ಡಾ. ಭುವನೇಶ್ವರಿಯವರಿಗೆ ಕಾಶಿ ವಿಶ್ವನಾಥ ರಾಷ್ಟ್ರೀಯ ಪ್ರಶಸ್ತಿ

ಡಾ. ಭುವನೇಶ್ವರಿಯವರಿಗೆ ಕಾಶಿ ವಿಶ್ವನಾಥ ರಾಷ್ಟ್ರೀಯ ಪ್ರಶಸ್ತಿ

ವಿಜಯಪುರ, ಅ.6 : ನಗರದ ಡಾ. ಭುವನೇಶ್ವರಿ ಮಲ್ಲಿಕಾರ್ಜುನಮಠ (ಮೇಲಿನಮಠ) ಇವರು ಸಂಜಯ   ಗೋಡಾವತ ವಿಶ್ವವಿದ್ಯಾಲಯ ಕೊಲ್ಹಾಪುರದಲ್ಲಿ ಕಂಪ್ಯೂಟರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 
ಇವರಿಗೆ ಕಾಶಿ ವಿಶ್ವನಾಥ ರಾಷ್ಟ್ರೀಯ ಪ್ರಶಸ್ತಿಯನ್ನು ಅ.8ರಂದು ಪ್ರಧಾನವಾಗಲಿದೆ. ಈ ಕಾರ್ಯಕ್ರಮವನ್ನು ಕಾಶಿ ಕನ್ನಡಿಗರ ಕೂಟ ವಾರಣಾಸಿ (ಉತ್ತರ ಪ್ರದೇಶ) ಹಾಗೂ ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕಾಶಿಯಲ್ಲಿ ಕನ್ನಡಿಗರ ಸಾಂಸ್ಕøತಿಕ ಸಮ್ಮೇಳನ ಜಂಗಮವಾಡಿ ಮಠ ಸಭಾಂಗಣ ವಾರಣಾಸಿ (ಕಾಶಿ) ಉತ್ತರ ಪ್ರದೇಶದಲ್ಲಿ ಜರುಗಲಿದೆ.
ಡಾ. ಭುವನೇಶ್ವರಿ ಮಲ್ಲಿಕಾರ್ಜುನಮಠ ಪ್ರಶಸ್ತಿ ಪುರಸ್ಕøತರಾಗಿ ಕಂಪ್ಯೂಟರ ವಿಭಾಗದ ವಿವಿಧ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಉಪನ್ಯಾಸ ಮಾಡಲಿದ್ದಾರೆ ಎಂದು ಸಂಘಟಿಕ ವಾರಣಾಸಿ ಕಾಶಿ ಕನ್ನಡಿಗರ ಕೂಟ ಅಧ್ಯಕ್ಷರಾದ ಶಿವಾನಂದ ಜಂಗಮವಾಡಿಮಠ ತಿಳಿಸಿದ್ದಾರೆ.
ಸಾನಿಧ್ಯವನ್ನು ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದಕರು ಕಾಶಿ ಜ್ಞಾನಸಿಂಹಾಸನ ವಾರಣಾಸಿ, ಕರ್ನಾಟಕ ಸರಕಾರದ ದೆಹಲಿಯ ಪ್ರತಿನಿಧಿ ಸಿ.ಎಸ್. ನಾಡಗೌಡ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.