ಕಾಮಗಾರಿ ಪರಿಶೀಲನೆಗೆ ಜಿಲ್ಲಾಧಿಕಾರಿ ಮೇಘಣ್ಣವರ ಸೂಚನೆ

ಕಾಮಗಾರಿ ಪರಿಶೀಲನೆಗೆ ಜಿಲ್ಲಾಧಿಕಾರಿ ಮೇಘಣ್ಣವರ ಸೂಚನೆ

ಬಾಗಲಕೋಟೆ ಜೂ.16: ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ವಿಷೇಶ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಹಾಕಿಕೊಂಡ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ ಬಗ್ಗೆ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳು ಖುದ್ದಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಾದ ಪಿ.ಎ.ಮೇಘಣ್ಣವರ ಸೂಚಿಸಿದರು. 

    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ವಿವಿಧ ಇಲಾಖೆವಾರು ಕಳೆದ ಸಾಲಿನಲ್ಲಿ ಹಾಕಿಕೊಂಡ ಕ್ರೀಯಾ ಯೋಜನೆ ಪ್ರಕಾರ ಅನುಷ್ಠಾನವಾದ ಬಗ್ಗೆ ಆಯಾ ತಾಲೂಕಿನ ಸಂಬಂಧಿಸಿದ ಆಯಾ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳು ಪರಿಶೀಲನೆ ನಡೆಸತಕ್ಕದ್ದು, ಪರಿಶೀಲಿಸಿದ ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು. 

    ಪ್ರಸಕ್ತ ಸಾಲಿಗೆ ವಿವಿಧ ಇಲಾಖೆಗಳಲ್ಲಿ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಗಳಡಿ ಬಿಡುಗಡೆಯಾದ ಅನುದಾನ ಬಗ್ಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು ಕ್ರೀಯಾ ಯೋಜನೆಗಳನ್ನು ರೂಪಿಸಿ ಅನುಮೋದನೆ ಪಡೆದುಕೊಂಡು ಕೆಲಸ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಬಾಗಲಕೋಟೆಯ ಪ್ರತಿಷ್ಠಿತ ಕೆರೆಯಾದ ಮುಚಖಂಡಿ ಕೆರಯನ್ನು ತುಂಬಿಸುವ ಕೆಲಸವಾಗಬೇಕೆಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಜಿಲ್ಲೆಯಲ್ಲಿರುವ ಕೊಳಚೆ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರೀಯಾ ಯೋಜನೆಗಳನ್ನು ರೂಪಿಸಿ ಕ್ರೀಯಾ ಯೋಜನೆ ಪ್ರಕಾರ ಪ್ರಗತಿ ಸಾಧಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.

    ಎಸ್‍ಸಿಪಿ ಯೋಜನೆಯಡಿ ವಿವಿಧ ಇಲಾಖೆಗೆ ರಾಜ್ಯ ವಲಯದಲ್ಲಿ ಒಟ್ಟು 84.43 ಕೋಟಿ ರೂ, ಪೈಕಿ 4.59 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಜಿಲ್ಲಾ ವಲಯದಲ್ಲಿ 52.95 ಪೈಕಿ 4.75 ಕೋಟಿ ರೂ. ಅನುದಾನ ಬಿಡುಗಡೆಯಾದರೆ ಟಿಎಸ್‍ಪಿ ಯೋಜನೆಯಡಿ ರಾಜ್ಯ ವಲಯದಲ್ಲಿ ಒಟ್ಟು 31.92 ಕೋಟಿ ರೂ. ಪೈಕಿ 1.93 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಜಿಲ್ಲಾ ವಲಯದಲ್ಲಿ ಒಟ್ಟು 15.89 ಕೋಟಿ ರೂ. ಪೈಕಿ 1.17 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಿವಾನಂದ ಕುಂಬಾರ ಸಭೆಗೆ ತಿಳಿಸಿದರು.

    ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಮೇಶಕುಮಾರ ಪಿ., ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಪ್ರಭುರಾಜ ಹಿರೇಮಠ, ಪಶು ಇಲಾಖೆ ಉಪನಿರ್ದೇಶಕ ಸೋಮಸುಂದರ, ಸಹಕಾರ ಇಲಾಖೆಯ ಉಪನಿಬಂಧಕ ಶೆಲ್ಲಿಕೇರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. 

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2016-17ನೇ ಸಾಲಿಗೆ ಎಸ್.ಸಿ.ಪಿ ಯೋಜನೆಯಡಿ ಬೀಳಗಿ ತಾಲೂಕಿನ ಹಂಚಿನಾಳ ಗ್ರಾಮದ ಆಟ್ಯಾ-ಪಟ್ಯಾ ಕ್ರೀಡಾಪಟು ರಾಜಶೇಖರಗೆ ರೂ.2,75,000-00 ಮುಧೋಳ ತಾಲೂಕಿನ ಕೃಷ್ಣಾ ನಾಯಕ, ಬದಾಮಿ ತಾಲೂಕಿನ ನರೆನೂರ ಗ್ರಾಮದ ಅಥ್ಲೆಟಿಕ್ಸ್ ರಾಜು ದಾಸರ, ಜಮಖಂಡಿ ತಾಲೂಕಿನ ಈಜುಗಾರ್ತಿ ಕುಮಾರಿ ತುಳಸಿಗೆ ತಲಾ ರೂ.1,25,000-00 ಹಾಗೂ ಸೀತಿಮನಿ ಗ್ರಾಮದ ಅಥ್ಲೆಟಿಕ್ಸ್ ವಿಠಲ ಲಮಾಣಿ ಅವರಿಗೆ ರೂ.15,00,000-00 ಪ್ರೋತ್ಸಾಹಧನ ನೀಡಲಾಗಿದೆ. ಪರಿಶಿಷ್ಡ ಜಾತಿ ಸಂಘಗಳಿಗೆ ಜಿಮ್ ಸಲಕರಣೆಗಾಗಿ ತೇರದಾಳದ ಸಿದ್ದಾರ್ಥ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ದ ಸಂಸ್ಥೆಗೆ 2 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗಿದೆ.

    ಟಿ.ಎಸ್.ಪಿ ಯೋಜನೆಯಡಿ ಕ್ರೀಡಾಪಟುಗಳಿಗೆ ಕ್ರೀಡಾ ಸಲಕರಣೆ ಒದಗಿಸಲು ತುಳಸಿಗೇರಿಯ ಸೈಕ್ಲಿಂಗ್ ಪಟುಗಳಾದ ರೇಣುಕಾ ದಂಡಿನ, ಸೀಮಾ ಅಡಗಲ್‍ಗೆ ತಲಾ ರೂ.4 ಲಕ್ಷ, ಬೀಳಗಿ ತಾಲೂಕಿನ ಸಿದ್ದಾಪೂರ ಗ್ರಾಮದ ಅಥ್ಲೇಟಿಕ್ಸ್ ಶ್ರೀಶೈಲಗೆ ರೂ.2,75,000-00, ಬೇವಿನಮಟ್ಟಿಯ ಕುಸ್ತಿಪಟುಗಳಾದ ರವಿ ಕೆಂಪಣ್ಣವರಗೆ ರೂ.1,25,000-00, ರ್ಜುನ ಹಲಕುರ್ಕಿಗೆ ರೂ.20 ಲಕ್ಷ ಪ್ರೋತ್ಸಾಹಧನ ನೀಡಲಾಗಿದೆ. ಪರಿಶಿಷ್ಟ ಪಂಗಡದ ಸಂಸ್ಥೆಯಾದ ಬದಾಮಿಯ ಏಕಲವ್ಯ ಎಸ್.ಟಿ.ಗ್ರಾಮೀಣ ಅಭಿವೃದ್ದಿ ಹಾಗೂ ಶಿಕ್ಷಣ ಸಂಸ್ಥೆಗೆ 2 ಲಕ್ಷ ರೂ. ಜಿಮ್ ಒದಗಿಸುವ ಸಲುವಾಗಿ ಪ್ರೋತ್ಸಾಹಧನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.