133ನೇ ಜನ್ಮದಿನೋತ್ಸವ ಸಮಾರಂಭದಲಿ ಸಾಧಕರಿಗೆ ಸನ್ಮಾನ 

133ನೇ ಜನ್ಮದಿನೋತ್ಸವ ಸಮಾರಂಭದಲಿ ಸಾಧಕರಿಗೆ ಸನ್ಮಾನ 

ಧಾರವಾಡ,ಅ.10: ವಿಜಯಪುರದ ಶಿಕ್ಷಣ ಚೇತನ ಬಳಗದ ಅಧ್ಯಕ್ಷ ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೋ ಅನಂತ  ಹ ಪಾಟೀಲರನ್ನು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ,  ಈಚೆಗೆ ಧಾರವಾಡದ ಆಲೂರ ವೆಂಕಟರಾವ ಸಭಾಭವನದಲ್ಲಿ ಆಯೋಜಿಸಲಾಗಿದ್ದ  ದಿ.  ಹುಯಿಲಗೋಳ ನಾರಾಯಣರಾಯರ 133ನೇ ಜನ್ಮದಿನೋತ್ಸವ ಸಮಾರಂಭದಲ್ಲಿ  ಸನ್ಮಾನಿಸಲಾಯಿತು. 
    ಈ ಸಂದರ್ಭದಲ್ಲಿ ಕನ್ನಡ ಸಂಸ್ಕøತಿ ಇಲಾಖೆಯ ನಿರ್ದೆಶಕ ವಿಶುಕುಮಾರ ಹಾಗೂ ಶಾಸಕ ಅರವಿಂದ ಬೆಲ್ಲದ  ಮುಂತಾದವರು ಇದ್ದರು. ಪಾಟೀಲರೊಂದಿಗೆ ಹಿರಿಯ ಕವಿ ವಿ ಸಿ ಐರಸಂಗ ಹಾಗೂ ಶ್ರೀಕಾಂತ ಕುಲಕರ್ಣಿ ಅವರನ್ನು ಸಹ ಸನ್ಮಾನಿಸಲಾಯಿತು.