ರಾಜ್ಯ ಸಂಚಾಲಕರಾಗಿ ಡಾ.ಎಂ.ಎಚ್.ಚಲವಾದಿ ನೇಮಕ

ರಾಜ್ಯ ಸಂಚಾಲಕರಾಗಿ ಡಾ.ಎಂ.ಎಚ್.ಚಲವಾದಿ ನೇಮಕ

ಬಾಗಲಕೋಟ 12- ಅಖಿಲ ಭಾರತ ಕಾಂಗ್ರೆಸ್ ಸಮಿತಿ ಹಾಗೂ ಬಾಗಲಕೋಟೆ ಜಿಲ್ಲೆಯ ಸಚಿವರು ಹಾಗೂ ಶಾಸಕರ ಶಿಫಾರಸ್ಸಿನ ಮೇರೆ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಡಾ|| ಎಂ.ಎಚ್.ಚಲವಾದಿ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಠ ಜಾತಿ ವಿಭಾಗದ ರಾಜ್ಯ ಸಂಚಾಲಕರನ್ನಾಗಿ ರಾಜ್ಯಾಧ್ಯಕ್ಷ ಎಫ್.ಎಚ್.ಜಕ್ಕಪ್ಪನವರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
    1987-1995 ರಲ್ಲಿ ಕೆಪಿಸಿಸಿ ಎಸ್.ಸಿ.,/ಎಸ್.ಟಿ. ಪ್ರಧಾನ ಕಾರ್ಯದರ್ಶಿ ಹಾಗೂ 2004ರಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ, ಬೆಳಗಾವಿಯ ರಾಣಿಚೆನ್ನಮ್ಮ ಯುನಿರ್ವಸಿಟಿಯ ಸಿಂಡಿಕೇಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅವರನ್ನು ಈಗ ಅವರು ಪಕ್ಷಕ್ಕಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ನೇಮಕ ಮಾಡಿ ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ ಮತ್ತು ಶಿಸ್ತಿಗೆ ಒಳಪಟ್ಟು ಕಾರ್ಯನಿರ್ವಸಬೇಕು ಎಂದು ರಾಜ್ಯಾಧ್ಯಕ್ಷ ಎಫ್.ಎಸ್.ಜಕ್ಕಪ್ಪನವರ ತಿಳಿಸಿದ್ದಾರೆ.
    ಜಿಲ್ಲೆಯ ಡಾ||ಎಂ.ಎಚ್.ಚಲವಾದಿ ಅವರ ಆಯ್ಕೆಯನ್ನು ಜಿಲ್ಲಾಧ್ಯಕ್ಷ ಮುತ್ತಣ್ಣ ಬೆಣ್ಣೂರ, ಕಾಂಗ್ರೆಸ್ ಎಸ್.ಸಿ.ವಿಭಾಗದ ಮುಖಂಡರಾದ ಬಸವರಾಜ ಚಲವಾದಿ, ನ್ಯಾಯವಾದಿ ಎಂ.ಜಿ.ಚಲವಾದಿ, ಅಡಿವೆಪ್ಪ ಚಂದಾವರಿ, ಸದಾಶಿವ ಕೊಡಬಾಗಿ, ವಾಯ್.ವಾಯ್.ತಿಮ್ಮಾಪೂರ, ಪ್ರೇಮನಾಥ ಗರಸಂಗಿ, ಗ್ಯಾನಪ್ಪ ಚಲವಾದಿ ಸ್ವಾಗತಿಸಿ, ಅವರನ್ನು ಪತ್ರಿಕಾ ಪ್ರಕಟಣೆಯ ಮೂಲಕ ಅಭಿನಂದಿಸಿದ್ದಾರೆ.