ನಾವೇ ಕಿಂಗ್ ಎಂದ್ರು ಎಚ್ ಡಿ ದೇವೇಗೌಡ್ರು

ನಾವೇ ಕಿಂಗ್ ಎಂದ್ರು ಎಚ್ ಡಿ ದೇವೇಗೌಡ್ರು

ರಾಜ್ಯ ವಿಧಾನಸಭೆ ಚುನಾವಣೆ ನಿಮಿತ್ತ ಇಂದು ಖಾಸಗಿ ಹೊಟೇಲ್‍ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್ ಡಿ ದೇವೇಗೌಡ್ರು, ನಾವು ಕಿಂಗ್ ಮೇಕರ್ ಅಲ್ಲ, ನಾವೇ ಕಿಂಗ್ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಘೋಷಿಸಿದರು.  

ಈ ಸಲ ಜೆಡಿಎಸ್ ಕಿಂಗ್ ಮೇಕರ್ ಎಂದು ಬೇರೆ ಪಕ್ಷಗಳವರು ಹೇಳುತ್ತಿದ್ದಾರೆ. ಆದರೆ ನಾವ್ಯಾಕೆ ಕಿಂಗ್ ಮೇಕರ್ ಆಗಬೇಕು. ನಾವೇ ಕಿಂಗ್ ಎಂದು ಹೇಳಿದರು. 

ಇನ್ನು ಕೇವಲ ಇಷ್ಟೆಯಲ್ಲದೆ ಈ ಬಾರಿಯ ಚುನಾವಣೆಯಲ್ಲಿ ಹತ್ತರಿಂದ ಹನ್ನೆರಡು ಮಂದಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಬಿಎಸ್‍ಪಿಯಿಂದಲೂ ಐದಾರು ಮಂದಿ ಗೆಲ್ಲುತ್ತಾರೆ. ಇವರೆಲ್ಲ ನಮ್ಮ ಪಕ್ಷಕ್ಕೆ ಬೆಂಬಲ ಕೊಡುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ ನಾವು ಸ್ವತಂತ್ರವಾಗಿ ಸರ್ಕಾರ ರಚಿಸುತ್ತೇವೆ. ಎಚ್.ಡಿ.ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.