ಕೃಷ್ಣಾ ಮೇಲ್ದಂಡೆ 3 ಹಂತ ಯೋಜನೆಗೆ ಸಚಿವ ಸಂಪುಟ ಅನುಮೋದನೆ

ಕೃಷ್ಣಾ ಮೇಲ್ದಂಡೆ 3 ಹಂತ ಯೋಜನೆಗೆ ಸಚಿವ ಸಂಪುಟ ಅನುಮೋದನೆ

ಬೆಂಗಳೂರು (ಸೆ.27): ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ ಯೋಜನೆಯ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ. 51 ಸಾವಿರದ 148 ಕೋಟಿ ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಬರಗಾಲವನ್ನು ಎದುರಿಸುತ್ತಿರುವ ಉತ್ತರ ಕರ್ನಾಟಕಕ್ಕೆ ಇದು  ನೀರಾವರಿ ದೃಷ್ಟಿಯಿಂದ ಮಹತ್ವದ ನಿರ್ಧಾರವಾಗಿದೆ. ಇದರಿಂದ 6.19 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ ಎಂದು ಎಂ ಬಿ ಪಾಟೀಲ್ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಕಾವೇರಿ ವಿವಾದದ ಬಗ್ಗೆ ಮಾತನಾಡುತ್ತಾ, ಕಾವೇರಿ ವಿವಾದದಲ್ಲಿ ನಮ್ಮ ವಾದ ಮುಕ್ತಾಯವಾಗಿದೆ. ಸುಪ್ರೀಂ ಕೋರ್ಟ್ 2 ವಾರ ಅವಕಾಶ ಕೊಟ್ಟಿದೆ.  ಲಿಖಿತ ವರದಿಯನ್ನು ಸಲ್ಲಿಸಲು ಮೂರು ರಾಜ್ಯಗಳಿಗೂ ಅವಕಾಶ ನೀಡಿದೆ.  ನಾವು ಒಂಬತ್ತು ವಿಚಾರಗಳ ಬಗ್ಗೆ ಸಮಗ್ರವಾದ ನೋಟ್ ಸಲ್ಲಿಸುತ್ತೇವೆ. ನೀರು ನಿರ್ವಹಣೆ ಮಂಡಳಿ ನೇಮಕ ವಿಚಾರವಾಗಿ  ಕೇಂದ್ರ ಸರ್ಕಾರ ಈಗಾಗಲೇ ಅಫಿಡವಿಟ್ ಸಲ್ಲಿಸಿದೆ. ನೀರು ನಿರ್ವಹಣಾ ಮಂಡಳಿಯ ನೇಮಕಕ್ಕೆ ನಮ್ಮ ವಿರೋಧವಿದೆ ಎಂದು ಪಾಟೀಲ್ ತಿಳಿಸಿದ್ದಾರೆ.