ಡಿ.8ರಂದು ಉದ್ದಿಮೆದಾರರಿಗೆ ರಫ್ತು ತಿಳುವಳಿಕೆ ಕಾರ್ಯಕ್ರಮ

ಡಿ.8ರಂದು ಉದ್ದಿಮೆದಾರರಿಗೆ ರಫ್ತು ತಿಳುವಳಿಕೆ ಕಾರ್ಯಕ್ರಮ

ವಿಜಯಪುರ,ಡಿ.6: ಬೆಳಗಾವಿಯ ಡಿ.ಜಿ.ಎಫ್.ಟಿ., ಧಾರವಾಡದ ವಿ.ಟಿ.ಪಿ.ಸಿ. ಮತ್ತು ವಿಜಯಪುರ ಜಿಲ್ಲಾ ಕೈಗಾರಿಕಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಉದ್ದಿಮೆದಾರರಿಗೆ ರಫ್ತು ನೀತಿ ಹಾಗೂ ಸಹಾಯ ಸೌಲಭ್ಯಗಳ ಕುರಿತು ಡಿ.8 ರಂದು ನಗರದ ರುಡಸೆಟ್ ಸಂಸ್ಥೆಯಲ್ಲಿ ರಫ್ತು ತಿಳುವಳಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 
ಈ ಕಾರ್ಯಕ್ರಮದಲ್ಲಿ ರಫ್ತು ಮಾಢುತ್ತಿರುವ ಘಟಕಗಳು, ರಫ್ತು ಮಾಡಲಿಚ್ಛಿಸುವ ಉದ್ದಿಮೆದಾರರು, ವ್ಯಾಪಾರಸ್ಥರು, ರೈತರು ಹಾಗೂ ಈಗಾಗಲೇ ಇಂಪೋರ್ಟ್ ಎಕ್ಸ್‍ಪೋರ್ಟರ್ ಕೋಡ್ ಹೊಂದಿದವರಿಗೆ ಕರ್ನಾಟಕ ಕೈಗಾರಿಕಾ ನೀತಿ 2014-19ರನ್ವಯ ರಫ್ತಿಗೆ ದೊರಕುವ ಸೌಲಭ್ಯಗಳ ಕುರಿತು ಹಾಗೂ ರಫ್ತು ಮಾಡಲು ಇರುವ ಅವಕಾಶಗಳ ಕುರಿತು ಮಾಹಿತಿ ನೀಡಲಾಗುವುದು. ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ. 


ಡಿ.13 ರಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಪ್ರೆಂಟಿಸ್ ಕ್ಯಾಂಪಸ್ ಸಂದರ್ಶನ
ವಿಜಯಪುರ: ಬೆಂಗಳೂರಿನ ಬಿಎಚ್‍ಇಎಲ್ ವತಿಯಿಂದ ಜುಲೈ-2017ರ ಪರೀಕ್ಷೆಯಲ್ಲಿ ಉತ್ತೀರ್ಣರಾದ ಇಲೆಕ್ಟ್ರೀಷಿಯನ್, ಇಲೆಕ್ಟ್ರಾನಿಕ್ ಮೆಕ್ಯಾನಿಕ್, ಫಿಟ್ಟರ್, ಕೋಪಾ ತರಬೇತಿದಾರರಿಗೆ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಡಿ.13ರಂದು ಅಪ್ರೆಂಟಿಶಿಪ್ ಸಲುವಾಗಿ ಕ್ಯಾಂಪಸ್ ಸಂದರ್ಶನ ಹಮ್ಮಿಕೊಳ್ಳಲಾಗಿದೆ. 
ತರಬೇತಿದಾರರು ಸಂದರ್ಶನದ ಸದುಪಯೋಗ ಪಡೆದುಕೊಳ್ಳುವಂತೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯರು ತಿಳಿಸಿದ್ದಾರೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ  ಮೊ: 9742739357 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.