ಐತಿಹಾಸಿಕ ಚರ್ಚ್ ನಲ್ಲಿ ಡ್ರೈನ್ಶೆಜ್ ನೀರು

ಐತಿಹಾಸಿಕ ಚರ್ಚ್ ನಲ್ಲಿ ಡ್ರೈನ್ಶೆಜ್ ನೀರು


ವಿಜಯಪುರ ಜೂ.16:  ನಗರದ ಬಸ್‍ಸ್ಯಾಂಡ್ ಹಿಂದುಗಡೆ ಇರುವ ಐತಿಹಾಸಿಕ ಚರ್ಚ್ ನಲ್ಲಿ ಡ್ರೈನ್ಶೆಜ್ ನೀರು ಹಾಗೂ ಮಳೆ ನೀರಿಂದ ತುಂಬಿ ಚರ್ಚ್‍ನಲ್ಲಿನ ಜನರು ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಿ.ಎಸ್. ಐ ಚರ್ಚ್ ಗುರುಗಳಾದ ಬಾಲರಾಜ ಹೇಳಿದರು.

ಈ ಕುರಿತು ಪ್ರಕಟಣೆ ನೀಡಿದ ಅವರು, ಡ್ರೈನೇಜ್ ನೀರು ಹಾಗೂ ಮಳೆ ಬಂದಿದ್ದರಿಂದ ಚರ್ಚ್‍ನಲ್ಲಿ ನೀರುಬರುತ್ತಿದ್ದರಿಂದ ಸಿ.ಎಸ್.ಐ ಚರ್ಚ್ ಗುರುಗಳಾದ ಬಾಲರಾಜ ಆಯುಕ್ತ ಶ್ರೀಹರ್ಷ ಶೆಟ್ಟಿ ಅವರಿಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿದ್ದಾರೆ. 

ಮಳೆಗಾಲದಲ್ಲಿ ಡ್ರೈನೆಜ್ ನೀರೆಲ್ಲ ಚರ್ಚ್‍ನಲ್ಲಿ ಒಳಗೆ ಬರುತ್ತದೆ. ಆದ್ದರಿಂದ ಈ ಕೂಡಲೆ ಎಲ್ಲ ಸಮಸ್ಯೆಗಳಿಗೆ ಪರಿಹರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಶ್ರೀಮತಿ ಮಾರಗ್ರೇಟ್ ಅನೀಲಕುಮಾರ, ಲೆಸ್ಲಿ ಡೇವಿಡ್, ಶಾಂ ಜೋಶೆಫ್, ಶ್ರೀಮಂತಿ ಬಂಕಾಪೂರ, ಮಿರಜಕರ್ ಆಗ್ರಹಿಸಿದ್ದಾರೆ.