ನೇಕಾರರ ವಸತಿ ಮೇಲಿನ ಸಾಲ ಬಡ್ಡಿ ಮನ್ನಾ ಹಕ್ಕುಪತ್ರ ವಿತರಣೆ 

ನೇಕಾರರ ವಸತಿ ಮೇಲಿನ ಸಾಲ ಬಡ್ಡಿ ಮನ್ನಾ ಹಕ್ಕುಪತ್ರ ವಿತರಣೆ 

ಬಾಗಲಕೋಟೆ, ಡಿ.5 : ಜಿಲ್ಲಾ ಪಂಚಾಯತ, ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಡಿಸೆಂಬರ 6 ರಂದು ಬೆಳಿಗ್ಗೆ 11 ಗಂಟೆಗೆ ನೇಕಾರರ ವಿವಿಧ ವಸತಿ ವ ಕಾರ್ಯಾಗಾರ ಯೋಜನೆಯಡಿ ನೀಡಿದ ಸಾಲ ಮತ್ತು ಬಡ್ಡಿ ಮನ್ನಾ ಪ್ರಮಾಣ ಪತ್ರ ವಿತರಿಸುವ ಕಾರ್ಯಕ್ರಮ ಹಾಗೂ ನೂತನ ಜವಳಿ ನೀತಿ ಯೋಜನೆಯಡಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. 
    ಇಲಕಲ್ಲಿನ ಎಸ್.ಆರ್.ಕಂಠಿ ವೃತ್ತದಲ್ಲಿ ಜರಗುವ ಕಾರ್ಯಕ್ರಮವನ್ನು ಜವಳಿ ಹಾಗೂ ಮುಜರಾಯಿ ಸಚಿವರಾದ ರುದ್ರಪ್ಪ ಲಮಾಣಿ ಉದ್ಘಾಟಿಸುವರು. ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ.ತಿಮ್ಮಾಪೂರ, ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ವಿಜಯಾನಂದ ಕಾಶಪ್ಪನವರ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಉಮಾಶ್ರೀ, ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ, ಸಂಸದ ಪಿ.ಸಿ.ಗದ್ದಿಗೌಡರ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಇತರೆ ಗಣ್ಯಮಾನ್ಯರು ಆಗಮಿಸಲಿದ್ದಾರೆ.
    ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ, ಕೈಮಗ್ಗ ಮತ್ತು ಜವಳಿ ಇಲಾಖೆಯ ಅಧಿಕ ನಿರ್ದೇಶಕ, ಜಿ.ಪಂ ಸಿಇಓ ವಿಕಾಸ ಸುರಳಕರ, ಎಸ್‍ಪಿ ಸಿ.ಬಿ.ರಿಷ್ಯಂತ ಆಗಮಿಸಲಿದ್ದಾರೆ