ನೀರಿನ ಸಮರ್ಪಕ ಶೇಖರಣೆಗೆ ಬಾಂದಾರ್-ಚೆಕ್‍ಡ್ಯಾಂ ನಿರ್ಮಾಣಕ್ಕೆ ಒತ್ತು

ನೀರಿನ ಸಮರ್ಪಕ ಶೇಖರಣೆಗೆ ಬಾಂದಾರ್-ಚೆಕ್‍ಡ್ಯಾಂ ನಿರ್ಮಾಣಕ್ಕೆ ಒತ್ತು

ವಿಜಯಪುರ,ಜೂ.19:ನೀರಿನ ಸಮರ್ಪಕ ಶೇಖರಣೆಗಾಗಿತ್ವರಿತಗತಿಯಲ್ಲಿ ಪೂರ್ಣಗೊಳ್ಳುವಂತಹ ಬಾಂದಾರ್ ಹಾಗೂ ಚೆಕ್‍ಡ್ಯಾಂಗಳ ನಿರ್ಮಾಣಕ್ಕೆ ಹೆಚ್ಚಿನ ಗಮನ ನೀಡಲಾಗುತ್ತಿದೆಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲ ಹೇಳಿದರು.

ಕಂಬಾಗಿ ಗ್ರಾಮದಲ್ಲಿಒಂದುಕೋಟಿರೂ.ವೆಚ್ಚದ ಕಂಬಾಗಿ ಹಳ್ಳಕ್ಕೆ ಬಾಂದಾರ ನಿರ್ಮಾಣಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದಅವರು, ಜಿಲ್ಲೆಯಾದ್ಯಂತ ಕಳೆದ ಹತ್ತು ವರ್ಷಗಳ ಕಾಲಾವಧಿಯಲ್ಲಿ ಅನೇಕ ಕೆರೆಗಳ ಅಭಿವೃದ್ದಿಗೆಕ್ರಮ ಕೈಗೊಳ್ಳಲಾಗಿದೆ.ಕನಮಡಿ, ಇಟ್ಟಂಗಿಹಾಳ, ಸೋಮದೇವರಹಟ್ಟಿ ಸೇರಿದಂತೆ ಹಲವಾರು ಕೆರೆಗಳ ಅಭಿವೃದ್ದಿಗೆಕ್ರಮ ಕೈಗೊಳ್ಳಲಾಗಿದೆ.ನೂರಕ್ಕೂ ಹೆಚ್ಚು ಬಾಂದಾರ್‍ಗಳನ್ನು ಸಹ ನಿರ್ಮಿಸಲಾಗಿದೆಎಂದಅವರು, ಪ್ರಸಕ್ತ ವರ್ಷಒಂದರಲ್ಲಿಯೇ 6 ತಿಂಗಳ ಅವಧಿಯಲ್ಲಿ 40ಕ್ಕೂ ಹೆಚ್ಚು ಬಾಂದಾರ್‍ಗಳನ್ನು ನಿರ್ಮಿಸಿ ನೀರು ಶೇಖರಣೆಗೆ ಗಮನ ನೀಡಲಾಗಿದೆಎಂದುಅವರು ಹೇಳಿದರು.

ಬೃಹತ್ ನೀರಾವರಿ ಯೋಜನೆಗಳಿಗೆ ಹೆಚ್ಚಿನಅನುದಾನದಜೊತೆಗೆ ಹೆಚ್ಚು ಕಾಲಾವಧಿ ಪಡೆಯುವದರಿಂದ ಬಾಂದಾರ್ ಮತ್ತುಚೆಕ್ ಡ್ಯಾಂಗಳನ್ನು ಅಲ್ಪಾವಧಿಯಲ್ಲಿಯೇ ಪೂರ್ಣಗೊಳಿಸಿ ನೀರನ್ನು ಶೇಖರಣೆಗೆ ಹೆಚ್ಚು ಗಮನ ನೀಡಲಾಗುತ್ತಿದೆಎಂದ ಸಚಿವರು, ರಾಜ್ಯ ಮತ್ತುರಾಷ್ಟ್ರದಾದ್ಯಂತಇಂತಹ ಬಾಂದಾರ ಮತ್ತುಚೆಕ್‍ಡ್ಯಾಂ ನಿರ್ಮಾಣ ಚಟುವಟಿಕೆಗಳು ನಡೆದಲ್ಲಿ ವ್ಯಯವಾಗುವ ನೀರನ್ನು ಸಮಪರ್ಕವಾಗಿ ಬಳಸಲು ಸಹಕಾರಿಯಾಗಲಿದೆ. ಅದರಂತೆ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಬಾಂದಾರ್ ಮತ್ತು ಚೆಕ್‍ಡ್ಯಾಂಗಳ ಪಟ್ಟಿತಯಾರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆಎಂದು ಹೇಳಿದರು.

ಈ ಸಂದರ್ಭದಲ್ಲಿ ಕೃಷ್ಣಾ ಕಾಡಾಅಧ್ಯಕ್ಷಜಕ್ಕಪ್ಪಎಡವೆ ಸೇರಿದಂತೆಇತರರು ಉಪಸ್ಥಿತರಿದ್ದರು.