ಸ್ವದೇಶಿ ಜಾಗರಣ ರಥಕ್ಕೆ ಚಾಲನೆ 

ಸ್ವದೇಶಿ ಜಾಗರಣ ರಥಕ್ಕೆ ಚಾಲನೆ 

ವಿಜಯಪುರ, ಅ.6: ನಗರದ ಸಿದ್ಧೇಶ್ವರ ದೇವಸ್ಥಾನದ ಎದುರಿಗೆ ಸ್ವದೇಶಿ ಜಾಗರಣ ರಥ ಯಾತ್ರೆಗೆ ಚಾಲನೆ ನೀಡಲಾಯಿತು. 
ಚಾಲನೆ ನೀಡಿ ಮಾತನಾಡಿದ ಪ್ರೊ.  ಎಮ್.ಬಿ. ಕುಮಾರಸ್ವಾಮಿ ಭಾರತಿಯರೆಲ್ಲರೂ ಚೀನಾವನ್ನು ಚೆನ್ನಾಗಿ ಅರಿಯಬೇಕಾಗಿದೆ. ಚೀನಾದಿಂದ ಆಗುತ್ತಿರುವ ವಿವಿದ ಆಕ್ರಮಣವನ್ನು ಸಮರ್ಥವಾಗಿ ಎದುರಿಸಲು ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು. ಇದು ಯಶಶ್ವಿಯಾಗಲು, ಜನಜಾಗೃತಿಯಾಗಬೇಕು. ಹೆಚ್ಚಿನ ಜನ ಈ ಆಂದೋಲನದಲ್ಲಿ ಭಾಗವಹಿಸಬೇಕು ಎಂದು ಹೇಳಿದರು. 
ಚೀನಾ  ಸೈನಿಕರು ನಮ್ಮ ದೇಶಕ್ಕೆ ನುಗ್ಗದಂತೆ, ಗಡಿಗಳಲ್ಲಿ ನಮ್ಮ ಸೈನಿಕರು ಹಗಲಿರುಳು ಕಾವಲು ಕಾಯುತ್ತಾರೆ. ಹಾಗೆಯೇ ನಾವೆಲ್ಲರು ನಮ್ಮ ಮನೆಗೆ ಚೀನಾವಸ್ತುಗಳು ಬಾರದಂತೆ ಕಾವಲು ಕಾಯಬೇಕು.  ಚೀನಾ ವಸ್ತುಗಳು ಮಾರಾಟ ಮಾಡದಂತೆ ವ್ಯಾಪಾರಿಗಳನ್ನು ಜಾಗೃತಿಗೊಳಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಸ್ವದೇಶಿ ಜಾಗರಣಾ ಮಂಚ್ ನ ಜಿಲ್ಲಾ ಸಂಚಾಲಕ ಸಿ .ಎಸ್ ನಾಡಗೌಡ ಮಾತನಾಡಿದರು.  
ಈ ಸಂದರ್ಭದಲ್ಲಿ ಸಂಘಟನೆಯ ಮಹೇಶ ಚವ್ಹಾಣ, ಎಸ್. ಎ. ಪಾಟೀಲ, ಶಿವಶಂಕರಗೌಡ ಹಿರೆಗೌಡರ, ಗಿರೀಶ ನಿಲಗುಂದ, ಪರಸುರಾಮ ಸಂಗನಗೌಡ ಪಾಟೀಲ, ವಿನೋದಕುಮಾರ ಮಣೂರ ಹಾಗೂ ಅನೇಕ ಕಾರ್ಯಕರ್ತರು ಪಾಲ್ಗೊಡಿದ್ದರು.