ಪ್ರತಿಯೊಬ್ಬ ಮಹಿಳೆಯರು ಶಿಕ್ಷಣವಂತರಾಗಬೇಕು - ರೇವಣಸಿದ್ದಯ್ಯ ಶ್ರೀಗಳು

ಪ್ರತಿಯೊಬ್ಬ ಮಹಿಳೆಯರು ಶಿಕ್ಷಣವಂತರಾಗಬೇಕು - ರೇವಣಸಿದ್ದಯ್ಯ ಶ್ರೀಗಳು

    ವಿಜಯಪುರ,ಅ.14: ಸಮಾಜದಲ್ಲಿ ಪ್ರತಿಯೊಬ್ಬ ಮಹಿಳೆಯರು ಶಿಕ್ಷಣವಂತರಾದರೆ ಸಮಾಜ ಮತ್ತು ಕುಟುಂಬವನ್ನು ಅಭಿವೃದ್ದಿಪಡಿಸಬಹುದಾಗಿದೆ ಎಂದು ಜಂಬಗಿ ಹಿರೇಮಠದ ವೇ.ಮೂರ್ತಿ ರೇವಣಸಿದ್ದಯ್ಯ ಸ್ವಾಮಿಗಳು ಹೇಳಿದರು.
    ಅವರು ವಿಜಯಪುರ ತಾಲೂಕಿನ ಜಂಬಗಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ, ಗ್ರಾಮ ಪಂಚಾಯತ ಸರಕಾರಿ ಪ್ರಾಥಮಿಕ ಶಾಲೆ ಜಂಬಗಿ ಹಾಗೂ ಶ್ರೀಶೈಲ ಶಿಕ್ಷಣ ಸಮೂಹ ಸಂಸ್ಥೆ ಜಂಬಗಿ ಇವರ ಸಂಯುಕ್ತ ಆಶ್ರಯದಲ್ಲಿ ಎರ್ಪಡಿಸಿದ್ದ ಬೇಟಿ ಬಚಾವೋ ಬೇಟಿ ಪಡಾವೋ ಜಾಗೃತಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 
    ಈಗ ಸಮಾಜದಲ್ಲಿ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇನ್ನೂ ಬಹುತೇಕ ಮಹಿಳೆಯರು ಶಿಕ್ಷಣವಂತರಾಗದೇ ಸರಕಾರದ ಹಾಗೂ ಸಮಾಜದ ಸೌಲಭ್ಯಗಳು ದೊರೆಯದೇ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಪ್ರತಿ ಮಹಿಳೆಯರು ಶಿಕ್ಷಣವಂತರಾದರೆ ಸಮಾಜದ ಮತ್ತು ಕುಟುಂಬದ ಸುರಕ್ಷತೆಯನ್ನು ಕಾಪಾಡಬಹುದಾಗಿದೆ ಎಂದರು.
    ಗ್ರಾಮ ಪಂಚಾಯತ ಕಾರ್ಯದರ್ಶಿ ಬಂಡೆಪ್ಪ ತೇಲಿ ಮಾತನಾಡಿ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ ರಾಜ ವ್ಯವಸ್ಥೆಯಲ್ಲಿ ಮಹಿಳೆಯರಿಗೆ 50 ಮೀಸಲಾತಿ ನೀಡಲಾಗಿದ್ದು ಪ್ರತಿ ಗ್ರಾಮ ಪಂಚಾಯತಿಯಲ್ಲಿ ಮಹಿಳೆಯರೆಹೆಚ್ಚು ಸಂಖ್ಯೆಯಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ.  ಆದರೆ ಅವರಿಗೆ ಸ್ವಾತಂತ್ರವಾಗಿ ಅಧಿಕಾರ ನಡೆಸಲು ಅವರು ಶಿಕ್ಷಣವಂತರಾಗಬೇಕು. ಶಿಕ್ಷಣದಿಂದಲೇ ಗ್ರಾಮೀಣ ಜನಜೀವನ ಸುಧಾರಣೆಯಾಗಲು ಸಾಧ್ಯ ಕೇಂದ್ರ ಸರಕಾರ ಸ್ವಚ್ಚ ಭಾರತ ಮಿಶನ್ ಅಡಿಯಲ್ಲಿ ಗ್ರಾಮೀಣ ಬಯಲು ಮಲವಿಸರ್ಜನೆ ನಿರ್ಮೂಲನಗೊಳಿಸಲು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಸರಕಾರ ಹಣ ನಿಯೋಗಿಸುತ್ತದೆ. ಪ್ರತಿಯೊಬ್ಬರು ತಮ್ಮ ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಆರೋಗ್ಯಪೂರ್ಣ ಸಮಾಜ ನಿರ್ಮಿಸಬೇಕು ಎಂದರು.
    ಸಮಾಜಿಕ ಕಾರ್ಯಕರ್ತ ಸಿದ್ದು ಗೆರಡೆ ಮಾತನಾಡಿ ಸಮಾಜದಲ್ಲಿ ಮಹಿಳೆಯರಿಗೆ ಸಾಮಾಜ ದ ಮತ್ತು ಸರಕಾರದ À ಹಕ್ಕುಗಳು ಸಮರ್ಪಕವಾಗಿ ದೊರೆಯಬೇಕು. ಅಂದಾಗ ಮಹಿಳೆಯರು ಆರ್ಥಿಕವಾಗಿ ಮುಂದೆ ಬರಲು ಸಾಧ್ಯ. ಸಮಾಜದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದಕ್ಕೆಲ್ಲ ಸಮಾಜದಲ್ಲಿನ ಅನಾಗರಿಕತೆ ಕಾರಣ. ಪ್ರತಿಮಹಿಳೆ ಶಿಕ್ಷಣವಂತರಾದರೆ ಇಂತಹ ಪ್ರಕರಣಗಳು ತಡೆಗಟ್ಟಲು ಸಾಧ್ಯ ಎಂದರು.
    ಗ್ರಾಮ ಪಂಚಾಯತ ಸದಸ್ಯರಾದ ಶ್ರೀಮತಿ ನೀಲಮ್ಮ ಸ. ನಾಯ್ಕೊಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಶ್ರೀಶೈಲ ಸವಳಿ, ಕರವೇ ಅಧ್ಯಕ್ಷರಾದ ಬಸವರಾಜ ಭಾವಿಮನಿ, ಶಿವಾನಂದ ಸವಳಿ, ಜಬ್ಬಾರ ಮುಲ್ಲಾ,  ಮುಂತಾದವರು ಉಪಸ್ಥಿತರಿದ್ದರು. ಪ್ರಕಾಶ ಅಚಡದ ಸ್ವಾಗತಿಸಿದರು. ಶ್ರೀಶೈಲ ಎಸ್. ನಾವಿ ನಿರೂಪಿಸಿದರು. ಪರಸರಾಮ ಸಂಖದ ವಂದಿಸಿದರು.