ರೈತರ ಸಾಲಮನ್ನಾ ಮಾಡಬೇಕು: ರೈತ ಸಂಘ ಮನವಿ

ರೈತರ ಸಾಲಮನ್ನಾ ಮಾಡಬೇಕು: ರೈತ ಸಂಘ ಮನವಿ

ವಿಜಯಪುರಜೂ.15: ಕರ್ನಾಟಕ ಪ್ರಾಂತ ರೈತ ಸಂಘ, ಅಖಂಡ ರಾಜ್ಯ ರೈತ ಸಂಘ, ಭಾರತೀಯ ಕಿಸಾನ ಸಭಾ ಜಂಟಿಯಾಗಿ ರೈತರ ಸಾಲಮನ್ನಾ ಮಾಡಬೇಕು. ಬೆಳೆಗೆ ವೈಜ್ಞಾನಿಕ ಬೆಲೆ ನಿಗಧಿ ಪಡಿಸಬೇಕು ಎಂದು ಘೋಷಣೆ ಕೂಗುತ್ತಾ ನಗರದ ಅಂಬೇಡ್ಕರ್ ವೃತ್ತದಿಂದ ಮೆರವಣಿ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾ ಡಾ. ಎಚ್.ಬಿ.ಬೂದೆಪ್ಪ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ 40,000 ಕೋಟಿ, ರಾಜ್ಯದಲ್ಲಿ ಸಹಕಾರಿ ಸಂಘ 10,000 ಕೋಟಿ, ಕೇಂದ್ರ ರಾಜ್ಯ ಒಬ್ಬರಮೇಲೊಬ್ಬರು ಹಾಕುತ್ತಾ ಇನ್ನೂವರೆಗೆ ರೈತರ ಸಾಲ ಮನ್ನಾ ಮಾಡಿಲ್ಲ. ಆರ್ಥಿಕ ಮಂತ್ರಿ ಜೆಟ್ಲಿ ಇವರು ಕೃಷಿ ಸಾಲ ಮನ್ನಾ ಮಾಡುವುದಿಲ್ಲ. ಯಾವ ರಾಜ್ಯದವರು ಸಾಲ ಮನ್ನಾ ಮಾಡುತ್ತಾರೋ ಅವರೇ ನೇರ ಹೊಣೆ ಎಂದು ಹೇಳಿಕೊಟ್ಟಿದ್ದನ್ನು ತೀವ್ರವಾಗಿ ಖಂಡಿಸಿದರು. ರೈತ ವಿರೋಧಿ ನೀತಿ ಕೇಂದ್ರ ಸರ್ಕಾರ ಇರುತ್ತದೆ. ರಾಜ್ಯ ಸರ್ಕಾರ 10,000 ಕೋಟಿ ಸಹಕಾರಿ ಸಂಘದ ಅದನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ವಿಜಯಪುರ ಜಿಲ್ಲೆ ತೀವ್ರ ಬರಗಲಾಕ್ಕೆ ತುತ್ತಾಗಿ ರೈತರು ಗುಳೆ ಹೋಗುತ್ತಾರೆ. ರೈತರ ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಎಸ್.ಎಮ್. ಸ್ವಾಮಿನಾಥ ವರದಿ ಪ್ರಕಾರ ಶೇ.50 ರಷ್ಟು ಖರ್ಚುವೆಚ್ಚ ರೈತರಿಗೆ ನೀಡುವಂತೆ 2006 ರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದರೂ ಇನ್ನೂವರೆಗೆ ನೀಡಿಲ್ಲ. ಈ ಕೂಡಲೆ ಇದನ್ನು ಜಾರಿಗೆ ಗೊಳಿಸಬೇಕು ಎಂದು ಆಗ್ರಹಿಸಿದರು.

ಈ ಸಂದಭದಲ್ಲಿ ಅಣ್ಣಾರಾಯ ಈಳಗೇರ ಮಾತನಾಡಿ, ಕೇಂದ್ರ ಸರ್ಕಾರ ದೊಡ್ಡ ಕೈಗಾರಿಕೆ ಹಾಗೂ ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡುತ್ತಿದ್ದರೆ ಆದರೆ ರೈತರ ಸಾಲ ಮನ್ನಾ ಮಾಡುವಲ್ಲಿ ಮೀನ ಮೇಷ ಎಣಿಸುತ್ತಿರುವ ಎಷ್ಟು ಸರಿ? ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ವಿರೋಧಿಸಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಖಂಡ ರಾಜ್ಯ ರೈತ ಸಂಘ ಅಧ್ಯಕ್ಷರು ಸಿದ್ರಾಮ ರಂಜಣಗಿ, ಕಾರ್ಯಾಧ್ಯಕ್ಷ ಗೊಲ್ಲಾಳಪ್ಪ ಗೌಡ, ಭಾರತೀಯ ಕಿಸಾನ ಸಭಾದ ಉತ್ತರ ಭಾಗದ ಅಧ್ಯಕ್ಷ ಗುರುನಾಥ ಬಗಲಿ, ಜಯಶ್ರೀ ಜಂಗಮಶೆಟ್ಟಿ ಮಾತನಾಡಿ, ರೈತರ ಬರಗಾಲದಲ್ಲಿ ಕಷ್ಟಕ್ಕೀಡಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿಲ್ಲ. ಉಳಿದ ರಾಜ್ಯಗಳು, ಪಂಜಾಂಬ, ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಇಲ್ಲಿ ರಾಜ್ಯ ಸರ್ಕಾರ ಮಾಡದಿದ್ದರೆ ಎಲ್ಲ ರೈತ ಸಂಘಟನೆ ಪದಾಧಿಕಾರಿಗಳು ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಗೌಡಪ್ಪಗೌಡ ಮೈಗೂರ,ಇದೇ ಸಂದರ್ಭ ರೈತರ ಸಾಲ ಮನ್ನಾ ಹಾಗೂ ರೈತರ ಆತ್ಮ ಹತ್ಯೆ ಮಾಡಿಕೊಳ್ಳದಂತೆ ಜಾಗೃತಿ ಕಾರ್ಯಕ್ರಮವನ್ನು ಸಮಯ ಟಿ.ವಿ.ವತಿಯಿಂದ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. 
ಈ ಸಂಧರ್ಭದಲ್ಲಿ ಪಾಂಡು ಹ್ಯಾಟಿ, ಬಾಪುಗೌಡ ಬಿರಾದಾರ, ಸಲೀಂ ನಾಯ್ಕೋಡಿ, ಸಿದ್ರಾಮ ಬಂಗಾರಿ, ಮುರುಗೇಂದ್ರ ಹುಣಶ್ಯಾಳ, ಜಿ.ಎಸ್. ಇಂಗಳಗಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.