ಎಚ್.ಡಿ.ಕೋಟೆ ಜೆಡಿಎಸ್ ಶಾಸಕ ಚಿಕ್ಕಮಾದು ಇನ್ನಿಲ್ಲ.

ಎಚ್.ಡಿ.ಕೋಟೆ ಜೆಡಿಎಸ್ ಶಾಸಕ ಚಿಕ್ಕಮಾದು ಇನ್ನಿಲ್ಲ.

ಕೆ.ಆರ್.ನಗರ ನ,01: ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕ್ಕಮಾದು ಅವರ, ಒಂದು ವರ್ಷದಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ಶಾಸಕ ಚಿಕ್ಕಮಾದು ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಹಾಗೂ ಚಿಕ್ಕಮಾದು ಹಿರಿಯ ಪತ್ನಿ ಜಯಮ್ಮ ಮತ್ತು ಕಿರಿಯ ಪತ್ನಿ ನಾಗಮ್ಮ ಮತ್ತು ನಾಲ್ವರು ಮಕ್ಕಳನ್ನು ಅಗಲಿದ್ದಾರೆ.
ಕೆ.ಆರ್ ನಗರ ತಾಲೂಕು ಕಲ್ಲಹಳ್ಳಿ ಗ್ರಾಮದ ಚಿಕ್ಕಮಾದು, ಹುಣಸೂರು ತಾಲೂಕಿನ ಹೊಸ ರಾಮೇನಹಳ್ಳಿ ಗ್ರಾಮದಲ್ಲಿ ಹಲವು ವರ್ಷಗಳ ಕಾಲ ವಾಸವಿದ್ದು, ಬಳಿಕ ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ಪ್ರಸ್ತುತ ವಾಸಿಸತೊಡಗಿದರು. 1978 ರಲ್ಲಿ ರಾಜಕೀಯಕ್ಕೆ ಧುಮುಕಿದ ಚಿಕ್ಕಮಾದು, ದೇವರಾಜು ಅರಸು ನೇತೃತ್ವದಲ್ಲಿ ಬಿಳಿಕೆರೆ ಕ್ಷೇತ್ರದ ಜಿ.ಪಂ. ಸದಸ್ಯರಾದರು, ತದನಂತರ 1991 ರಲ್ಲಿ ಕಾಂಗ್ರೆಸ್'ನಿಂದ ಹುಣಸೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ತದನಂತರ ರಾಜಕೀಯ ಬದಲಾವಣೆಯಾಗಿ ಜಿಟಿಡಿ ನೇತೃತ್ವದಲ್ಲಿ 2007-08 ರಲ್ಲಿ ಜೆಡಿಎಸ್ ಎಂಎಲ್'ಸಿಯಾಗಿ, ಆ ಬಳಿಕ 2013 ರಲ್ಲಿ ಹೆಚ್ ಡಿ ಕೋಟೆ ಕ್ಷೇತ್ರದಿಂದ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದರು.