ್ಲಿ ಮಂದಹಾಸ ಮೂಡಿಸುತ್ತದೆ. ಕೆಲಸಗಳ ಒತ್ತಡದಲ್ಲಿಯೂ, ಈ ರೀತಿಯ ಸೇವೆ ಮಾಡುತ್ತಿರುವ  ಇವರು ರಜಾದಿನ ಇದ್ದರು, ತಮ್ಮ ಕಾಯಕ ಬಿಡದೆ ಮಾಡುತ್ತಿರುವ ಪ್ರಾಮಾಣಿಕ ಪೊಸ್ಟಮನ್. ಈ ಸಂಧರ್ಬದಲ್ಲಿ ಸದಾಶಿವ ಉತ್ತೂರ ಅವರು ಮಾತನಾಡಿ, ತಮ್ಮ ಅನುಭವ ಹಂಚಿಕೊಂಡರು. ಇದೇ ಸಂಧರ್ಭದಲ್ಲಿ  ಮಾತನಾಡಿದ, ಫಲಾನುಭವಿಗಳು ಅವರ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.