ಪರಿವರ್ತನಾ ವೇದಿಕೆಯಿಂದ ಸಂಭ್ರಮಾಚರಣೆ

ಪರಿವರ್ತನಾ ವೇದಿಕೆಯಿಂದ ಸಂಭ್ರಮಾಚರಣೆ

ವಿಜಯಪುರ,ಡಿ.6: ಅಯೋಧ್ಯೆಯಲ್ಲಿ ಕಳಂಕಿತ ಕಟ್ಟಡ ಧ್ವಂಸಗೊಂಡ ಇಪ್ಪತ್ತೈದನೇಯ ವರ್ಷಾಚರಣೆಯನ್ನು ವಿಜಯಪುರ ಪರಿವರ್ತನ ವೇದಿಕೆÀ ಬೆಳಿಗ್ಗೆ 9-30 ಘಂಟೆಗೆ ಸಿಹಿ ಹಂಚುವುದರ ಮೂಲಕ ಆಚರಿಸಿತು. 
ಈ ದಿನ ಹಿಂದುಗಳಿಗೆ ಶೌರ್ಯದ/ಸ್ವಾಭಿಮಾನದ ದಿನ ಅಂತ ತಿಳಿಸಿ ನಗರದ ಶ್ರೀರಾಮ ಮಂದಿರದಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಪೂಜೆ ಸಲ್ಲಿಸಿ ಭಜನೆ ಹೇಳಿ ಆದಷ್ಟು ಶೀಘ್ರದಲ್ಲಿ ಶ್ರೀರಾಮ ಮಂದಿರವನ್ನು ಅಯೋಧ್ಯೆಯಲ್ಲಿ ಕಟ್ಟುವ  ಸಂಕಲ್ಪ ಮಾಡಿತು.
ಪರಿವರ್ತನ ವೇದಿಕೆಯ ಅದ್ಯಕ್ಷ ಚಂದ್ರಶೇಖರ ಕವಟಗಿ ಸಮಾವೇಶಗೊಂಡ ತರುಣರನ್ನು ಉದ್ದೇಶಿಸಿ ಮಾತನಾಡಿ, ಭಾರತಕ್ಕೆ 1525 ರಲ್ಲಿ ಬಾಬರ ಬಂದು ಅಯೋಧ್ಯೆಯಲ್ಲಿ ಇದ್ದ ರಾಮ ಮಂದಿರವನ್ನು ಕೆಡವಿ ಬಾಬರಿ ಮಸೀದಿಯನ್ನು 1528ರಲ್ಲಿ ನಿರ್ಮಿಸಿದ. ಅಂದಿನಿಂದ ಇಂದಿನವರೆಗೆ ಕಳಂಕಿತವಾದ ಬಾಬರಿ ಕಟ್ಟಡವನ್ನು ತೆರವುಗೊಳಿಸಲು ರಾಜಮಹಾರಾಜರು ಅನೇಕ ಹಿಂದು ವೀರ ತರುಣರು ಹೋರಾಟ ಮಾಡುತ್ತ ಬಂದು 1992 ಡಿಸೆಂಬರ್ 6ರಂದು ಲಕ್ಷಾವಧಿ ಕಾರ್ಯಕರ್ತರ ಆಕ್ರೋಶ ಮತ್ತು ಸ್ವಾಭಿಮಾನವನ್ನು ಕೆರಳಿಸಿ ಕಳಂಕಿತವಾಗಿರತಕ್ಕಂತಹ ಬಾಬರಿ ಕಟ್ಟಡವನ್ನು ಧ್ವಂಸಗೊಳಿಸಿದರು. ಈ ಸಂದರ್ಭದಲ್ಲಿ ಅಯೋಧ್ಯೆಯ ನೂರಾರು ಕಾರ್ಯಕರ್ತರು ಸಾವನ್ನಪ್ಪಿದರು. ಸಾವಿರಾರು ಜನರು ಗಾಯಗೊಂಡರು. ಸಾವನ್ನಪ್ಪಿದವರ ಮನೆಯಿಂದ ಸ್ವಾಭಿಮಾನದ ಮಾತುಗಳು ತಮ್ಮ ಮಗ ಹುತಾತ್ಮನಾದ, ವೀರಸ್ವರ್ಗವನ್ನೇರಿದ ಎಂದು ಹೇಳಿಕೆಗಳು ಅಯೋಧ್ಯೆ ಮನೆ ಮನೆಯಿಂದ ಬಂತು ಎಂದು ಅಯೋಧ್ಯೆಯ ಹೋರಾಟದ ಇತಿಹಾಸವನ್ನು ನೆನಪಿಸಿಕೊಂಡರು.
ಇಂದು ನಾವು ಅಯೋಧ್ಯೆÉಯಲ್ಲಿ ರಾಮ ಮಂದಿರ ನಿರ್ಮಿಸಲು ಯಾವುದೇ ತ್ಯಾಗ ಬಲಿದಾನಕ್ಕೂ ಸಿದ್ಧರಾಗಬೇಕೆಂದು, ಮರ್ಯಾದಾ ಪುರುಷೋತ್ತಮ ಶ್ರೀರಾಮ ಎಲ್ಲರಿಗೂ ಆದರ್ಶಪ್ರಾಯವಾಗಿದ್ದು ಅಯೋಧ್ಯೆಯಲ್ಲಿರುವ ಶ್ರೀರಾಮ ಜನ್ಮ ಭೂಮಿ ಎಲ್ಲರಿಗೂ ಪುಣ್ಯ ಕ್ಷೇತ್ರ, ಅದು ಇಂದು ಕಳಂಕಿತವಾಗಿದೆ, ಅದನ್ನು ತೆರವುಗೊಳಿಸಿ ಹಿಂದುಗಳಿಗೆ ಒಪ್ಪಿಸಬೇಕು ಇಲ್ಲವಾದಲ್ಲಿ ತರುಣರ ತಾಳ್ಮೆಯನ್ನು ಪರೀಕ್ಷಿಸಬಾರದೆಂದು ಶರಣು ಸಬರದ ಆಗ್ರಹಿಸಿದರು. ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ತಿನ ಸುನೀಲ ಭೈರೊಡಗಿ, ಬಜರಂಗ ದಳದ ಪ್ರವೀಣ ಹೌದೆ, ಚಿದಾನಂದ ಚಲವಾದಿ, ಬಸವರಾಜ ಬೈಚಬಾಳ, ನ್ಯಾಯವಾದಿ ಸಂಗಮೇಶ ಹೌದೆ, ವಿಜಯಕುಮಾರ ಕುಡಿಗನೂರ, ಶರಣು ಕುಂಬಾರ, ದಿಲೀಪ ಚಿಣಗಿ, ಸಿದ್ಧರಾಮ ಕರಲಗಿ, ಮಂಜು ಮಲ್ಲಾಡಿ, ಗುರು ಓಕಳಿ, ಮಹಾದೇವ ದೊಡ್ಡಮನಿ, ಚೇತನ, ಸಂತೋಷ ವೆಂಕಪ್ಪಗೋಳ, ಹಾಗು ನೂರಾರು ಯುವಕರು ಪಾಲ್ಗೊಂಡಿದ್ದರು.