ಪ್ರತಿಭಟನೆ ನಡೆಸಿದ ವೈದ್ಯರು : ಪರದಾಡಿದ ರೋಗಿಗಳು 

ಪ್ರತಿಭಟನೆ ನಡೆಸಿದ ವೈದ್ಯರು : ಪರದಾಡಿದ ರೋಗಿಗಳು 

ವಿಜಯಪುರ ನ,04 : ರಾಜ್ಯ ಸರ್ಕಾರ ಜಾರಿಗೊಳಿಸಲು ನಿಧರಿಸಿರುವ ಕೆಪಿಎಂಇ ಕಾಯ್ದೆತಿದ್ದುಪಡಿಗೆವಿರೋಧಿಸಿ ಶುಕ್ರವಾರ ಖಾಸಗಿ ವೈದ್ಯರುತಮ್ಮ ಕ್ಲಿನಿಕ್‍ಗಳನ್ನು ಬಂದ್ ಮಾಡಿ ಮುಷ್ಕರ ನಡೆಸಿದರು. 
ವಿಜಯಪುರದಎಲ್ಲ ಖಾಸಗಿ ಆಸ್ಪತ್ರೆಗಳು ಸಂಪೂರ್ಣ ಬಂದ್‍ಆಗಿದ್ದವು. ಮುಷ್ಕರದ ಹಿನ್ನೆಲೆಯಲ್ಲಿಆಸ್ಪತ್ರೆಯನ್ನು ಬಂದ್ ಮಾಡಲಾಗಿದೆ ಎಂಬ ಸಂದೇಶ ಫಲಕಗಳು ಖಾಸಗಿ ಆಸ್ಪತ್ರೆಗಳ ಮುಂದೆ ರಾರಾಜಿಸಿದವು.ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಲಭ್ಯವಾಗದೇ ಅನೇಕ ರೋಗಿಗಳು ಪರದಾಡುವಂತಾಯಿತು.ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾಯಿತು. ವಿಜಯಪುರದಲ್ಲಿರುವ ವೈದ್ಯಕೀಯ ಮಹಾವಿದ್ಯಾಲಯಗಳ ಆಸ್ಪತ್ರೆಗಳು ಎಂದಿನಂತೆ ಸೇವೆ ನೀಡಿದವು. 
ಬೃಹತ್ ಪ್ರತಿಭಟನೆ
ಶ್ರೀ ಸಿದ್ದೇಶ್ವರ ದೇವಾಲಯದ ಮುಂಭಾಗದಲ್ಲಿ ಜಮಾಯಿಸಿದ ನೂರಾರು ವೈದ್ಯರು ಸರ್ಕಾರ ಜಾರಿಗೊಳಿಸುತ್ತಿರುವ ಕೆಪಿಎಂ ಕಾಯ್ದೆತಿದ್ದುಪಡಿಯನ್ನು ವಿರೋಧಿಸಿದರು.ಅಲ್ಲಿಂದ ಪ್ರತಿಭಟನಾರ್ಯಾಲಿ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ವಿವಿಧ ಸಂಘಟನೆಗಳು ವೈದ್ಯರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದವು. ಬದುಕಿಸಿ ಬದುಕಿಸಿ ವೈದ್ಯರನ್ನು ಬದುಕಿಸಿ, ನ್ಯಾ.ವಿಕ್ರಂಜೀತಸೇನ್ ವರದಿ ಜಾರಿಗೊಳಿಸಿ, ಬೇಡ ಬೇಡ ಕೆಪಿಎಂ ಕಾಯ್ದೆ ಬೇಡ-ಬೇಡ' ಎಂಬಿತ್ಯಾದಿ ಫಲಕಗಳನ್ನು ಪ್ರದರ್ಶಿಸಿದರು.
ಮಕ್ಕಳ ತಜ್ಞಡಾ.ಎಲ್.ಎಚ್.ಬಿದರಿ ಮಾತನಾಡಿ, ಸಾರ್ವಜನಿಕರಿಗೂ ಈ ನೂತನಕಾಯ್ದೆತಿದ್ದುಪಡಿಯಿಂಧಯಾವುದೇ ಪ್ರಯೋಜನವಿಲ್ಲ. ಈ ಕಾಯ್ದೆಯಡಿಯಲ್ಲಿ ಅನೇಕ ಅಂಶಗಳು ಅವೈಜ್ಞಾನಿಕವಾಗಿವೆ. ಮಹಾನಗರಗಳಲ್ಲಿರುವ ಕಾರ್ಪೋರೇಟ್ ವಲಯದ ಆಸ್ಪತ್ರೆಗಳು ರೋಗಿಗಳಿಗೆ ಹಣಕಟ್ಟಿದಾಗಲೇ ಕೆಲವೊಂದು ಸೇವೆ ನೀಡಬಹುದು.ಆದರೆ ನಗರಕೇಂದ್ರಿತ ಪ್ರದೇಶಗಳಲ್ಲಿರುವ ಖಾಸಗಿ ಆಸ್ಪತ್ರೆಗಳು ರೋಗಿಗಳ ಸೇವೆಯನ್ನೇ ಪ್ರಧಾನವಾಗಿಸಿಕೊಂಡಿವೆ. ಹಣಕಟ್ಟದಿದ್ದರೂ ಮುಂದೆಕೊಡಿಎಂದು ಅನೇಕ ವೈದ್ಯರು ಹೇಳುತ್ತಾರೆ, ಬಡವರಿಗೆ ಅನೇಕ ವೈದ್ಯರುಉಚಿತವಾಗಿಯೇಚಿಕಿತ್ಸೆ ನೀಡುವ ಸಾಕಷ್ಟು ಉದಾಹರಣೆಗಳಿವೆ ಎಂದರು.ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.
ವಿವಿಧ ವೈದ್ಯರು ಮಾತನಾಡಿ, ರಾಜ್ಯ ಸರ್ಕಾರ ಜಾರಿಗೊಳಿಸಲು ಹೊರಟಿರುವ ಕೆಪಿಎಂಇ ಕಾಯ್ದೆತಿದ್ದುಪಡಿ ಖಾಸಗಿ ವೈದ್ಯರಿಗೆ ಮರಣಶಾಸನವಾಗಿ ಪರಿಣಮಿಸಲಿದೆ.ಕೆಪಿಎಂಇ ಕಾಯ್ದೆತಿದ್ದುಪಡಿ ವಿರೋಧಿಸಿ ವೈದ್ಯರು ಹಲವಾರು ಬಾರಿ ಮನವಿ ಸಲ್ಲಿಸಿದ್ದಾರೆ. ಬೃಹತ್ ಹಂತದ ಹೋರಾಟವನ್ನು ನಡೆಸಿದ್ದಾರೆ. ಆದರೂ ಸಹ ಆರೋಗ್ಯ ಸಚಿವರು ಮಾತ್ರ ಈ ಕಾಯ್ದೆ ಜಾರಿಗೊಳಿಸಲು ತುದಿಗಾಲಲ್ಲಿ ನಿಂತಿರುವುದು ಎಷ್ಟು ಸರಿಎಂದು ಪ್ರಶ್ನಿಸಿದರು.
ಸಾರ್ವಜನಿಕರಆರೋಗ್ಯರಕ್ಷಣೆಯನ್ನೇ ವೈದ್ಯರುತಮ್ಮಜೀವನದ ಉಸಿರಾಗಿಸಿಕೊಂಡಿದ್ದಾರೆ.ರೋಗಿ-ವೈದ್ಯರ ನಡುವೆ ಸೌಹಾರ್ದಯುತವಾದ ಸಂಬಂಧವಿದೆ. ಆದರೆ ಈ ನೂತನಕಾಯ್ದೆಯಿಂದಾಗಿರೋಗಿ-ವೈದ್ಯರ ನಡುವೆ ಸಂಬಂಧ ಹಳಸಲಿದೆ.ಮಾನಸಿಕ ಒತ್ತಡದಿಂದ ವೈದ್ಯರು ನರಳುವಂತಾಗುತ್ತದೆ.ತಮ್ಮ ವೈದ್ಯಕೀಯ ವೃತ್ತಿಯನ್ನೇತೊರೆಯುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆಎಂದರು.
ಭಾರತೀಯ ವೈದ್ಯಕೀಯ ಸಂಘದಅಧ್ಯಕ್ಷೆಡಾ.ಗೌರಾಂಬಾ ಸಜ್ಜನ, ಕಾರ್ಯದರ್ಶಿ ಡಾ.ರವಿಕುಮಾರ ಬಿರಾದಾರ, ಡಾ.ಜಸ್ಪಾಲ್‍ಸಿಂಗ್ ತೆಹಲಿಯಾ, ಡಾ.ಪ್ರಿಯದರ್ಶಿನಿ ಪಾಟೀಲ, ಡಾ.ಅರವಿಂದ ಪಾಟೀಲ, ಡಾ.ಚೌಧರಿ, ಡಾ.ಸುರೇಶಕಾಗಲಕರರೆಡ್ಡಿ, ಡಾ.ಪ್ರಕಾಶ ಸಾಸನೂರ ಮೊದಲಾದವರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.