ಬಡ ರೋಗಿಗಳಿಗೆ ಉಚಿತ ತಪಾಸಣೆ ಶಿಬಿರ 

ಬಡ ರೋಗಿಗಳಿಗೆ ಉಚಿತ ತಪಾಸಣೆ ಶಿಬಿರ 

ವಿಜಯಪುರ ಡಿ,17: ನಗರದ ಮಳಗಿ ಚಿಕ್ಕಮಕ್ಕಳ ಆಸ್ಪತ್ರೆಯಲ್ಲಿ ವಾರ್ಷಿಕೋತ್ಸವ ನಿಮಿತ್ಯ ಬಡರೋಗಿಗಳಿಗೆ ಉಚಿತ ತಪಾಸಣೆ ಹಾಗೂ ಬಡವರಿಗಾಗಿ ವಿಶೇಷ ಘಟಕ ಉದ್ಘಾಟನೆ ಕಾರ್ಯಕ್ರಮ ಶನಿವಾರ ಜರುಗಿತು.

ಈ ಸಂದರ್ಭದಲ್ಲಿ ಸಂಸದೀಯ ಕಾರ್ಯದರ್ಶಿ ಹಾಗೂ ವಿಜಯಪುರ ನಗರ ಶಾಸಕ ಡಾ. ಮಕ್ಬುಲ ಬಾಗವಾನ ಅವರು ಶಿಬಿರವನ್ನು ಉದ್ಘಾಟಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಡಾ.ಎನ್.ಎನ್.ಮಳಗಿ ಅವರು ಬಡತನದಿಂದ ಮೇಲೆ ಬಂದು ವೈದ್ಯ ವೃತ್ತಿಯಿಂದ ಪಡೆದು, ಅವರ ಜೀವನದ ಕಷ್ಟಕಾಲದ ದಿನಗಳು ನೆನಪಿಸಿ ಇಂದು ಅವರ ಆಸ್ಪತ್ರೆ ವಾರ್ಷಿಕೋತ್ಸವ ನಿಮಿತ್ಯ ನಗರದ ಬಡ ರೋಗಿಗಳಿಗೆ ಉಚಿತ ತಪಾಸಣೆ ಶಿಬಿರ ಹಾಗೂ ಬಡವರಿಗಾಗಿ ಅತಿ ಕಡಿಮೆ ದರದಲ್ಲಿ ವಾರ್ಡಿನ ವ್ಯವಸ್ಥೆ ಮಾಡಿದ್ದನ್ನು ಶ್ಲಾಘಿಸಿ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತಾ ನಗರದ ಇನ್ನೂಳಿದ ವೈದ್ಯ ತಜ್ಞರು ಬಡವರಿಗಾಗಿ ಇಂತಹ ಸೇವೆಯನ್ನು ಬಡವರಿಗಾಗಿ ಕಲ್ಪಿಸಿಕೊಡಲು ಮುಂದು ಬರಬೇಕೆಂದು ವಿನಂತಿಸಿದರು.

ಸಮಾರಂಭದಲ್ಲಿ ವಿಡಿಎ ಅಧ್ಯಕ್ಷ  ಅಜಾದ ಪಟೇಲ ಮಹಾನಗರ ಪಾಲಿಕೆ ಸದಸ್ಯ ಅಜೀಮ ಇನಾಂದಾರ, ಡಾ.ಪ್ರಭುಗೌಡ ಪಾಟೀಲ, ಡಾ.ಜ್ಯೋತಿ ಕೊರಬು, ಸಮಾಜ ಸೇವಕ ಶಕೀಲ ಬಾಗಮಾರೆ ಹಾಗೂ ಇತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.