ಪಟ್ಟದಕಲ್ಲ ತಾ.ಪಂ ತೇರವಾದ ಸ್ಥಾನಕ್ಕೆ ಚುನಾವಣೆ

ಪಟ್ಟದಕಲ್ಲ ತಾ.ಪಂ ತೇರವಾದ ಸ್ಥಾನಕ್ಕೆ ಚುನಾವಣೆ

ಬಾಗಲಕೋಟೆ ಜೂ.17:ಬದಾಮಿ ತಾಲೂಕಿನ 13-ಪಟ್ಟದಕಲ್ಲ ತಾ.ಪಂ ಸದಸ್ಯರ ಮರಣದಿಂದ ತೆರವಾದ ಸ್ಥಾನವನ್ನು ತುಂಬುವ ಸಲುವಾಗಿ ಕರ್ನಾಟಕ ಪಂಚಾಯತ ರಾಜ್ ನಿಯಮಗಳನ್ವಯ ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿದ್ದಾರೆ.

    ನಾಮಪತ್ರಗಳನ್ನು ಸಲ್ಲಿಸುವ ಕೊನೆಯ ದಿನ ಜೂನ್ 20 ಆಗಿದೆ. ನಾಮಪತ್ರ ಪರಿಶೀಲನೆ 21 ರಂದು ನಡೆಯಲಿದ್ದು, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ 23 ಆಗಿದೆ. ಮತದಾನ ಜುಲೈ 2 ರಂದು ಬೆಳಿಗ್ಗೆ 7 ರಿಂದ ಸಂಜೆ 5ರ ವರೆಗೆ ನಡೆಯಲಿದೆ. ಮರು ಮತದಾನ ಅವಶ್ಯವಿದ್ದಲ್ಲಿ ಮರು ಮತದಾನ ಜುಲೈ 4 ರಂದು ನಡೆಯಲಿದೆ. ಮತ ಏಣಿಕೆ ಜುಲೈ 5 ರಂದು ಬೆಳಿಗ್ಗೆ 8 ಗಂಟೆಯಿಂದ ತಾಲೂಕಾ ಕೇಂದ್ರದಲ್ಲಿ ಜರುಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.