ತುಳಸಿಗೇರಿಯ ಆಂಜೇಯನ ದೇವಾಸ್ಥಾನದಲ್ಲಿ ಗೋಪಾಳ ತುಂಬುವ ಕಾರ್ಯಕ್ರಮ

ತುಳಸಿಗೇರಿಯ ಆಂಜೇಯನ ದೇವಾಸ್ಥಾನದಲ್ಲಿ ಗೋಪಾಳ ತುಂಬುವ ಕಾರ್ಯಕ್ರಮ

ಬಾಗಲಕೋಟೆ, 4:  ತಾಲೂಕಿನ ತುಳಸಿಗೆರಿಯಲ್ಲಿ ಕಳೆದ 5 ದಿನಗಳಿಂದ ನಡೆದ ಜಾತ್ರಾಮಹೋತ್ಸವ. ನಿನ್ನೆ ಹುಣ್ಣಿಮೆಯಂದು ಆಂಜನೇಯನಿಗೆ 'ತುಂಬಿದ ಅಣ್ಣ'ದ ನೈವೇದ್ಯ ಕಾರ್ಯಕ್ರಮ ನಡೆಯಿತು. ಸಂಜೆ ಗೋಪಾಳ ತುಂಬುವ ಪೂಜಾಕಾರ್ಯಾಕ್ರಮ ಅತಿ ವಿಜೃಂಭಣೆಯಿಂದ ನೆರವೇರಿತು. 
  

 ಮಣ್ಣಿನ ಮಡಿಕೆಯಲ್ಲಿ ಆಹಾರ ತಯಾರಿಸಿದ್ದು ಈ ಪೂಜೆಯಲ್ಲಿ ವಿಶೇಷವಾಗಿತ್ತು. ದೇವಸ್ಥಾನ ಆವರಣದ ನಿಗದಿತ ಸ್ಥಳದಲ್ಲಿ ಮಡಿಯಿಂದ ಕುಂಬಾರ ತಾನು ಮನೆಯಿಂದ ತಂದ ಹೊಸ-ಹೊಸ ಮಡಿಕೆಯನ್ನು ತೊಳಿಯದೇ ಅದರಲ್ಲಿಯೇ ಅಣ್ಣ, ಹೆಸರುಬೆಳೆ ಪಾಯಸ , ಜೋಳ ಕುಟ್ಟಿ ಕಿಚಡಿಯನ್ನು ತಯಾರಿಸುತ್ತಾರೆ. ಈ ಕಿಚಡಿಯ ಮಡಿಕೆಯನ್ನು, ಹೆಸರು ಬೆಳೆಯ ಕಡಬನ್ನು, ಅಣ್ಣದ ಮಡಿಕೆಯನ್ನು ತೆಗೆದುಕೊಂಡು ಹೋಗಿ ಆಂಜನೇಯನಿಗೆ ನೈವೇದ್ಯ ಮಾಡುತ್ತಾರೆ. ನಂತರ ಅದೇ ಮಡಿಕೆಯ ನೈವೇದ್ಯವನ್ನು ದಾಸರು ಸೇರಿದಂತೆ ಎಲ್ಲ ಜನರಿಗೆ ಗೋಪಾಳ ತುಂಬುವುದು ವಿಶೇಷವಾಗಿತ್ತು.

    ಗೋಪಾಳದ ನಂತರ ಮಡಿಕೆಯ ನೀರನ್ನು ತೀರ್ಥದಂತೆ ಕೈಯಲ್ಲಿ ಹಿಡಿದು ಗೋವಿಂದ ...! ಗೋವಿಂದ ಎಂದು ಘೋಷಿಸುತ್ತಾ ಭೂಮಿಗೆ ಅರ್ಪಿಸುತ್ತಾರೆ. ಆಂಜನೇಯನ ಪೂಜಾರಿಗಳು ಬಂದ ಭಕ್ತರಿಗೆ ಗೋಪಾಳ ತುಂಬಿ, ಕೈಗೆ ಒಂದು ನಾಣ್ಯ ನೀಡುವದು ಕಂಡುಬಂದಿತು.