ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ದತ್ತಿ ಉಪನ್ಯಾಸ 

ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ದತ್ತಿ ಉಪನ್ಯಾಸ 

ವಿಜಯಪುರ,ಅ.10: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಜ್ಞಾನಶಕ್ತಿ ಆವರಣದ ಡಾ.ಬಿ.ಆರ್. ಅಂಬೇಡ್ಕರ ಭವನದಲ್ಲಿ ಅಹಲ್ಯಾ ಸ್ತಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪಿತೃ ಪ್ರಧಾನತೆ ವಿಷಯದ ಕುರಿತು ಯಶೋಧರಮ್ಮ ದಾಸಪ್ಪ ದತ್ತಿ ಉಪನ್ಯಾಸದಲ್ಲಿ ಅವರು ತಮ್ಮ ವಿಚಾರ ಮಂಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಿಳಾ ವಿವಿ ಕುಲಪತಿ ಪ್ರೊ.ಸಬಿಹಾ, ವಿದ್ಯಾರ್ಥಿಗಳ ವಿಭಿನ್ನ ಆಲೋಚನೆ ಕುರಿತ ಚಟುವಟಿಕೆಗಳನ್ನು ವಿಸ್ತರಿಸಿಗೊಳ್ಳಲು ಇಂತಹ ಉಪನ್ಯಾಸ ಮುಖ್ಯ. ಪುಸ್ತಕ ಕೇವಲ ಬರಹವಾಗದೆ ಬದುಕಿನ ಕ್ರಮ, ನೈತಿಕ ಮೌಲ್ಯ, ಜೀವನ ಶೈಲಿಯಲ್ಲಿ ಪಸರಿಸಬೇಕು. ಮಾಹಿತಿ ಬೇರೆ ಬೇರೆ ಕಡೆಯಿಂದ ಬರುತ್ತದೆ ಆದರೆ ಮೂಲ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಶ್ನಿಸುವ ಮೂಲಕ ಅನುಮಾನಗಳನ್ನು ಅರ್ಥೈಹಿಸಿಕೊಂಡು ಸೂಕ್ತ ಪರಿಹಾರ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪಿತೃ ಪ್ರಧಾನತೆ, ಸಮಾಜ, ಮಹಿಳೆ ಕುರಿತು ಸಂವಾದ ನಡೆಯಿತು. ಜಾನಪದ ಕವಿ ಸಿದ್ದಪ್ಪ ಬಿಳಗಿ ಹಾಡುಗಳನ್ನು ಹಾಡಿದರು. ವಿವಿಧ ನಿಖಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಹಲ್ಯಾ ಸ್ತಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥೆ ಪ್ರೊ. ಆರ್. ಸುನಂದಮ್ಮ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಶೋಧನಾ ವಿದ್ಯಾರ್ಥಿನಿ ಗೀತಾ ಪ್ರಾರ್ಥಿಸಿದರು. ಡಾ.ಭಾಗ್ಯಶ್ರೀ ದೊಡ್ಡಮನಿ ಪರಿಚಯಿಸಿದರು. ಸಂಶೋಧನಾ ವಿದ್ಯಾರ್ಥಿನಿ ಮಂಜುಳಾ ಸಂಗನಾಳ ವಂದಿಸಿದರು. ಡಾ.ಸುರೇಖಾ ರಾಠೋಡ ನಿರೂಪಿಸಿದರು.