ಬಂಡಿಗಣಿ ಮಠದ ದಾನಯ್ಯಾ ಸ್ವಾಮಿಜಿಯನ್ನು ಬಂದಿಸುವಂತೆ ಆಗ್ರಹ

ಬಂಡಿಗಣಿ ಮಠದ ದಾನಯ್ಯಾ ಸ್ವಾಮಿಜಿಯನ್ನು ಬಂದಿಸುವಂತೆ ಆಗ್ರಹ

 ರಬಕವಿ-ಬನಹಟ್ಟಿ, ನ.13: - ಸಮಿಪದ ಬಂಡಿಗಣಿ ಗ್ರಾಮದ ಹತ್ತಿರ ಕೆಲವು ತಿಂಗಳ ಹಿಂದೆ ಚಿಕ್ಕಯ್ಯಾ ದಾನಯ್ಯಾ ಮಠದ ಇತನನ್ನು ಕೊಲೆ ಮಾಡಲಾಗಿತ್ತು. ಇದಕ್ಕೆ ಸಂಭಂದಿಸಿದ ಪ್ರಕರಣವು ಬನಹಟ್ಟಿ ಪೋಲೀಸ್ ಠಾಣೆಯಲ್ಲಿ ಧಾಖÀಲಾಗಿದೆ. ಇದುವರೆಗೆ ಕೊಲೆ ಮಾಡಿದ ನಿಜವಾದ ಆರೋಪಿಗಳನ್ನು ಬಿಟ್ಟು ಬೇರೆ ರೀತಿಯಲ್ಲಿ ತನಿಖೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿ ಬಂಡಿಗಣಿ ಗ್ರಾಮದ ಚಿಕಯ್ಯಾ ಮಠದ ಕುಂಟುಂಬಸ್ಥರು ಭಕ್ತರೊಂದಿಗೆ ಸೇರಿ ಅಂಬೇಡಕರ್ ಸೇನೆ ಮತ್ತು ಕರ್ನಾಟಕ ಯುವ ರಕ್ಷಣಾ ಸೈನ್ಯೆದ ಜೊತೆಯಲ್ಲಿ ನೂರಾರು ಸಂಖ್ಯೆಯಲ್ಲಿ ಕೂಡಿ  ಕೊಲೆಯಾದ ಚಿಕ್ಕಯ್ಯಾ ಮಠದ ಬಾವಚಿತ್ರದೊಂದಿಗೆ ಬನಹಟ್ಟಿ ಬಸ್ ನೀಲ್ದಾಣದಿಂದ ಪೋಲೀಸ್ ಠಾಣೆಯವರೆಗೆ ನ್ಯಾಯಕ್ಕಾ ಪ್ರತಿಭಟಿಸಿ ಬನಹಟ್ಟಿ ಪೋಲೀಸ್ ಠಾಣಾ ಸಿ,ಪಿ,ಐ ಮಂಟೂರ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿದರು.
 ಇದೆ ಸಂದರ್ಭದಲ್ಲಿ ಮಾದ್ಯಮದ ಜೊತೆ ಮಾತನಾಡಿದ ಚಿಕ್ಕಯನ ತಾಯಿ ತನ್ನ ಗಂಡನಿಂದಲೆ ಈ ಕೃತ್ಯದ ಆರೋಪ ನಡೇದಿದೆ, ಇದಕ್ಕೆ ಕೂಡಲೆ ಬಂಡಿಗಣಿ ಮಠದ ದಾನಯ್ಯಾ ಮಠದ ಮತ್ತು ಕೊಲೆಗೆ ಬೆಂಬಲಿಸಿದ ಸುಮಂಗಲಾ ಪಾಟೀಲಳನ್ನು ಬಂದಿಸಬೇಕು ಎಂದು ತಿಳಿಸಿದರು. 
ಕೊಲೇಗೆ ಸಂಭಂದಿಸಿದ ಮುಖ್ಯ ಆರೊಪಿಗಳನ್ನು ಬಂದಿಸದಿದ್ದರೆ ಬೆಳಗಾವಿ ಚಳಿಗಾಳ ಅಧಿವೇಶನದಲ್ಲಿ ಪ್ರವೇಶಿಸಿ ನ್ಯಾಯಕ್ಕಾಗಿ ಹೋರಾಟವನ್ನು ನಡೇಸಲಾಗುವುದು ಎಂದು ಕರ್ನಾಟಕ ಯುವ ರಕ್ಷಣಾ ಸೈನ್ಯದ ರಾಜಾಧ್ಯಕ್ಷ ಪ್ರಭಾಕರ ಗಗರಿ. ಮತ್ತು ಅಂಬೇಡಕರ್ ಸೇನೆಯ+ ಬಾಗಲಕೋಟ ಜಿಲ್ಲಾ ಆಧ್ಯಕ್ಷ ಯಮನಪ್ಪ ಗುಣದಾಳ ಈ ಸಂದರ್ಭದಲ್ಲಿ ಆಗ್ರಹಿಸಿದರು.