ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ 12 ಬೆಂಗಳೂರಿಗೆ ಚಲೋ ಕರೆ

ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ 12 ಬೆಂಗಳೂರಿಗೆ ಚಲೋ ಕರೆ

ವಿಜಯಪುರ ,ಜೂ.11 :ವಿಜಯಪುರ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ರಾಜ್ಯ ಸಮಿತಿ ಬೆಂಗಳೂರು ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ 12 ನೇ ತಾರೀಖಿಗೆ ಬೆಂಗಳೂರಿಗೆ ಚಲೋ ಅಂತ ಕರೆ ನೀಡಿದ್ದರು. 
ಮುಖ್ಯಮಂತ್ರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ನೌಕರರ ಸಂಘದ ರಾಜ್ಯಾದ್ಯಕ್ಷ ಮಾರುತಿ ಮಾನ್ಪಡೆ ಹಾಗೂ ಪ್ರಧಾನ ಕಾರ್ಯದರ್ಶಿ ಎಂ. ಬಿ. ನಾಡಗೌಡ ಇನ್ನಿತರ ಪದಾದಿಕಾರಿಗಳಿಗೆ ಮಾತುಕತೆಗೆ ಕರೆದಿದ್ದರು.
ಚರ್ಚೆಯಾಗಿ 16-6-2017 ರಿಂದ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಹಾಗೂ ನೌಕರರ ಸಂಘದ ಮುಖಂಡರಿಂದ ಸಭೆಗಳಲ್ಲಿ ಬೇಡಿಕೆಗಳ ಚರ್ಚಿಯಾಗಿ ಅಂತಿಮವಾಗಿ ದಿನಾಂಕ : 28-6-2017 ರಿಂದ ಮುಖ್ಯಮಂತ್ರಿಗಳು ಸಭೆ ಕರೆದು ನಿಮ್ಮ ಬೇಡಿಕೆಗಳ ಈಡೇರಿಸುತ್ತೇನೆ ಎಂದು ಆಶ್ವಾಸನೆ ಕೊಟ್ಟಿದ್ದರಿಂದ ದಿನಾಂಕ 12-6-2017 ಬೆಂಗಳೂರು ಚಲೋ ಇದ್ದು ತಾತ್ಕಾಲಿಕ ತಡೆ ಹಿಡಿಯಲಾಗಿದೆ. ವಿಜಯಪುರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಬ್ಬಂಧಿ ಬೆಂಗಳೂರಿಗೆ ಹೋಗುವುದು ಮುಂದೂಡಲಾಗಿದೆ ಎಂದು ಭೀಮಶಿ ಕಲಾದಗಿ ಕರ್ನಾಟಕ ರಾಜ್ಯದ ಉಪಾಧ್ಯಕ್ಷರು, ಅಣ್ಣಾರಾಯ ಈಳಗೇರ, ರಂಗಪ್ಪ ದಳವಾಯಿ, ಸಂಗಪ್ಪ ಸೀತಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.