ಅಭಿಮಾನಿಗಳ ವಿರುದ್ಧ ಕೂಗಾಡಿದ ಕುಮಾರಣ್ಣ..!

ಅಭಿಮಾನಿಗಳ ವಿರುದ್ಧ ಕೂಗಾಡಿದ ಕುಮಾರಣ್ಣ..!

ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ,ಪ್ರಚಾರದ ಸಂದರ್ಭದಲ್ಲಿ ಅಭಿಮಾನಗಳ ಮೇಲೆ ಕೋಪಗೊಂಡು ರೇಗಾಡಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮಕ್ಕೆ ಪ್ರಚಾರಕ್ಕೆಂದು ಹೋಗಿದ್ದರು. ಆಗ ಅಭಿಮಾನಿಗಳು ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಪರವಾಗಿ ರೋಡ್ ಶೋ ಆರಂಭಿಸಿದಾಗ ಬಸ್‍ನಿಂದ ಕೆಳಗಿಳಿದು ಪ್ರಚಾರ ಮಾಡಿ ಎಂದು ಕುಮಾರಸ್ವಾಮಿ ರವರಿಗೆ ಒತ್ತಾಯಿಸಿದ ಸಂದರ್ಭದಲ್ಲಿ, ಅಭಿಮಾನಿಗಳ ವಿರುದ್ಧ ಕುಮಾರಸ್ವಾಮಿ ರೇಗಾಡಿದ್ದು, ನನಗೆ ಸಮಯ ಇಲ್ಲ ಇನ್ನು ತುಂಬಾ ಗ್ರಾಮಗಳಿಗೆ ತೆರಳಬೇಕಿದೆ ಎಂದು ಹೇಳಿದ್ದಾರೆ.