ಜಿಲ್ಲೆಯಾಧ್ಯಂತ ಸಂಭ್ರಮದ ಗಣರಾಜ್ಯೋತ್ಸವ 

ಜಿಲ್ಲೆಯಾಧ್ಯಂತ ಸಂಭ್ರಮದ ಗಣರಾಜ್ಯೋತ್ಸವ 

ವಿಜಯಪುರ ನ,03 : ಜಿಲ್ಲಾದ್ಯಂತ 62ನೇ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಿವಿಧ ಶಾಲಾ, ಕಾಲೇಜುಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಸಂಭ್ರಮದಿಂದ ಕನ್ನಡ ಪ್ರೇಮವನ್ನು ರಂಜಿಸಿದ್ದಾರೆ. ಚಿಕ್ಕಮಕ್ಕಳಂತೂ ಅತ್ತ್ಯುತ್ಸಾಹದಿಂದ ಸಂಭ್ರಮದಲ್ಲಿ ಭಾಗವಹಿಸಿದರು. ಶಾಲಾ ಕಾಲೇಜುಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಮಹತ್ವ, ಕನ್ನಡ ಮತ್ತು ಕನ್ನಡನಾಡಿನ ಸಂರಕ್ಷಣೆ, ಬೆಳವಣಿಗೆ ಬಗ್ಗೆ, ಹೊರಾಟಗಳು ಹಲವಾರಿ ಕುರಿತು ವಿಚಾರಗಳನ್ನು ಪ್ರಸ್ತುತಪಡಿಸಲಾಯಿತು. 
ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ರಾಜ್ಯೋತ್ಸವ..
ವಿಜಯಪುರದ ತಾಲೂಕಿನ ಕವಲಗಿ ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲೆಯ ಪ್ರಾಚಾರ್ಯ              ಮಂಗತ್ ರಾಮ್ ಅರೋರಾರ ಮಾತನಾಡಿ, ಕರ್ನಾಟಕವು ವೈವಿಧ್ಯತೆಗಳ ತವರೂರಾಗಿದೆ. ಇಂತಹ ವೈವಿಧ್ಯತೆಗಳಿಂದ ಕೂಡಿದ ಕನ್ನಡ ಮತ್ತು ಕನ್ನಡನಾಡಿನ ಸಂರಕ್ಷಣೆ, ಬೆಳವಣಿಗೆ ನಮ್ಮೆಲ್ಲರ ಆದ್ಯ ಕರ್ತವ್ಯ” ಎಂದು ನುಡಿದರು.
ಶಿಕ್ಷಕಿ ಶ್ರೀಮತಿ ಸುನಿತಾ ಮೆಂಡೆಗಾರ್, ಶಿಕ್ಷಕ ಅಣ್ಣಪ್ಪ ಶಿರೂರ್, ನೃತ್ಯ ಶಿಕ್ಷಕ ಮಾಸ್ಟರ್ ಸಾಗರ್, ಸಂಗಮೇಶ್ ಭೂಸ್ತಳಿ, ದಾನಮ್ಮ ಅಂದಾನಿಮಠ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ...
ಸ್ಥಳೀಯ ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾದ್ಯಮ ಶಾಲೆಯಲ್ಲಿ 62 ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಿಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಗುರುಗಳು ಎಸ್.ಎಸ್. ದೊಡಮನಿ, ಎಸ್.ಬಿ.ಹೆಗಳಾಡಿ, ಎನ್.ಜಿ.ಯರನಾಳ, ಡಾ. ರೂಪಾ ಕಲ್ಯಾಣಮಠ, ಎ.ಜೆ.ಜಮಾದಾರ, ದೀಪಾ ಶಿಂಧೆ, ಶಾಯಿನ್ ಗೋಡಿಹಾಳ,ಎ.ಎಸ್.ವಂಬಾಶೆ, ಪ್ರಶಾಂತ ಎಮ್.ಎಚ್. ಬಿ.ಆರ್.ಬಿರಾದಾರ, ವ್ಹಿ.ವಾಯ್.ದಳವಾಯಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 
ಕರವೇ ನೇತೃಥ್ವದಲ್ಲಿ ಬೈಕ್ ರ್ಯಾಲಿ..
ವಿಜಯಪುರದ ಆದರ್ಶ ನಗರದ ಕರವೇ ಜಿಲ್ಲಾ ಕಾರ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
    ಯುವ ಮುಖಂಡರಾದ ವಿವೇಕ ಹರಕಾರಿ ಧ್ವಜಾರೋಹಣ ನೆರವೇರಿಸಿದರು. ಸಿದ್ದೇಶ್ವರ ದೇವಸ್ಥಾನಗಳ ಮೂಲಕ ನಗರ ಘಟಕದ ಅಧ್ಯಕ್ಷರಾದ ಸಂದೀಪ ಗಾಯಕವಾಡ ಅವರ ನೇತೃತ್ವದಲ್ಲಿ ಸುಮಾರು 200 ಬೈಕ್‍ಗಳ ಮೂಲಕ ಬೈಕ್ ರ್ಯಾಲಿ ನಡೆಸಿದರು.
ಜಿಲ್ಲಾ ಅಧÀ್ಯಕ್ಷ ಶ್ರೀಶೈಲ ಮುಳಜಿ, ಶಬ್ಬೀರ ಪಟೇಲ, ಅಶೋಕ ರಾಠೋಡ, ನಗರ ಘಟಕ ಅಧ್ಯಕ್ಷರಾದ ಸಂದೀಪ ಗಾಯಕವಾಡ, ಸಚೀನ ಉಪಾಧ್ಯ, ನೂರಾರು ಯುವಕರು, ಕರವೇ ಕಾರ್ಯಕರ್ತರು ಭಾಗವಹಿಸಿದ್ದರು.
ಸಂಭ್ರಂದ ರಾಜ್ಯೋತ್ಸವ..
ನಗರದ ಕಮಲಾದೇವಿ ಪಾಟೀಲ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 62ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು. ಕನ್ನಡಾಂಬೆಗೆ ಸಾಹಿತಿ ಜಂಬುನಾಥ ಕಂಚ್ಯಾಣ ಪೂಜೆಯನ್ನು ಸಲ್ಲಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನಾಡದೇವತೆಯಾದ ಭುವನೇಶ್ವರಿ ದೇವಿಯ ವೇಷಭೂಷಣ ಹಾಕಿ ವಿದ್ಯಾರ್ಥಿಗಳು ನೃತ್ಯ ಮಾಡಿದರು. ಮುಖ್ಯೋಪಾಧ್ಯಾಯ ದಿಲೀಪಕುಮಾರ ಗಜಾಕೋಶ ಅಧ್ಯಕ್ಷತೆ ವಹಿಸಿದ್ದರು. ಸುಬ್ರಮಣ್ಯರಾವ, ಎಂ.ಪಿ. ಸಲಬಣ್ಣನವರ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಕನ್ನಡ ನಾಡ ರಕ್ಷಣೆಗೆ ಮೊದಲ ಆದ್ಯತೆ... 
ವಿಜಯಪುರದ ಬಸವನ ಬಾಗೇವಾಡಿ ತಾಲೂಕಿನ ನಂದಿಹಾಳ ಪಿ.ಯು ಗ್ರಾಮದಲ್ಲಿ ಭಾರತೀಯ ಯುವಜನ ಸೇವಾ ಸಂಸ್ಥೆ ಹಾಗೂ ಗೆಳೆಯರ ಬಳಗ ವತಿಯಿಂದ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಕನ್ನಡಮಾತೆ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ 62ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
    ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶರಣು ಕಾಟಕರ ಮಾತನಾಡಿ, ಸರ್ಕಾರವು ನಾಡ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
    ಗ್ರಾಮ ಪಂಚಾಯತ ಸದಸ್ಯರಾದ ಮಲ್ಲು ಕಲ್ಮನಿ, ತಾತಾ ಕುಮಶಿ, ಸುಪ್ರೀತ ಕುಮಶಿ, ಶ್ರೀಶೈಲ ಹಡಪದ, ಬಸವರಾಜ ಕಲ್ಮನಿ, ಮುತ್ತು ಬಜಂತ್ರಿ, ಸಂಗು ಗದ್ಯಾಳ, ನರಸಪ್ಪ ಕಲ್ಮನಿ, ಸಂಗಪ್ಪ ಇಂಗಳೇಶ್ವರ, ಶರಣು ಮೇಳಿ, ಅರ್ಜುನ ದೇಸಾಯಿ ಭಾಗವಹಿಸಿದ್ದರು.