ಕಟ್ಟಡ ಕಾರ್ಮಿಕರ ಗಮನಕ್ಕೆ

ಕಟ್ಟಡ ಕಾರ್ಮಿಕರ ಗಮನಕ್ಕೆ

ಬಾಗಲಕೋಟೆ, ಡಿ. 06: ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕಾರ್ಮಿಕ ಇಲಾಖೆಯ ಭಾಗವಾಗಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಸುಮಾರು 12 ಹಣಕಾಸಿನ ಸೌಲಭ್ಯಗಳನ್ನು 2008-09 ರಿಂದ ಕಟ್ಟಡ ಕಾರ್ಮಿಕರನ್ನು ಫಲಾನುಭವಿಯಾಗಿ ನೋಂದಣಿ ಮಾಡುಕೊಳ್ಳುತ್ತಾ ಬಂದಿದ್ದು, ಈ ದಿಶೆಯಲ್ಲಿ ನೋಂದಣಿ ಪಡೆದುಕೊಳ್ಳುವ ಮತ್ತು ಪಡೆದುಕೊಂಡಿರುವ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಲು ನೋಂದಣಿಗೆ ಪೂರಕವಾದ ದಾಖಲೆಗಳನ್ನು ಸಲ್ಲಿಸುವಾಗ ಒಂದು ವೇಳೆ ತಪ್ಪು ಮಾಹಿತಿ, ದಾಖಲೆಗಳನ್ನು ಸಲ್ಲಿಸಿ ಈಗಾಗಲೇ ಫಲಾನುಭವಿಗಳಾದ ಬಾಗಲಕೋಟ, ಬೀಳಗಿ ಹಾಗೂ ಹುನಗುಂದ ತಾಲೂಕಾ ಫಲಾನುಭವಿಗಳ ನೋಂದಣಿಯನ್ನು ರದ್ದುಪಡಿಸುವುದಾಗಿ ಕಾರ್ಮಿಕ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.