ಗೌರಿ ಲಂಕೇಶ ಕೋಮು ಸಾಮರಸ್ಯಕ್ಕಾಗಿ ದುಡಿದವರು: ಎಐಡಿಎಸ್‍ಓ ಮಹಾಂತೇಶ ಹೇಳಿಕೆ

ಗೌರಿ ಲಂಕೇಶ ಕೋಮು ಸಾಮರಸ್ಯಕ್ಕಾಗಿ ದುಡಿದವರು: ಎಐಡಿಎಸ್‍ಓ ಮಹಾಂತೇಶ ಹೇಳಿಕೆ

ವಿಜಯಪುರ,ಸೆ.6: ನಮ್ಮೆಲ್ಲಾ ಶಕ್ತಿಯನ್ನು ಒಗ್ಗೂಡಿಸಿ, ಈ ಕಡು ಹೇಡಿತನದ ಕೃತ್ಯವನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಅವರು ಕೋಮು ಸಾಮರಸ್ಯಕ್ಕಾಗಿ ದುಡಿದವರು ಮತ್ತು ಸಿಟಿಜನ್ಸ್ ಫಾರ್ ಫೀಸ್ ಜೊತೆಯಲ್ಲಿ ಗುರುತಿಸಿ ಕೊಂಡವರು. ಅವರು ಎಲ್ಲ ಕೋಮುವಾದಿ, ಜಾತಿವಾದಿ ಮತ್ತು ಪ್ರಗತಿವಿರೋಧಿ ಶಕ್ತಿಗಳ ವಿರುದ್ಧ ನಿಂತವರು ಎಂದು ಮಹಾಂತೇಶ  ಮುಖಂಡರಾದ ಎಐಡಿಎಸ್‍ಓ ಎಂದು ಮಾತನಾಡಿದರು.
ಖ್ಯಾತ ಹಿರಿಯ ಪತ್ರಕರ್ತೆ, ವಿಚಾರವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಗೌರಿ ಲಂಕೇಶ್‍ರವರ ಬರ್ಬರ ಹತ್ಯೆಯ ಬಗ್ಗೆ ಎಐಡಿವೈಓ, ಹಾಗೂ ಎಐಡಿಎಸ್‍ಓ ತೀವ್ರಆಘಾತವನ್ನು ವ್ಯಕ್ತಪಡಿಸುತ್ತವೆ.
    ಅವರು ಜನರ ಹಿತಾಸಕ್ತಿಯ ಪರವಾಗಿ ಅದರಲ್ಲೂ ನಿರ್ದಿಷ್ಟವಾಗಿ ತುಳಿತಕ್ಕೊಳಗಾದ ವಿಭಾಗದ ಜನರ ಪರವಾಗಿ ನಿಲುವು ತಳೆದವರು. ಅವರು ತಮ್ಮ ಲೇಖನಿಯ ಮೂಲಕ ಜನತಾಂತ್ರಿಕ ಆಶಯಗಳನ್ನು ಮತ್ತು ಜನತೆಯ ಹಕ್ಕುಗಳನ್ನು ಎತ್ತಿಹಿಡಿದವರೂ ಕೂಡ.
ಗೌರಿ ಲಂಕೇಶ್‍ರ ಹತ್ಯೆಯ ಹಿಂದಿರುವ ಸತ್ಯವನ್ನು ಹೊರಗೆಳೆಯುವಲ್ಲಿ ರಾಜ್ಯ ಸರ್ಕಾರವು ಯಾವುದೇ ವಿಳಂಬಕ್ಕೆ ಅವಕಾಶ ನೀಡದೆ, ತತ್‍ಕ್ಷಣವೇ ಕಾರ್ಯತತ್ಪರವಾಗಬೇಕು ಮತ್ತು ನಿಷ್ಪಕ್ಷಪಾತ ಹಾಗೂ ತ್ವರಿತಗತಿಯ ತನಿಖೆಯನ್ನು ನಡೆಸಬೇಕು ಎಂದು ನಾವು ಆಗ್ರಹಿಸುತ್ತೇವೆ. ಯಾವುದೇರಾಜಕೀಯ ಶಕ್ತಿಗಳು ತನಿಖೆಯಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಬೇಕು. ಈ ಹೇಯಕೃತ್ಯಕ್ಕೆ ಕಾರಣರಾದವರನ್ನು ಹಿಡಿಯಲು ಸರ್ಕಾರವು ತನ್ನ ರಾಜಕೀಯ ಇಚ್ಛಾಶಕ್ತಿಯನ್ನು ಹಾಗೂ ತುರ್ತನ್ನು ಪ್ರದರ್ಶಿಸಬೇಕು ಎಂದು ಎಐಡಿವೈಓ, ಹಾಗೂ ಎಐಡಿಎಸ್‍ಓ ಒತ್ತಾಯಿಸುತ್ತವೆ.” 
 ಮುತ್ತು, ಮಹಾಂತೇಶ, ಮಹಾನಂದ, ಲಾವಣ್ಯಾ, ಆಶಾ, ದಿವ್ಯಾ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.